ಪೊನಲ ತಡಿಯಲಿ ಪೊಸ ಗುಲಾಬಿ ನಗು ನಗುತಲಿರೆ ಘನ ಖಯ್ಯಮನ ಕೂಡೆ ಚೆಂಗಳ್ಳ ಕುಡಿ, ಬಾ; ಕರಿಯ ಕುಡಿತವ ಮುಂದೆ ಕಾಲನೊಡ್ಡಿದೊಡಂದು ಪಿಂತೆಗೆಯದೆದೆಯುಡುಗದದನು ಕುಡಿ ನಗುತೆ. *****...

ಇದು ಎಂಥ ಶಿಶಿರ! ಇದು ಎಂಥ ಶಿಶಿರ! ಹಕ್ಕಿಗಳ ಸದ್ದಿಲ್ಲ ಮರಗಳಲಿ ಎಲೆಯಿಲ್ಲ ಹಿಮ ಹೊದ್ದು ಮಲಗಿದೆ ಸರ್‍ವತ್ರ ಭೂಮಿ ಬೀದಿಯಲಿ ಜನವಿಲ್ಲ ಮಾತೆ ಕೇಳಿಸುವುದಿಲ್ಲ ನಗೆಯಿಲ್ಲ ಸದ್ದಿಲ್ಲ ಎಲ್ಲೆಲ್ಲೂ ಮೌನ ಉತ್ತರ ಧ್ರುವದಿಂದ ಬೀಸಿ ಬಂದಂಥ ಗಾಳಿ ಕೊರೆಯು...

ಬಾ ಬಾ ಮೋಹನೆ-ಬೇಗ ಗೆಜ್ಜೆಯುಲಿಯೆ ಗೆಲು ಗೆಲ್ ಗೆಲ್ಲುಲಿವ ಹೆಜ್ಜೆಹೆಜ್ಜೆಗೂ ಹೃದಯವ ತುಳಿವ ನಸುನಗುವ ಹುಸಿಮುಳಿವ ಬಿಸವಂದದ ಸುಂದರಿ ನೀ ಬೇಗ ಬಾ . . . ನಮ್ಮಿರಮಿಂದಾವಮೃತವ ಪಡೆಯೆ, ಆರಾಡಿಪರೀ ಮಂತನು ಅರಿಯೆ. ಚಲಿಚಲಿಸುತ ಎದೆಯುಬ್ಬಿಸಿ ನೋವೆಬ್ಬ...

ನನ್ನ ಅಖಂಡ ಪ್ರೀತಿಯನು ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು ತೂಗಬೇಡ ಮುಮ್ತಾಜ್ ದೌಲತ್ತಿನ ಆಸರೆಯಿಂದ ನಿನ್ನ ಜಹಾಂಪನಾಹ್ ನಿನಗೊಂದು ಭವ್ಯ ಇಮಾರತ್ತು ಕಟ್ಟಿಸಿ ಅದರಲ್ಲಿ ನಿನ್ನ ಗೋರಿ ಮಾಡಿರಬಹುದು. ಆದರೆ ನನ್ನ ಪ್ರಿಯತಮನ ಹೃದಯದಲೇ ಕಟ್ಟಿಸಿದ ಭಾವ...

ಸಿನಿಮಾ ನಟರೂ ಎಲ್ಲರಂತೆ ಮನುಷ್ಯರು. ನಟನೆಯನ್ನೇ ವೃತ್ತಿ ಪ್ರವೃತ್ತಿಯನ್ನಾಗಿಸಿಕೊಂಡು ತರಬೇತಿ ಪಡೆದುಕೊಂಡು ಕೆಲವರು ಖ್ಯಾತ ನಟರೆನಿಸಿರುವರು. ಅದೂ ಅವರ ವರಮಾನದ ಮೇಲೆ… ಈಗೀಗ ಭವ್ಯಭಾರತದಲ್ಲಿ ಬಾಲಿವುಡ್ ಚಿತ್ರಗಳ ಬಾಕ್ಸ್‌ಆಫೀಸ್ ಗಳಿಕೆ ...

ಈ ಜನುಮವೆ ಮುಗಿವ ಮುನ್ನ ಕಾಣೆನೊ ಕಾಣುವೆನೊ ನಿನ್ನ ನರಿಯದೊಡನಭಿನ್ನಮೆನ್ನ ಮನದ ತಿತಿಕ್ಷೆ ಇಂದಲ್ಲಡೆ ಮುಂದೆ ನೆರೆಯ ದಿರದಿಲ್ಲಿಯೆ ಬಲ್ಲೆನೆರೆಯ- ಸಲದೆ ತಾಯ ಬಸಿರ ಮರೆಯ ಮಗುವ ದಿದೃಕ್ಷೆ? ನಿನ್ನೊಳೊಗೆದ ನನ್ನೊಳಿಂತು ನಿನ್ನ ಕಾಂಬ ಬಯಕೆ ಬಂತು, ಕ...

ಎದ್ದೇಳಿ ಎದ್ದೇಳಿ ಎದ್ದೇಳಿ ಎಲ್ಲ ಕನ್ನಡದ ತನವಿರುವ ಕನ್ನಡಿಗರೆಲ್ಲ ಬೆಳಗಾವಿ ನಮ್ಮಿಂದ ಸರಿಯುವ ಮುನ್ನ ಬೆಂಗ್ಳೂರು ದೆಹಲಿಯ ವಶವಾಗೊ ಮುನ್ನ ಕನ್ನಡವೆ ಮರೆಯಾಗಿ ಹೋಗುವ ಮುನ್ನ ಎದ್ದೇಳಿ ಕನ್ನಡಿಗರೇ ತೆರೆದು ಕಣ್ಣ ಕಾವೇರಿ ಕರುನಾಡ ತೊರೆಯುವ ಮುನ್...

ಎಂದಿನಂತೆ ನ್ಯಾಯಾಲಯದ ಆವರಣ ಜನರಿಂದ ಕಿಕ್ಕಿರಿದಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವಂತಿದ್ದ ಕಿರಿಯ ವಕೀಲರುಗಳು ಕರಿಯ ಕೋಟಿನ ಒಳಗೆ ಬೆವೆಯುತ್ತಿದ್ದದ್ದು ಲೆಕ್ಕಕ್ಕಿರಲಿಲ್ಲ. ದಫ್ತರ ಹಿಡಿದ ಹಿರಿಯ ಲಾಯರುಗಳು ಮಾತನ್ನೇ ಬಂಡವಾಳ ಮಾಡಿಕೊಂಡ...

ಜಯತು ಕನ್ನಡ ಮಾತೆ ಜಯತು ಕನ್ನಡ ಪುನೀತೆ ಜಯತು ಜಯತು ಜನನಿ ಕನ್ನಡ ಮಾತೆ|| ನಿನ್ನ ಒಡಲ ಮಮತೆಯ ಸಿರಿಯಲಿ ಪವಡಿಸಲೆನಿತು ಸುಖವು ನಿನ್ನ ಆಲಿಂಗದ ಅನುರಾಗ ಗಾನ ಭಾವತೆಯ ಗುಡಿಯಂದದ ಸೊಬಗು|| ನಿನ್ನ ನುಡಿಯ ಮಾಧುರ್ಯತೆಯಲಿ ಕಸ್ತೂರಿ ಶ್ರೀಗಂಧ ಚಂದನ ಚೆ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ನಿನ್ನ ಕಾಲ್ಗಳ ನಡುವೆ ಮಲಗಲು ಎಂಥ ವ್ಯಕ್ತಿಯು ಬರುವನು? ಇರಲಿ ಬಿಡು ಯಾರಾದರೇನು? ನಾವು ಕೇವಲ ಸ್ತ್ರೀಯರು. ಮಿಂದು ಬಾ, ಲೇಪಿಸಿಕೊ ಪರಿಮಳ ಗೂಡುಗಳಲಿವೆ ಅತ್ತರು, ತಳೆದೆ ಹೊದಿಕೆಗೆ ಎತ್ತಲೂ. ದೇವರೇ ಕ್ಷಮಿಸೆಮ್ಮನು....

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...