ಇದೆಂತಹ ಗಡಿಗಳು

ಇದೆಂತಹ ಗಡಿಗಳು ಎಂತಹ ವಿಭಾಜಕ ರೇಖೆಗಳು ಕಾವೇರಿಯ ತಟದಲಿ ಕುಂಟಾಬಿಲ್ಲೆ ಆಡುತ್ತಾ ಎಲ್ಲರೊಂದಿಗೆ ಕೂಡಿ ಬೆಳೆದವಳು ನಾನು ಇಲ್ಲಿ ಮುಹಾಜಿರಳಾಗಿರುವೆ. ಅಲ್ಲಿ ಮಾಮರಗಳ ಹತ್ತಿ ಮರಕೋತಿ ಆಡಿದ್ದವಳು ಆ ನದಿ, ಬೆಟ್ಟ, ಗಿಳಿ, ಕೋಗಿಲೆ...

ಮಿಲೆ ಸುರ್ ಮೇರಾ ತುಮ್ಹಾರಾ

ಗಾನ ಗಂಧರ್‍ವ ಸೃಷ್ಟಿಸಿದ ಸಂಗೀತ ಲೋಕದಲ್ಲಿ ಎದ್ದೆದ್ದು ಬಡಿದ ಘನ ಗಂಭೀರ ಸಮುದ್ರದಲೆಗಳು ಸ್ಥಬ್ಧವಾಗಿವೆ. ಮಿಲೆ ಸುರ್ ಮೇರ್ ತುಮ್ಹಾರಾ ತೊ ಸುರ್ ಬನೇ ಹಮಾರಾ ಭಾರತವನ್ನೊಂದುಗೂಡಿಸಿದ ತತ್ವ ಎಂತಹ ಮೋಡಿ ಆ ಗಾರುಡಿಗನದು?...

ಕಂಡಿದ್ದೇನೆ ನಾನು

ಧರ್‍ಮದ ಠೇಕೇದಾರರಿಂದ ಭೂಮಿಯ ಮೇಲೆ ದೆವ್ವದ ಕುಣಿತ ನೋಡಿದ್ದೇನೆ ನಾನು! ಗುಜರಾತಿನ ನರಮೇಧದಲ್ಲಿ ಮನುಷ್ಯತ್ವದ ಕತ್ತು ನಾಚಿಕೆಯಿಂದ ಕೆಳಗಾಗಿದ್ದನ್ನು ಕಂಡಿದ್ದೇನೆ ನಾನು! ಧರ್‍ಮ ರಾಜಕೀಯದಲಿ ಅಧರ್‍ಮದ ಕತ್ತಿ ಝಾಳಪಿಸಿದ ಗುಜರಾತನು ಕಣ್ಣಾರೆ ಕಂಡಿದ್ದೇನೆ ನಾನು!...

ಅನ್ವೇಷಣೆ

ಕವಿತೆ ಬರೆಯುತ್ತೇನೆ ಸಂಘರ್ಷದ ಹಾದಿಯಲಿ ನೋವಿನ ಎಳೆ ಎಳೆಗೆ ಚೀತ್ಕಾರದ ಧ್ವನಿಗಳಿಗೆ ಮಾದ್ಯಮ ಹುಡುಕುತ್ತೇನೆ ನಾನು ಇದ್ದುದ್ದಕ್ಕೆ ಸಾಕ್ಷಿ-ಪುರಾವೆಗಳ ಒಂದೊಂದೇ ದಾಖಲಿಸುತ್ತೇನೆ ಗೋರಿಯಿಂದ ಎದ್ದೆದ್ದು ಬರುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತೇನೆ ಭೂಮಿಯಲಿ ಬೇರುಗಳ ಬಿಳಲುಗಳ...

ಒಂದು ಸಾವಿನ ಸುತ್ತ

ಪತ್ರಿಕೆಗಳು ಸುದ್ದಿ ಮಾಡಿದವು ಟಿ.ವಿ.ಛಾನಲ್ಲುಗಳು ಎಡೆಬಿಡದೆ ಬಿತ್ತರಿಸಿದವು ಬೆಂಗಳೂರು ನಗರವೇ ಬೆಚ್ಚಿ ಬೀಳಿಸುವ ಸುದ್ದಿ ರಾತ್ರಿ ಕತ್ತಲೆಯಲಿ ನಡದೇ ಹೋಯ್ತು ಸಾಫ್ಟ್‌ವೇರ್ ಇಂಜೀನಿಯರಳ ಕೊಲೆ ಬರ್‍ಬರ ಅತ್ಯಾಚಾರ, ಹುಟ್ಟಿಸಿದೆ ಮೆಟ್ರೋ ಮಹಿಳೆಯರ ಮೈಯಲ್ಲಿ ನಡುಕ....

ಗುಡಿಯಾ

ಗುಡಿಯಾ ಆಟದ ಗೊಂಬೆಯಲ್ಲ ರಕ್ತ ಮಾಂಸ ತುಂಬಿದ ಜೀವಂತ ಗೊಂಬೆ ದುಃಖಕ್ಕೊಂದೇ ಹಕ್ಕು ಪಡೆದವಳು ಗುಡಿಯಾ ನೋವಿನ ಕಡಲು ಒಡಲಲಿಟ್ಟುಕೊಂಡು ನಾಪತ್ತೆಯಾದ ಪತಿ ಮರಳಿ ಬರುವ ಹಾದಿ ಕಾಯ್ದಳು ದೀರ್‍ಘ ಕಾಲದ ತನಕ ಕನಸು...

ಶಾಂತಿ ಮಳೆ

ಬರೀ ಮಾತುಗಳು ಇವು ಕೇವಲ ಅರ್ಥಕಳಕೊಂಡ ಶಬ್ದಗಳು ಬೀಜ ನೆಲದಲ್ಲಿ ಹೂತು ಪಸೆಯೊಡೆದು ಮೊಳಕೆ ಕಟ್ಟಿ ಬೇರು ಬಿಡುವತನಕ ಇವು ಅರ್ಥವಿಲ್ಲದ ಕೇವಲ ಮಾತುಗಳು. ಬರೀ ಮಾತುಗಳು ಇವು ಉಗುಳಿನ ವಿಷಕ್ಕೆ ನಂಜೇರಿದ ಮಹಾತ್ಮನ...

ಈದ್ ಮುಬಾರಕ್

ನೆತ್ತರ ಹೆಪ್ಪುಗಟ್ಟಿಸುವ ಅಮವಾಸ್ಯೆ ಕತ್ತಲು ಕಳೆದು ಸಣ್ಣ ಗೆರೆಯಂತೆ ಮೂಡಿದ ಈದ್ ಕಾ ಚಾಂದ್ ಮೋಡಗಳಿಲ್ಲದ ಶುಭ್ರ ಅಗಸದಲ್ಲಿ ಕಾಣುತ್ತಿದ್ದಾನೆ ನೋಡು ರಂಜಾನ್ ಹಬ್ಬದ ಸಣ್ಣ ಗೆರೆಯಂತಹ ಚಂದ್ರನ ನೋಡಿದ ಮಗಳು ಓಡೋಡಿ ಬಂದು...

ಪ್ರಭುವೇ ಹಬ್ಬಗಳನ್ನೇಕೆ ಮಾಡಿದೆ

ನನ್ನ ಮನೆಯ ನೆತ್ತಿಯ ಮೇಲೆ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಒಲೆಗೆ ಬೆಂಕಿಯ ಕಾವು ಸಿಕ್ಕಿರಲಿಲ್ಲ ಚಳಿಯಲ್ಲಿ ನಡುಗುತ್ತ ಮಲಗಿದ್ದ ಹಸಿವಿನಿಂದ ಚಡಪಡಿಸುತ್ತಿರುವ ಮಕ್ಕಳಿಗೆ ಹೇಗೆ ಹೇಳಲಿ ನಾನು ನಮ್ಮ ರಂಜಾನಿನ ಉಪವಾಸ ಇನ್ನೂ ಮುಗಿದಿಲ್ಲ...

ಕಣ್ಣ ರೆಪ್ಪೆಯ ಕೆಳಗೆ

ಎಲ್ಲಿಂದ ಬರುತ್ತವೆಯೋ ಹಾಳಾದ ಕಣ್ಣೀರು? ಏಕೆ ಹರಿಯುತ್ತವೆಯೋ ಬಳಬಳನೆ ಸುಮ್ಮನೆ! ಗೋರಿಗಳ ಕೇರಿಯಲ್ಲಿ ಮಸಣ ಸಮಾಧಿಯಲಿ ಅಂತರಂಗದ ಏಕಾಂತ ದೂರದೂರದ ತನಕ ಹಬ್ಬಿರುವ ಮೌನದಲಿ ಕುಟುಕುತ್ತಿದೆ ಗೋರಿಕಲ್ಲು ಗಾಳಿಯಲಿ ಕನಸ ತೂರಿ! ಏಕೆ ಹರಿಯುತ್ತಿದೆ...