೧ ಅಂದು ಮಾರುವ ಕಟ್ಟೆಯೊಳು ನಾನು ಗೊತ್ತುಗುರಿ- ಯಿಲ್ಲದೊಲು ತಿರುಗುತಿರೆ, ಕಂಡೆನಲ ನಾನೊಬ್ಬ ಮನುಜ ಮಾರುತಲಿಹುದ ರಾಸಿ ಒಣಕಲು ಕಬ್ಬ! ಗಾಣದೊಳು ಹಿಂಡಿದರು ಕಾಲೊಳೊತ್ತಿದರು ಕರಿ ರಸದ ಸುಳಿವಿಲ್ಲದಿಹ ಕಬ್ಬಿನಂದದ ಬೊಂಬು! ಭದ್ರಾವತಿಯಲಿರುವ ಆಲೆಮನೆಗಳ ತಂಡ ಕಾ ಚಣವೆ ಮನ ಹಾರಿ, ಬಿಸಿಯ ಬೆಲ್ಲದ ತುಂಡ ಚಪ್ಪರಿಸಿ...

ನಿಮ್ಮ ನಾಡಾವುದು ? ಮೈಸೂರು. ನಿಮ್ಮೂರದಾವುದು ? ಮೈಸೂರು. ಕನ್ನಡದ ಕಣ್ಣದು, ಮೈಸೂರು. ನಾಲುಮಡಿ ಕೃಷ್ಣನ ಮೈಸೂರು. ಅಲ್ಲೆಲ್ಲಿ ನೋಡಿದರು ಬಾನ ಕರೆಯಲಿ ಹದುಗಿ ಕಾರ ಮುಗಿಲಂತಿಹುವು ಬೆಟ್ಟ ಹಬ್ಬಿ ; ತೆರೆ ಎದ್ದು ಬಿದ್ದು ಬಹ ಬಯಲಲ್ಲಿ ಹಳ್ಳಿಗಳು, ...

ಕಾಡಿನ ಹಾದಿಯಲಿ ನಾನೊಬ್ಬನೆ ನಡೆವಾಗ ಆವರಿಸಿದ ಸುಗಂಧವೇ ನಿನ್ನ ಹೆಸರು ಯಾವ ಪುಷ್ಪ ಯಾವ ವೃಕ್ಷ ಯಾವ ವನದೇವಿ ಯಾವ ಗಿರಿಸಾನುಗಳ ಔಷಧಿಯೆ ನಿನ್ನ ಹೆಸರು ಸಂತೆಬೀದಿಗಳಲ್ಲಿ ಜನರ ನಡುವಿರುವಾಗ ಬೆಳುದಿಂಗಳಂತೆ ಬಂದ ಚೆಲುವೆ ನಿದ್ದೆ ಎಚ್ಚರಗಳಲಿ ಸ್ವಪ್...

ಪ್ರೀತಿಯಾ ಗೆಳೆಯಾ, ಈ ದಿನ ಶಿಕ್ಷಕರ ದಿನಾಚರಣೆ. ಎಷ್ಟೊಂದು ಮೃದು ಹಸ್ತಗಳು ತಬ್ಬಿದವು. ಚಾಕಲೇಟು ಹೂವು ಪೆನ್ನುಗಳು. ಕೆಂಪಗೆ ಬೆಳ್ಳಗೆ ಅಂಗೈ ಪದಕು, ಕೆಂಪು ಬಳೆಗಳು ನೀಲಿ ರಿಬ್ಬನ್‌ಗಳು. ಮತ್ತೊಂದು ಹಸ್ತದಲಿ ಜಿಬ್ಬಾದ ಚಾಕಲೇಟು. ಒಂದರ ಎಳೆಗಂಪಿ...

ಕಲ್ಲ ಕಡೆದು ಕೂರಿಸಿ ಹಾಲು ಮೊಸರು ತುಪ್ಪ ಸುರಿದು ಅಭಿಷೇಕ ಮಾಡಿದರೆ ಕಳೆದು ಹೋಗಬಲ್ಲುದೆ ಕಲ್ಲಿನೊಳಗಿನ ಕಿಚ್ಚು ಮೈಗೆ ತೊಡಿಸಿದರೆ ವಜ್ರ ವೈಡೂರ್‍ಯ ಮಣ ಆಭರಣ ಬದಲಾಗಬಲ್ಲುದೆ ಒಡಲೊಳಗೆ ಹುಟ್ಟಿ ಬಂದಂಥ ಕೆಚ್ಚು *****...

ಕರುಣೆಯಿಡಿ ನಿಮ್ಮ ಈ ಕರುಳ ಕುಡಿಯ ಕರುಳು ಹರಿಯ ಬೇಡಿ. ಹೆಣ್ಣೆಂದಾಕ್ಷಣಕ್ಕೆ ನಾನು ಕಸವಲ್ಲ ಜೀವಿ ಎಸೆದು ಕೈ ತೊಳೆದು ಕೊಳ್ಳಲು. ಹಸೆಗೆ ಏರಿಸುವ ಮೊದಲು ಪರಾಮರ್ಶಿಸಿ,- ಮನೆ, ಮನಸುಗಳ ಸೋಸಿ. ಅಸಂಗತ ತೀರ್ಮಾನ ಮಾಡಿ ಸಂಬಂಧದ ಅರ್ಥ ಕೆಡಿಸಬೇಡಿ. ಸಂ...

ಅರಳುತ್ತಿದ್ದ ಮೊಗ್ಗು ಮುದುಡಿ ಹೋಯಿತಲ್ಲ ಕಾಣುತಿದ್ದ ಕನಸು ಕರಗಿ ಹೋಯಿತಲ್ಲ /ಪ// ಪುಟ್ಟ ಬೆರಳುಗಳು ಬಿಡಿಸುತ್ತಿದ್ದ ಅಕ್ಷರಗಳ ರಂಗೋಲಿ ಅರವಿನ ಬಣ್ಣವ ಪಡೆಯುವ ಮೊದಲೆ ಕದಡಿ ಹೋಯಿತಿಲ್ಲಿ ಕದಡಿ ಹೋಯಿತಿಲ್ಲಿ – ತಾಳಿಯ ನೊಗದ ಭಾರದಲ್ಲಿ ಮು...

“ಹಾಗಿದ್ದರೆ, ಪಾಪವೆಂದರೇನು ಗುರುಗಳೇ?” ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!...

ಭಾರತ ಮಾತೆಯೇ ನಿನ್ನ ಕರುಳ ಕುಡಿಗಳು ನಿನ್ನದೇ ಮಾಂಸ ಹಂಚಿಕೊಂಡಿರುವ ತುಣುಕುಗಳನು ಬೆಂಕಿಗೆ ದೂಡಿ, ಸತಿಯಾಗಿಸುವದ ಕಂಡು ಸುಮ್ಮನೇಕಿರುವೆ? ಪತಿಸತ್ತರೆ ಸತಿ ಚಿತೆಯೇರಬೇಕು ಬದುಕಿರುವಾಗಲೇ ಬದುಕನ್ನು ಜಿವುಟಿ ಕರಕಾಗಿಸಿದ ಗಂಡು ಸತ್ತ ಮೇಲೂ ಅವಳ ಬೆ...

ಎಂಥ ಚೆಲುವ ನನ್ನ ಹುಡುಗ ಹೇಗೆ ಅದನು ಹೇಳಲಿ ಹೇಳಲಾರೆ ನಾನು ಹಾಗೆ ಅದೂ ಸುಮ್ಮ ಸುಮ್ಮನೆ ಅವನು ಕೊಟ್ಟುದೇನು ಮೈಯೆ ಮನವೆ ಒಲವೆ ಚೆಲುವೆ ಅಲ್ಲ ಅಲ್ಲ ಹೃದಯ ಹಿಗ್ಗಿ ಹರಿಯುವಂಥ ಬಲವೆ ಅದು ದೊರೆತೇ ನಾನು ಈಗ ಜಗವನ್ನೇ ಗೆಲ್ಲುವೆ. ಮಂಕು ಬಡಿದ ಮಸಿ ಹಿ...

ಪ್ರೀತಿ ನೆಲೆಯಲ್ಲೇನೊ ನಾವಿಬ್ಬರೂ ಒಂದೆ, ಆದರೂ ಅಂತಸ್ತಿನಲ್ಲಿ ಭಿನ್ನ ವಿಭಿನ್ನ : ನನಗೆ ಹತ್ತಿದ ಕಳಂಕವನೆಲ್ಲ ಅದಕೆಂದೆ ಒಬ್ಬನೇ ಹೊರುವೆ ಬಯಸದೆ ನಿನ್ನ ನೆರವನ್ನ ನಮ್ಮ ಬಾಳಿನಲ್ಲಿ ಅಂತರವೇನೆ ಇದ್ದರೂ ಏಕ ಬಗೆ ಗೌರವ ಪರಸ್ಪರರ ಪ್ರೀತಿಯಲಿ ; ಸವಿ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...