Home / Kannada Poetry

Browsing Tag: Kannada Poetry

ನೀ ಮುದುಕಿಯಾಗಿ ಕೂದಲು ನರೆತು ಕಣ್ಣಲ್ಲಿ ನಿದ್ದೆ ತುಂಬಿರಲು, ಬೆಂಕಿಗೂಡಿನ ಬದಿಗೆ ಕುಳಿತು ಈ ಪುಸ್ತಕವ ಕೈಗೆತ್ತಿಕೊ. ಓದು ನಿಧಾನವಾಗಿ, ಪ್ರಾಯದ ದಿನಗಳಲ್ಲಿ ನಿನ್ನ ಕಣ್ಣಲ್ಲಿ ಹೊಮ್ಮುತ್ತಿದ್ದ ಮಧುರ ನೋಟ, ದಟ್ಟನೆ ನೆರಳ ಸ್ಮರಿಸು ಮನದಲ್ಲಿ. ಪ್...

ತಿತಿ ಮಾಡಿಸೋರ್‍ಗ್ ಏನ್ ಗೊತ್ತೈತೊ ಚೆಡ್ಡಿ ವೊಲಿಯೋ ಕೆಲಸ? ಓದ್ಸೊ ಐಗೋಳ್ ಕಟ್ಕೋಂತಾರ ಸೂಳೇ ಕಾಲೀನ್ ಗೊಲಸ? ೧ ಬೇವಾರ್‍ಸಿ! ನಿಂಗ್ ಏನ್ ಗೊತ್ತೈತೊ ಯೆಂಡ ಕುಡಿಯೊ ಬಾಬ್ತು? ಯೇಸರ್‍ಗತ್ತೇಗ್ ಆದಂಗೇನೆ ನಿಂಗೂ ವಯಸ್ಸ್ ದಬ್ತು! ೨ ಯೆಂಡ ಕುಡಿಯೋದ್ ...

ಒಂದಿದ್ದರೊಂದಿಲ್ಲ; ಇಂದಿಗೂ ಎರಡು ಹೊಂ- ದಿಲ್ಲ; ನಡೆದಿದೆ ಸೃಷ್ಟಿ; ಫಲವೀವ ಅಮೃತ ವೃ- ಷ್ಟಿಯ ಬಯಸಿ, ಕೊನರುತಿದೆ ಕಮರುತಿದೆ. ಎಲೆಯ ಪಸ- ರದಲಿ ಕಾಣದಿದೆ ಹೂ-ಹಣ್ಣು, ಪ್ರಥಮ ಪ್ರಾಯ- ದಲ್ಲಿ ನಾಚಿಗೆ ಮುಸುಗಿ ಸುಕುಮಾರ ಕುಸುಮಸಮ- ಸಿಂಗಾರವಡಗೆ, ಪು...

ದಾಯಿ ಹಾಲನೆ ನಂಬಿ ಬಾಯಾರಿ ಬಸವಳಿದು ತಾಯೆ ಎಂದರಚಲುಂ ಮಿಸುಕದಿರೆ ರಸನೆ, ನೀನೆಮ್ಮನರಸುತಯ್ತಂದು ತೊಡೆಯಲಿ ತಳೆದು ಮೊಲೆಯಿನಿಂತೆಮ್ಮ ಬಾಯ್ದುಂಬಿಸಲು ಸಸಿನೆ, ೪ ಧನ್ಯರಾವೆಮ! ದಾಯಿಯೂಡಿಸಿದ ಮಗು ಮುಂದು ತನ್ನ ತಾನರಿತೆದ್ದು ನಿಡುನಿಲ್ಲಲಹುದೇ? ರವಿ...

ಇದೋ ಎದ್ದೆ ನಾನೀಗಲೆ ಹೋಗುವೆ ಇನ್ನಿಸ್ ಫ್ರೀ ದ್ವೀಪಕ್ಕೆ ಕಟ್ಟುವೆನಲ್ಲಿ ಮಣ್ಣಿನದೊಂದು ಪುಟ್ಟ ಮನೆಯನ್ನು ವಾಸಕ್ಕೆ; ಚಪ್ಪರದವರೆಯ ಬಳ್ಳಿಮಾಡಗಳ, ಜೇನುಗೂಡಗಳ ಹಬ್ಬಿಸುವೆ ತುಂಬಿಯ ಗುಂಜಾರವದಲಿ ತುಂಬಿದ ಬಯಲಲ್ಲೊಬ್ಬನೆ ವಾಸಿಸುವೆ. ಶಾಂತಿ ಸಿಕ್ಕು...

ಬೆಳದಿಂಗಳ ರಾತ್ರೇಲಿ ಈಚೋರಿ ಬತ್ತಂದ್ರೆ ಈಚೆಂಡ ಚೆಲ್ಲಂಗೆ ನೆಪ್ಪಾಯ್ತದೆ. ಆಕಾಸದ್ ಚಂದ್ರನ್ನ ಪಡಕಾನೆ ದೀಪಕ್ಕೆ ವೋಲೀಸ್ದೆ ವೋಯ್ತಂದ್ರೆ ತಪ್ಪಾಯ್ತದೆ. ೧ ಕುಡದೋರು ಮತ್ಬಂದು ಬೀಳೋಹಂಗ್ ಬಿದ್ರೋವೆ ಮನೆಗೋಳು ಮರಗೋಳು ಬೀದೀಲೆಲ್ಲಾ. ಪಡಕಾನೆ ಜನದಂಗ...

ನೊಸಲು ನೊಸಲಿನಲಿರಿಸಿ ಸುಸಿಲಾಡುವವು ಹೂವು ಹೊಳೆ ನೀರ ಬಳಿಗೆ; ಪಡಿನೆಳಲನೆದೆಯೊಳಗಿರಿಸಿ ಮಧುರ ಸಲಿಲ ಸಲೀಲ ನಲಿದಾಡುವದು; ಚಿತ್ರ ರತಿಯ ನೋಡುತ ಚಿಕ್ಕೆ ಕಣ್ಚಿವುಟುವವು; ಮಂದ ಮಾರುತನು ಪಿಸುಗುಡುತಲಿಹನದರ ಸೌಸವದ ಸವಿಮಾತ; ಸಂಜೆ ಬಾಸಣಿಸಲಿದೆ ತಿಮಿ...

(ಹಾಡು) ಭಾರತ ಭಾಗ್ಯ ವಿಧಾತಾ ತಾತಾತಾ ಸ್ವರಾಜ್ಯಮೆಮಗೆ ದಾತಾ ತಾತಾತಾ ||ಪಲ್ಲ|| ಅನಾಧರ ನಾಥಾ ಪತಿತರ ನೇತಾ ಮದಾಂಧರ ಜೇತಾ ಪರತಂತ್ರರ ತ್ರಾತಾ ||೧|| ನೋಡೈ ನಿಮಿರೆಮೆಯೊಡೆಯಾ ನಮ್ಮ ತನುಮನ ಕ್ಷುಧೆಯಾ ನಗೆಯಮೃತದ ಜೀಯಾ ಕೇಳ್ನಿರಾಶೆಯ ಸೆಲೆಯಾ ||೨|...

ಅಲ್ಲಿ ಬೆಳಗುವ ರವಿಯೆ ಇಲ್ಲಿ ಬೆಳಗುವ ; ಹಗಲು ಬೇರೆ. ಆ ತಾರೆಗಳೆ ಇಲ್ಲೂ ಹೊಳೆವುವು ; ಇರುಳು ಬೇರೆ. ಅದೆ ಮಳೆಗಾಳಿ ಕೊರೆವ ಚಳಿ ಮರಿಬಿಸಿಲು; ಹದ ಬೇರೆ. ಒಂದೆ ಅನುಭವ, ಬೇರೆ ಮೈ ಹಲವು. ಉಂಡ ಮನಸಿನ ರಾಗ ಸುಖ ದುಃಖ ಧಗೆಯೆಲ್ಲ ಒಂದೆ ಇಡಿ ಲೋಕಕ್ಕೆ...

ದೊಡ್ಡೋನ್ಗ್ ಎಚ್ಗೆ ಸಂಬ್ಳಾಂತ್ ಅಂದ್ರೆ ಚಿಕ್ಕೋರ್ ಕೆಲ್ಸಕ್ ಕೋತ! ಆನೆ ಮೈನ ಬೆಳಸಬೇಕಂದ್ರೆ- ಆವ್ತಿ ಬಡಕಲ್ ವೋತ! ೧ ಗುಡಿಸಿಲ್ಗ್ ಉಲ್ಲು ಸಾಲ್ದಿದ್ರೂನೆ ಮಾಡೀಗ್ ಮಾಡಿ ಬಡ್ತಿ! ರೂಪಾಯ್ಗ್ ಒಂದ್ ಕಾಸ್ ಕಮ್ಮಿ ಬಂದ್ರೆ ಬಡವೊನ್ ಮನೇ ಜಡ್ತಿ! ೨ ನಾ...

1...8990919293...189

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...