Home / B M Srikanthaiah

Browsing Tag: B M Srikanthaiah

ಏಳು ಮಗಳುದಿರು ಚೋಳರಾಯನಿಗೆ, ಒಬ್ಬ ತಾಯ ಸಿರಿಮಕ್ಕಳು; ಸಾಲದೊಂದು ದಿನ ಹೇಳಿ ಮುಗಿಸುವರೆ ಹಬ್ಬಿಹೆಣೆದವರ ಹಿತುವನು. ಏಳು ನೈದಿಲೆಗಳಕ್ಕತಂಗಿಯರು, ಮಾಲೆಯೊಂದರಲ್ಲಿ ಹೊಂದಿಕೆ, ಅವರ ತಂದೆಯೋ, ಧೀರ ಕಾಳಗದೊ ಇವರ ಚಿಂತೆಯನೆ ಕೊಳ್ಳನೆಣಿಕೆಯಲಿ- ಅವನಿಗ...

ಪಡುವದಿಬ್ಬದ ಗೌಡನೊಬ್ಬನು ಬಿಡದೆ ತೊರೆಯನ ಕೂಗಿಕೊಂಡನು; ತಡೆಯದೀಗಲೆ ಗಡುವ ಹಾಯಿಸು, ಕೊಡುವೆ ಕೇಳಿದ ಹೊನ್ನನು. ಆರು ನೀವೀ ಕರುಗಿ ಮೊರೆಯುವ ನೀರ ಕಾಯಲ ಕಾಯುವವರು? ಪಡುವದಿಬ್ಬದ ಗೌಡ ನಾನೀ ಮಡದಿ ಕಾರಿಯ ಕುವರಿಯು. ಓಡಿ ಬಂದೆವು ಮೂರು ದಿವಸ; ಜಾಡ ...

ಅನಾಥೆ ಇವಳಿನ್ನೊಬ್ಬ ಳೀ ಜನ್ಮರೋಸಿ, ವೇದೆಯನು ತಾಳದೆಯೆ ಮುಳುಗಿದಳು ಹೊಳೆಗೆ. ಮೆಲ್ಲಗಿವಳನು ಮುಟ್ಟು, ಮರುಗಿ ಹಿಡಿದೆತ್ತು, ಏನು ಕೋಮಲಕಾಯ! ಹೊಳಪು ಹೊಸಪ್ರಾಯ ನೋಡು, ಮೈಯೊಳಗುಡಿಗೆ ತೊಯ್ದು ಹತ್ತಿಹುದು: ತೋಡಿ, ತೊರೆನೊರೆಯಾಗಿ ಹೊಳೆ ಬಸಿಯುತಿಹು...

ಚೆಲುವು ಚೆಲ್ಲುವ ತೊರೆಯ ಕರೆಗಳ, ಎಂತು ಮೆರೆವಿರೊ ಅರಳುತ! ಎಂತು ಕೆಲವಿರೊ ಹಕ್ಕಿಗಳಿರಾ, ಹಲುಬುತಿಹೆನೇ ನರಳುತ! ಮರದ ಪೊದೆಯಲಿ ಹಾಡಿ, ಹಕ್ಕಿಯೆ, ಕೊರೆದು ಹೃದಯವ ಬಿರಿಸುವೆ; ತೊರೆದ ವಂಚಕನೋಲಿಸಿ ನಂಬಿಸಿ ನಲಿದ ದಿನಗಳ ನೆನಸುವೆ! ನಿನ್ನ ಗೆಳೆಯನ-...

ಸೊಡಲುರುಳಿ ಮುರಿಯುತ್ತಲೇ, ಹುಡಿಯೊಳಗೆ ಬೀಳುವುದು ನಂದಿ ಬೆಳಕು, ಮೋಡಗಳು ಚೆದುರುತ್ತಲೇ, ಬಾಡುವುದು ಮಳೆಬಿಲ್ಲ ಬಣ್ಣ ಬೆಡಗು. ವೀಣೆಯೆಳೆ ಹರಿಯುತ್ತಲೇ, ಮಾಣುವುವು ನೆನಪಿಂದ ಗಾನದುಲುಹು, ಒಲಿದವರು ನುಡಿಯುತ್ತಲೇ, ಒಲುಮೆ ಮಾತುಗಳೆಲ್ಲ ಮರೆಯುತಿಹು...

ಒಂದು ಮುತ್ತು- ಮತ್ತೆ ಬಾರೆನು. ಒಂದು ಮುತ್ತು- ಮತ್ತೆ ಹೋರೆನು. ಹಿಂದುಮುಂದಿನ ಬೇಗೆಯೆಲ್ಲಾ ನಂದೆ, ಒಂದೇ ಮುತ್ತು, ನಲ್ಲೆ! ಅಯ್ಯೊ, ಅರಿಯದೆ, ಒಲುಮೆಯೊಗೆದು, ಕಯ್ಯ ಹಿಡಿದರಿಗೆರಡ ಬಗೆದು, ತಡೆದು, ತಡೆಯದೆ, ನಾಚಿ, ಹೆಣಗಿ, ಕಡೆಗೆ ಸೋತೆವು ನಾವು...

ನಿನ್ನೊಳೆನಗೊಲವಿಲ್ಲ – ಇಲ್ಲ, ಒಲವಿಲ್ಲ- ನೀನು ಹೋದೆಯೆನೆ ಕಂದುವೆನದೇನು! ಬಾನ ತಣ್ಪೆಳಕೆಲ್ಲ ಕಣ್ದಣಿಯ ನಿನ್ನನ್ನು ನೋಡಿ ನಲಿವುವೆ ಎಂದು ಕರುಬುವೆನದೇನು! ನಿನ್ನೊಳೆನಗೊಲವಿಲ್ಲ – ಆದರೆ, ಅದೇನೋ , ನೀನೇನೆ ಮಾಡುತಿರು. ಅದೆ ನನಗೆ ...

ಒಂದು ಮಾತನು ಲೋಕ ಹೊಲೆಗೆಡಿಸಿಕೊಂಡಿಹುದು, ಹೊಲೆಗೆಡಿಸಿಸೆನದನು ನಾನು; ಒಂದು ಭಾವದ ಹೃದಯವರಿಯದೆಯೆ ಜರೆಯುವುದು, ಜರೆಯಬೇಡದನು ನೀನು; ಒಂದು ಮನಸಿನ ಬಯಕೆ ತಾ ಬರಿಯ ಹಂಬಲಿಕೆ, ಏತಕಡಗಿಸುವುದದನು? ಒಂದು ಮರುಕದ ಮಾತು ನನಗಿನಿದು ನಿನ್ನಿಂದ- ಮಿಕ್ಕವ...

ಹೆದರುವೆನು ನಾ ನಿನ್ನ ಬಿನ್ನಾಣಕೆಲೆ ಹೆಣ್ಣೆ, ಹೆದರದಿರು ನೀನು ನನಗೆ ಹೊರಲಾರದಳಲಿಂದ ನೊಂದವನು ತಂದವನು ಹೊರಿಸುವೆನೆ ಹೇಳು ನಿನಗೆ? ಹೆದರುವೆನು ನಿನ್ನ ನಗೆ, ನಿನ್ನ ನುಡಿ, ನಿನ್ನ ನಡೆಗೆ- ಹೆದರದಿರು ನೀನು ನನಗೆ. ಹೊಲ್ಲದರಿಯದ ಹೃದಯದೊಲ್ಮೆಯಲಿ ...

ಕುರಿಗಳೆಲ್ಲಾ ರೊಪ್ಪದಲ್ಲಿ, ದನಗಳೆಲ್ಲಾ ತೊಟ್ಟಿಯಲ್ಲಿ, ಜನಗಳೆಲ್ಲಾ ಹಟ್ಟಿಯಲ್ಲಿ ಬಳಲಿ ಕೆಡೆದರು ತೆಪ್ಪಗೆ; ಗಂಡ ಗೊರಕೆಹೊಯ್ಯುತಿಹನು ನಿದ್ದೆ ಕವಿದು ಮಗ್ಗುಲಲ್ಲಿ- ನನಗೋ ಹೊಟ್ಟೆಯ ದುಃಖವೆಲ್ಲಾ ಕಣ್ಣ ಹನಿಯಲಿ ಸುರಿವುದು. ಚಿಕ್ಕ ಹರೆಯದ ಚಾಮನೊಲ...

12345...8

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...