
ಗಾನ, ಮೆಲುಪಿನ ಕೊರಲು ಕುಗ್ಗಲು,
ಹೊಳಲು ಕೊಡುವುದು ಮನದೊಳು,
ಕಂಪು, ಮೊಲ್ಲೆಯ ಸೊಂಪು ಸೊರಗಲು,
ತಿಳಿದ ಕರಣದೊಳುಳಿವುದು.
ಕಳಚಿದೆಸಳು, ಗುಲಾಬಿ ಕಂದಲು,
ತಳಿವುದಿನಿಯಳ ಶಯನವ.
ನಿನ್ನ ಬಗೆಗಳೊ-ನೀನು ಹೋಗಲು,
ಒರಗಿ, ಒಲುಮೆಯ ಬಗೆವುದು.
*****
SHELLEY : Music, when soft voices die














