ಮರೆತೆ

ಬಾಳುವೆಯ ಗೂಡೊಳಗೆ ತತ್ತಿಯಿದನೆಂದು ಮೃತ್ಯು ತಾನಿಕ್ಕಿ ಮೆಯ್ಗರೆಯಿತೆನಗರಿವೆ? ಆಸೆಯಾ ಗರಿಗೆದರಿ ಬಯಲಲಲೆವಂದು ನಿನ್ನನಾಂ ಮರೆತೆ, ಮರೆತೆನ್ನ ತಿರಿತಿರಿವೆ! ೪ ಬಾಸೆಯಂ ಬೇಡಿ ನಾನರಚುವಂದೆನ್ನ ಕಯ್ಯೊಳಾರ್ಮರಸಿಟ್ಟರೀ ಗಿರಿಕೆಯನ್ನ? ನಾನರಿಯೆ, ಗುಲ್ಲನಿದನಾಡಿಸುತ ನಿನ್ನ ಮರೆತೆನೊಯ್ಯನೆ ಮರೆತೆ ಮನವಿಯನ್ನೆನ್ನ!...

ಆಯ್ದಯ್ದರನಿತಯ್ದುತಯ್ದಿತಾ ಕಾಲಂ

ಅಯ್ದಯ್ದರನಿತಯ್ದು ತಯ್ದಿತಾ ಕಾಲಂ ನಿನ್ನ ನಿನ್ನವರಂದು ನನಗಿತ್ತ ದಿನದಿಂ; ವಿಧಿ ನಿನ್ನ ತುಡುಕಲಿಂದೆನ್ನ ಬಾಳ್ತನದಿಂ ಕತ್ತಲಿಸಿತೊಡನೆ ಮುಂದಣ ಚಕ್ರವಾಲಂ! ೪ ನಿನಗಾದುದಿಲ್ಲ ನಾ, ನೀನೆ ನನಗಾದೆ- ನನ್ನ ಕೆಯ್ವಿಡಿದೆ ನೀನಳಲನನುಭವಿಸೆ! ನಿನ್ನ ಚೆಲುವಲಿ ಪಿಪಾಸೆಯನೆನ್ನ...

ಯುಗಾದಿಯ ನೆನಪು

ನಿನ್ನೆ ಹೆಸರಳಿದು ನೀರಾದುದಾ ಪ್ರಭವಂ ಜೀವನಪ್ಲವಮೆನ್ನ ಸಂಪ್ಲವಿಸಿ ನಿನ್ನ! ಇಂದೆನ್ನನೀಚಿಸುವ ವೀಚಿಯೂ ವಿಭವಂ ಸಾರ್ಥಮಕ್ಕೆಮ ವಿಯೋಗಿಸಿ ಭವದಿನೆನ್ನ ೪ ಆ ಯುಗಾದಿಯಲಿ ನೀನೆನ್ನ ಕಣ್ತಣಿಮೆ- ಈ ಯುಗಾದಿಯಲಿ ನೀನೆಲ್ಲಿ? ನಾನೆಲ್ಲಿ? ನನ್ನೆದೆಯಮಾಸೆಗಿನ್ನಶ್ರು ತರ್ಪಣಮೆ- ಹಬ್ಬಮಿನ್ನೆನಗೆ...

ತೌಳವ ಮಾತೆ

ರಾಗ ಭೈರವೀ-ತ್ರಿತಾಲ ('ಪತಿತೋದ್ಧಾರಿಣಿ ಗಂಗೇ' ಎಂಬ ಬಂಗಾಳೀ ಹಾಡಿನಂತೆ) ಜಯ ಜಯ ತೌಳವ ತಾಯ ||ಪಲ್ಲ|| ಮಣಿವೆ ತಂದೆತಾಯಂದಿರ ತಾಯೇ, ಭುವನದಿ ತ್ರಿದಿವಚ್ಛಾಯೇ ||ಅನು|| ಭಾರ್ಗವನಂದು ಬಿಸುಡೆ ಕೊಡಲಿಯ ನೀ ಕಡಲೊಡೆದೆಡೆಯಿಂ ಮೂಡಿ, ಭಾರತಮಾತೆ...

ಮಹಾತ್ಮರ ಉಪವಾಸ

[ರಕ್ತಾಕ್ಷಿ ಸಂ| ದ ಭಾದ್ರಪದ ಬ|೫ (೧೪-೯-೧೯೨೪)ಯಿಂದ ಆಶ್ವೀಜ ಶು।೧೧ (೮—೧೦-೧೯೨೪) ಯ ವರೆಗೆ ಮಹಾತ್ಮಾ ಗಾಂಧಿಯವರು ಧಿಲ್ಲಿಯಲ್ಲಿ ಮಾಡಿದ ೨೧ ದಿನಗಳ ಉಪವಾಸ] ಮಂಜಿನೇಕಾಂತದಲಿ ಶ್ರೀಹರಿಯ ಹಂಬಲಿಸಿ, ಹೃದಯ ಕ್ಷುಧಯನ್ನೂಡುತೊಡಲ ಹಸಿವಿಂದಂ, ಮನದ...

ನಂಬಲೆಂತು?

ರಾಗ ಧನ್ಯಾಸಿ- ಆದಿ ತಾಳ ನಂಬಲೆಂತು ನಾ ನೋಡುವ ಮುನ್ನ ಯದುಕುಲದಾ ಲೀಲೆಯ ನಿನ್ನ? ||ಪಲ್ಲ|| ನೋಡದೆ ನಂಬಲು ಬಲ್ಲವನಲ್ಲ, ನೋಡಿಸಿ ನಂಬಿಸೊ ಬಲ್ಲವ ನಲ್ಲ! ||ಅನು|| ೧ನನ್ನ ಮನದ ಮೋಹಮೇಕೆ ಹೀರೆ? ೨ಏಕೆದೆಯಾನೆಯ...

ಯೇಸು-ಕೃಷ್ಣ

ರಾಗ ಬೇಹಾಗ- ತಾಳ ತ್ರಿವಟ ಶ್ರೀ ಹರಿಯೇ ಬಳಲಿದೆ ಎಂತು ನಮಗಾಗಿ ನರಲೀಲೆಯನಾಂತು! || ಪಲ್ಲ || ಶುಭಜನನಕೆ ಸೆರೆಗತ್ತಲೆಯೊ ಹಿತ ವಾದುದು ೧ಮಂದೆಯ ಗೋದಲೆಯೊ? ೨ಮಿಸರಕೆ ನುಸುಳಲು ತಾಯುಡಿಯೊಂಟೆಯೊ ? ಯಮುನೆಯೀಸೆ ತಂದೆಯ...

ಕೇಳಿಸದ ಕರೆ

(ಹಾಡು) ಗಿಳಿಬಾಗಿಲ ತೆರೆಯೆಯಾ? ಹೂ ದನಿಯಿನೆನ್ನ ಕರೆಯೆಯಾ? ಬದಲು ಬಿದುವ ತೋರೆಯಾ? ತಾ ರಾಕಟಾಕ್ಷ ಬೀರೆಯಾ? ೪ ಹಣತೆಹುಳವ ನಂದಿಸಿ, ಬಾ ವಲಿಯ ತಕ್ಕಡಿಯೊಂದಿಸಿ, ಇರುಳ ಮಳಿಗೆ ಮುಗಿಯಿತು, ನೈ ದಿಲೆಯ ಬೀಗ ಬಿಗಿಯಿತು....

ಪಾತರಗಿತ್ತಿಗೆ

ಮರಿತನದ ಮರವೆಯಿಂ ಮರಸಿ ತಂದಪೆಯಾ? ಚಿತ್ರಾಂಜಲಿಯ ಗ್ರೀಷ್ಮ ಸಂತಾಪಕೆನ್ನ? ನಸೆದ ನಲವಿನ ನೆನಹಿನಂಜನದಿ ನನ್ನ ಸೋರೆದೆಯ ಸೇದೆಯಂ ಸವರೆ ಬಂದಪೆಯಾ? ೪ ಸಾಕು, ನಿನ್ನುಪಚಾರಗಳನೊಲ್ಲೆನದನು ಇನಿತು ಬೇಗನೆ ಮರೆತೆಯಾ? ನಾನುಮಾಕೆ ಈರ್‍ವರಾವಿದ್ದೆ ವಿಲ್ಲಿಯೆ; ನಿನ್ನನಾ ...

ರಾಷ್ಟ್ರೀಯ ಶಿಕ್ಷಣದ ಸಪ್ತಾಹದ ಕರೆ

ದಾಯಿ ಹಾಲನೆ ನಂಬಿ ಬಾಯಾರಿ ಬಸವಳಿದು ತಾಯೆ ಎಂದರಚಲುಂ ಮಿಸುಕದಿರೆ ರಸನೆ, ನೀನೆಮ್ಮನರಸುತಯ್ತಂದು ತೊಡೆಯಲಿ ತಳೆದು ಮೊಲೆಯಿನಿಂತೆಮ್ಮ ಬಾಯ್ದುಂಬಿಸಲು ಸಸಿನೆ, ೪ ಧನ್ಯರಾವೆಮ! ದಾಯಿಯೂಡಿಸಿದ ಮಗು ಮುಂದು ತನ್ನ ತಾನರಿತೆದ್ದು ನಿಡುನಿಲ್ಲಲಹುದೇ? ರವಿ ಚಿತ್ರಿಪಂತೆ...