ಸೃಷ್ಟಿ ಸೂಬಗನು ಮೊಗೆ ಮೊಗೆದು ಕುಡಿದು ಮೌನದರಮನೆಯಲ್ಲಿ ಗರಿ ಬಿಚ್ಚಿದ ಕಥನ ಹಿಮದೊಳಗಿನ ಬೆಂಕಿಯಂತೆ ಸಂತೈಸಿಕೊಂಡವನು ಮಣ್ಣ ಕಣದಿಂದ ಮಿಡತೆಯಾಗಿ ಎದ್ದು ಬಂದವನು. ಹುಲ್ಲು ಗರಿಕೆ ಬಿದಿರ ಮೇಳೆಯ ಕಾಡಿನ ಜಿನುಗುವ ನೀರ ಒರತೆಯಾಗಿ ಹುಟ್ಟು ಸಾವುಗಳ ಜ...
ಚದುರೆ ನೀನಿರದಾಟ ಅದೆಂತು ಚದುರಂಗದಾಟ ನೀ ಸದರ ಮಾಡಿ ಮದಿರಂಗಿ ಕೈಗಳಲಿ ಕುದುರೆ ನಡೆಸುವಾಟ ಅದುವ ಚದುರಂಗದಾಟ ಬಟ್ಟ ಕಂಗಳ ಅಂಗಳದಾಟ ಕೂದಲ ಸುಳಿಯಲಿ ಬೆರಳುಗಳಾಟ ಅಂಗಾಂಗವೆಲ್ಲಾ ಕಚಗುಳಿಯಾಟ ರಕ್ಷಣಾಭಂಗ ತಕ್ಷಣದಾಟ ತದೇಕ ಚಿತ್ತ ನೋಡುವಾಟ ಚಿತ್ತವೃತ...
ಭವ್ಯ ಭಾರತದ ಎರಡನೆಯ ಪ್ರಧಾನ ಮಂತ್ರಿಯಾಗಿ ೧೯೬೪ ರಲ್ಲಿ ಶಾಸ್ತ್ರಿಯವರು… ಅಧಿಕಾರ ವಹಿಸಿಕೊಂಡಾಗ, ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು! ಇದೇ ಸಮಯದಲ್ಲಿ ನೆರೆಯ ರಾಷ್ಟ್ರ ಚೀನಾ ದೇಶವು ಕಾಲು ಕೆದರಿ ಜಗಳ ತೆಗೆದು ಯುದ್ಧ ಮಾಡಲು ಶು...
ಬಾಳಿಽಯ ಬನದಾಗ ಬಾಲ ಚೆಂಡಾಡ್ಯಾನ ಬಾ ನನ್ನ ಮಗನಽ ಅಬರಂಗ ಧೊರಿಯಽ ಬಾಳಿಕಿಂತಾ ಛೆಲಿವ್ಯೋ | ನನ ಸೊಸಿ | ಬಂದೊಮ್ಮೆ ಮಕದೋರೊ ||೧|| ಬಾಳಿಕಿಂತ ಛೆಲಿವ್ಯಾದ್ರ ಭಾಂಯಾಗ ನುಗಸವ್ವಾ ಉಟ್ಟೀದ ದಟ್ಟಿಽ ಕಳಕೋರ್ಹಡದವ್ವಾ ಬಿಟ್ಹಚ್ಚ ತವರ್ಮನಿಽಗೇ | ನಾ ನನ್...
ಕೃಷ್ಣನಿಗಾಸೆ ನೂರು ಅದಕೆ ಹೆಂಡಿರು ಮೂರು ಹೆಂಡಿರಿಗಾಸೆಯೆ ಇಲ್ಲ ಮರ್‍ಮವ ತಿಳಿದವರಾರು? ಪತಿವ್ರತೆಯೆಂಬುದು ಧರ್‍ಮ ಪುರುಷನಿಗ್ಯಾವುದು ಧರ್‍ಮ ಧರ್‍ಮವನೇರಿದ ತಪ್ಪಿಗೆ ಕಾವಲು ಇವನ ಕರ್‍ಮ! ಹೆಣ್ಣು ಪೂರ ಅಬಲೆ ಜೊತೆಗೆ ಕೊಂಚ ಚಂಚಲೆ ಯಾರ ಬಾಯಿಂದ ಈ...
ಇಂಚಿಂಚೇ ಪ್ರತ್ಯಕ್ಷವಾಗುವ ಇದು ಇನ್ನೂ ಐದು ವರ್ಷ ಅಥವಾ ಆರೋ? ಇವತ್ತೇ ಏಕೆ ವಿಕಾರ ಮುಖ ದರ್ಶನ? ಬರುವ ವರಸೆಗೋ ಆಹಾ ಜೀವ ತಲ್ಲಣ ಪಕ್ಕ ಕುಳಿತು ತಲೆಸವರಿ ಮುತ್ತಿಟ್ಟು ಮೈ ಮರೆಸಿದ ದೇಹವೇ ಉದುರಿಸಿ ದಳ ದಳ ಕಳಚುತ್ತಾ ಕಣ್ಣು ಕಿವಿ ಒಂದೊಂದೇ ಬರಿದಾ...
ನಾ… ಗುರುತಿಸಬಲ್ಲೆ ಅವಳು, ಅವಳೇ ನನ್ನ ಮಗಳು ಮುದ್ದಾದ ಜಿಂಕೆ, ನವಿಲು ಸುರಗಿ, ರಂಜ, ಜಾಜಿ ದೇವ ಕಣಗಿಲೆ ಹೂವಿನಂತವಳು ಹಂಚಿಕೊಂಡೆವು ಪ್ರೀತಿಯ ಅಗುಳು ನೋವಿನಲ್ಲೊಂದು ಪಾಲು ನೀಡಿ ಬೇಡಿ ಪಡೆದವಳು ಬುಟ್ಟಿಯ ತುಂಬ ನಕ್ಷತ್ರಗಳನ್ನು ತುಂಬಿಕೊ...
ಗಡಿಯಾರ ಬಲಗೈಯಿಂದ ಎಡಗೈಗೆ ಬಂತು. ಅದು ನನಗರಿವಿಲ್ಲದಂತೆ ಆದ ಕೆಲಸ, ಅತಿಯಾದ ನನ್ನ ಭಾವುಕತೆಯನ್ನು ಹದ್ದುಬಸ್ತಿನಲ್ಲಿಡುವ, ನನ್ನ ಮೇಲೆ ನಾನು ನಿಗ್ರಹ ಪಡೆಯಲು ಮಾಡುತ್ತಿರುವ ಯತ್ನಗಳಲ್ಲಿ ಅದೂ ಒಂದು. ಬಹು ದಿನಗಳಿಂದ ಬಲಗೈಗೆ ಗಡಿಯಾರ ಕಟ್ಟುವುದನ...
ಮೋಡಗಳೇ ಎತ್ತ ಹೋದರೆಲ್ಲಿ? ಬನ್ನಿ ಈ ನಾಡ ಪ್ರವೇಶ ಮಾಡಿ ನೀರ ಹನಿಗಳ ಚೆಲ್ಲಿ ಹಾತೊರೆಯುತಿಹವು ಮೊಳಕೆಯೊಡೆಯಲು ಕಾಳು ಕಮರುವ ಮೊದಲಲ್ಲಿ ಮೋಡಗಳೇ ಬನ್ನಿರಿಲ್ಲಿ ನೀರ ಹನಿಗಳ ಚೆಲ್ಲಿ ನಮ್ಮೂರ ಹಾದು ಹೋಗುವ ಮುನ್ನ ಎಮ್ಮ ಜೀವಕೆ ಕಳೆಯ ತನ್ನಿ ಸಾವಿರಾರ...
ಮನುಷ್ಯನಿಗೆ ಬರುವುದು ಕಷ್ಟ ನಿಜ ಈಗ ಮರಕ್ಕೆ ಬರುವ ಕಷ್ಟವು ನೂರಕ್ಕೆ ನೂರು ನಿಜ. *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







