ಹನಿಗವನ ಗುಟ್ಟು ರಟ್ಟು ಲತಾ ಗುತ್ತಿ September 6, 2016February 8, 2016 ಮುಟ್ಟಾದ ಹುಡುಗಿ ಗುಟ್ಟಾಗಿಯೇ ಇದ್ದಳು ಚೈತ್ರಾ, ವಸಂತ ಬಂದನೇ ಎಂದರೆ ಬೆಚ್ಚಿದ್ದೇಕೆ, ಕೆನ್ನೆ ಕೆಂಪೇರಿದ್ದೇಕೆ? ***** Read More
ಹನಿಗವನ ಸಂಚು ಲತಾ ಗುತ್ತಿ August 30, 2016February 8, 2016 ಕಟುಕರನೂ ಕರಗಿಸುವ ಹೂ ನಗು, ಹಾಲು ಕೆನ್ನೆ ಪುಟ್ಟ ಹೆಜ್ಜೆಯ ಬೆಳದಿಂಗಳ ಮಗು: ನಕತ್ರದ ಮಿಂಚು, ಸಾಕ್ಷಾತ್ ದೇವರ ಸಂಚು. ***** Read More
ಹನಿಗವನ ನಿದ್ದೆ ಲತಾ ಗುತ್ತಿ August 23, 2016August 23, 2016 ವರ್ಷಂ ಪ್ರತಿ ಮೆರೆದು ಮೆರೆದು ಸುಸ್ತಾದ ಚಂದ್ರ ಚುಕ್ಕೆಯರು ಮಳೆಗಾಲದಲ್ಲಿ ಮೋಡಿನ ಕರ್ಟನ್ ಎಳೆದು ಬೆಚ್ಚಗೆ ಮಲಗಿಬಿಡುತ್ತಾರೆ ಕುಂಭಕರ್ಣನಂತೆ ***** Read More
ಹನಿಗವನ ಚಂದ್ರ ಲತಾ ಗುತ್ತಿ August 16, 2016February 8, 2016 ಎಂಟಾನೆಂಟು ದಿನಗಳವರೆಗೆ ಎಡಬಿಡದೆ ಕಿಟಕಿ ಒದ್ದು ಕಾಚು ಒಡೆದು ನನ್ನ ತಲೆದಿಂಬಿಗೆ ಇಂಬಾಗಿ ನನ್ನ ರಂಗೇರಿಸುವವ. ***** Read More
ಹನಿಗವನ ಸೂರ್ಯ ಲತಾ ಗುತ್ತಿ August 9, 2016February 8, 2016 ನನ್ನ ಸಂಘರ್ಷಣೆಯ ಭಾವನೆಗಳಿಗೆ ಹುಲ್ಲು ಹಾಕಿ ಗಹಗಹಿಸಿ ನಗುವವ. ***** Read More
ಹನಿಗವನ ಮಳೆ ಲತಾ ಗುತ್ತಿ August 2, 2016February 8, 2016 ಮೋಡಿನ ಗರ್ಭಕ್ಕೆ ಸಿಡಿಲಿನ ಚೂರಿ ಇರಿದಿರಬೇಕು ಅದಕ್ಕೆಂದೇ ದಬ ದಬನೆ ನಿಸರ್ಗದ ನೆತ್ತರು ಬಿದ್ದು ಹಿಡಿತಕ್ಕೆ ಬರದೇ ಹರಿದೋಡುತ್ತಿದೆ. ***** Read More
ಹನಿಗವನ ಆಸೆ ಲತಾ ಗುತ್ತಿ July 26, 2016February 8, 2016 ಶ್ರಾವಣ ಕವಿಯಾಗಲು ಹೊರಟ ನಮ್ಮ ಕವಿಮಿತ್ರ ಇತ್ತೀಚೆಗೆ ಶ್ವಾನ ಕವಿಯಾಗಿ ಹೊರಬಿದ್ದ. ***** Read More
ಹನಿಗವನ ಜಾತ್ರೆ ಲತಾ ಗುತ್ತಿ July 19, 2016February 8, 2016 ಮಳೆಯ ಮರುದಿನ ಇರುವಗಳಿಗೆ ಜಾತ್ರೆಯೋ ಜಾತ್ರೆ ಸತ್ತ ಹುಳುಗಳ ತೇರು ಗೋಡೆಯ ಉದ್ದಗಲ ಎಳೆದೂ ಎಳೆದೂ ಹರಕೆ ತೀರಿಸಿ ಮರುದಿನ ಮಾಯವಾಗಿ ಬಿಡುತ್ತವೆ ***** Read More
ಹನಿಗವನ ದೇಶಪ್ರೇಮ ಲತಾ ಗುತ್ತಿ July 12, 2016February 8, 2016 ದೇಶಪ್ರೇಮ - ಕಾಗದದ ಮೇಲೆ ಚಿತ್ರ ಕೃತಕ ಧ್ವನಿಯ ಹಾಡು ಅಂಗಾಂಗ ಅಲುಗಾಡಿಸುವ ನೃತ್ಯಗಳಾಗದೇ ಧಮನಿ ಧಮನಿಗಳಲ್ಲಿ ಹರಿವ ಉಸಿರಾಗಬೇಕಲ್ಲವೆ? ***** Read More
ಹನಿಗವನ ದುಃಖ ಲತಾ ಗುತ್ತಿ July 5, 2016February 8, 2016 ಒಮ್ಮೊಮ್ಮೆ ಅಡುಗೆ ಮನೆ ಹೀಗೆಯೇ ಏನೋ: ಅಡುಗೆಯನ್ನೂ ಸುಡುತ್ತದೆ ಅಡುಗೆಯವಳ ಮನಸ್ಸನ್ನೂ ಸುಟ್ಟುಬಿಡುತ್ತದೆ. ***** Read More