Home / ಕವನ / ಕವಿತೆ / ಭದ್ರಾವತಿಯನ್ನು ಬಿಟ್ಟಮೇಲೆ

ಭದ್ರಾವತಿಯನ್ನು ಬಿಟ್ಟಮೇಲೆ

೧
ಅಂದು ಮಾರುವ ಕಟ್ಟೆಯೊಳು ನಾನು ಗೊತ್ತುಗುರಿ-
ಯಿಲ್ಲದೊಲು ತಿರುಗುತಿರೆ, ಕಂಡೆನಲ ನಾನೊಬ್ಬ
ಮನುಜ ಮಾರುತಲಿಹುದ ರಾಸಿ ಒಣಕಲು ಕಬ್ಬ!
ಗಾಣದೊಳು ಹಿಂಡಿದರು ಕಾಲೊಳೊತ್ತಿದರು ಕರಿ
ರಸದ ಸುಳಿವಿಲ್ಲದಿಹ ಕಬ್ಬಿನಂದದ ಬೊಂಬು!
ಭದ್ರಾವತಿಯಲಿರುವ ಆಲೆಮನೆಗಳ ತಂಡ
ಕಾ ಚಣವೆ ಮನ ಹಾರಿ, ಬಿಸಿಯ ಬೆಲ್ಲದ ತುಂಡ
ಚಪ್ಪರಿಸಿ, ಗಾತ್ರದೊಳು ಕೊಡವನಣಕಿಪ ಚೊಂಬು
ತುಂಬಿಕೊಂಡಿಹ ಮಧುರ ರಸವನಾಗಲೆ ಈಂಟಿ
ಕೊಪ್ಪರಿಗೆಯೊಳು ಕುದಿವ ರಸದ ಮಡುವಿನ ಗಂಧ-
ವನು ಮೂಸಿ, ಹಿಂದಿರುಗಿತಾ ಚಣವೆ ಕನಸಿಂದ-
ರಸಹೀನಮಾದೊಡಂ ಸ್ಪಪ್ನಲೋಕಕೆ ದಾಂಟಿ
ಪೋಗಲನುಕೂಲಿಸುತ ರಸವುಕ್ಕಿಸಿದ ಇಕ್ಷು!
ನಾ ಋಣಿಯು! ಆ ಕನಸ ಮತ್ತೆ ಕಾಣದು ಚಕ್ಷು!
೨
ಮೇಲೆ ನಭವನನು ಭರದಿ ಕರಿಯ ದೆವ್ವದವೋಲು
ಕಾರ್ಮುಗಿಲು ದೆಸೆದೆಸೆಗು ಕೈ ಚಾಚಿ ತಬ್ಬುತಿದೆ.
ತಿರೆಯೊಳೋ ಎಲ್ಲಿ ನೋಡಿದರಲ್ಲಿ ಹಬ್ಬುತಿದೆ
ಕಾರಿರುಳು, ಮೇಲಿರುವ ಕಾರ್ಮುಗಿಲ ನೆರಳಿನೊಲು!
ಕಪ್ಪನೆಯ ಗಾಜಿನೊಳು ಕಂಡರೆಂತೋ ಅಂತೆ
ಗಿರಿ ಪಂಕ್ತಿ, ತರುರಾಜಿ, ಬರಿಯ ಕಪ್ಪನೆ ಕಾರಿ
ನಿಂತಿಹವು ಕಾಡಿಗೆಯ ಮುದ್ದೆಗಳವೊಲು ತೋರಿ!
ಕಾರ್ಮುಗಿಲ ಹುತ್ತದಿಂ ಬಂದಹಿಯೊ ಎಂಬಂತೆ
ಮಿಂಚಿರಲು, ಮೊದಲಾಯ್ತು ಮಳೆಯ ಹೊಡೆತವು ಹೊರಗೆ.
ಬಿರುಗಾಳಿ ಗಿರಿರಾಜರಿಬ್ಬರೊಳಸಂಚಿನೊಳು
ಆ ಜಳದ ತಿರೆಗುರುಳುತಿರುವನಹ! ಮಿಂಚಿನೊಳು
ಸ್ವರ್ಣತಂತುಗಳಂತೆ ಮಳೆಯ ಧಾರೆಯು ಮಿನುಗೆ!-
ಇಂತು ಮನ ಈವೂರ ಕುಟುಕು ಮಳೆಯನು ಕಂಡು
ನೆನೆಯುತಿದೆ ಭದ್ರಾವತಿಯ ಮಳೆಯ ಸೊಬಗುಂಡು!
*****
Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...