ಪಲ್ಲವಿ ಕೋಪವೇತಕೆ ಮಾನಿನಿ? ಹುಸಿಮುನಿಸ ನನ್ನಲಿ ನೀಗು ನೀ! ೧ ಜೀವನವೆಂಬುದು ಜೀವನ ಕೈಲಿಲ್ಲ; ನಶ್ವರವಾಗಿದೆ ವಿಶ್ವದಲಿ ಇ೦ದೋ ನಾಳೆಯೋ ಎಂಬುದು ತಿಳಿದಿಲ್ಲ ಬಾಳ್‌ಗುಳ್ಳೆ ಸಿಡಿವುದು ದಿಟವಿಲ್ಲಿ ೨ ಹೀಗಿರಲೇಕಾಗಿ ನಮ್ಮಿಬ್ಬರೆದೆಯಿದು ಏಕತೆಯನು ಬಿ...
ಇಂದು ಬರುವಳು ನನ್ನ ಮನದನ್ನೆ, ಮಾನಸಕೆ ಸಂತೋಷ ಸಂಭ್ರಮೋತ್ಸಾಹ ಸುರಿಸಿ, ಒ೦ದು ತಿ೦ಗಳಗಾಧ ವಿರಹ ಸಾಗರವನ್ನು ದಾಟಿಪಳು ಸಗ್ಗದೀವಿಯನೊದವಿಸಿ ಎಲ್ಲಿ ನೋಡಿದರಲ್ಲಿ ನಲವಿನೈಸಿರಿಯೇರಿ, ಒಲವಿನೊಸಗೆಯ ಕುಣಿತ ಕಣ್ಣ ಮುಂದೆ:- ಉದಯ ಭಾಸ್ಕರನಿಂದು ರಾಗ ರಕ್...
೧ ಸ೦ಜೆಯಾಯಿತು; ರಾಗವಾಗಸವನಾವರಿಸಿ ರ೦ಜಿಸಿದ ತೆರದಲ್ಲಿ, ನನ್ನೆದೆಯಲಿ ಅನುರಾಗವಿಡಿದಿಹುದು ತಿಳಿಯಲಾರೆಯ ನೀನು? ಮನವು ತವಕಿಸುತಿಹುದು ಬರಲಾರೆಯ? ೨ ನಿಮಿಷಗಳು ನಿಮಿಷಗಳು ಕಾಲನಾಳದೊಳಿಳಿದು, ಸಮವಾಗಿ ಸರಿಯುತಿವೆ ನಿನ್ನ ಸೇರುವೆಯು ಸಮನಿಸದೆ ಸಮಯವ...
೧ ಸತ್ತವರ ಬದುಕಿಸಲು ನಾವರಿಯದಿರುವಾಗ ಜೀವಿಪರ ಕೈಯಾರೆ ಕೊಲ್ಲುವುದು ತಪ್ಪು ವಿಶ್ವದ ಸಮಸ್ತ ಮಾನವರೊ೦ದೆ ಜಾತಿಯಿಹ- ರಂತರದ ಕಲ್ಪನೆಯ, ಬರೆ ಮೌಢ್ಯ-ಬೆಪ್ಪು! ೨ ದಯೆಯೆ ಧರ್ಮದ ಮೂಲ, ಹಿಂಸೆಯೆಂದರೆ ಪಾಪ ಇದ್ದಷ್ಟು ಸಂತೃಪ್ತಿ, ಮಾನವ ಪ್ರೇಮ- ಇವೆ ಸತ...
೧ ಬಳಿಯ ಮರದ ತಲದಿ ನೀಲ ಕಾಯ ಕೃಷ್ಣನು ಕೊಳಲ ಕರದಿ ಪಿಡಿದು ನಿಂತು ಸುತ್ತ ನೋಳ್ಪನು ಪಶ್ಚಿಮದ ದಿಗ೦ತದಲ್ಲಿ, ರವಿಯು ಕಡಲ ನೀರಿನಲ್ಲಿ ತನ್ನ ನೆಳಲನಿಣಿಕೆ ನೋಡಿ ಇಳಿಯುತಿದ್ದನು ೨ ರವಿಯು, ತನ್ನ ಶುದ್ಧ ವಾದ ಮಿಸುನಿ ಬಣ್ಣದ ಕದಿರಿನಿಂದ ಹರಿಯ ಮೈಯೊಳ...





