
ಅಂದು : ಕೆಲವರು, ಬದುಕಿನ ಹಾದಿಲಿ, ಘಮಿ ಘಮಿಸುವಾ ಹಣ್ಣು, ಹೂವು… ಹುಲ್ಲು, ದವನದಾ ಕೃಷಿಗೇ… ಶ್ರಮಿಸುತ್ತಿದ್ದರು! ಇಂದು : ಕೆಲವರು, ನಡೆವ ಹಾದಿಲಿ ಮುಳ್ಳು, ಕಲ್ಲು, ಗಾಜು, ಬಾಂಬಿಟ್ಟು, ಖುಷಿಪಟ್ಟು ವಿಶ್ರಮಿಸುತ್ತಿರುವರು!! ಒಂದ...
ನೆತ್ತಿಯಲ್ಲಿ ಗಿರಿಛತ್ರಿಯ ಎತ್ತಿದ ಶಕ್ತಿಗಿದೋ ನಮನ, ಸುತ್ತಲು ಸಾಗರವಸ್ತ್ರವ ಧರಿಸಿದ ಭರ್ತೆಗಿದೋ ನಮನ; ಕೋಟಿ ಕೋಟಿ ಕಣ್, ಕೋಟಿ ಕೋಟಿ ಕೈ ತಾಳಿ ನಿಂತರೂನು ಸಾಟಿಯಿಲ್ಲದಾ ಏಕರೂಪಾದ ತಾಯಿಗಿದೋ ನಮನ. ಮರಗಿಡ ಆಡಿ ತೀಡುವ ಗಾಳಿಯ ಪರಿಮಳ ನಿನ್ನುಸಿ...
ನಿನ್ನ ಗಾನದ ಸವಿಗೆ ನನ್ನೆದೆಯ ಬಾನಿನಲಿ ಆಡುವುವು ಮುಸ್ಸಂಜೆ ಮುಗಿಲು; ಹೊಂಬಿಸಿಲ ಕಾಂತಿಯಲಿ ಹಾಯುವುವು ಹಕ್ಕಿಗಳು ಬೆರೆಸುತ್ತ ಮುಗಿಲಲ್ಲಿ ನೆರಳು ಎದೆಯ ಗಾಯಗಳೆಲ್ಲ ಉರಿಯಾರಿ ಮಾಯುವುವು, ಹಾಯೆನಿಸಿ ತಂಪಾಗಿ ಜೀವ; ಕನಸುಗಳ ಆಕಾಶ- ಗಂಗೆಯಲಿ ಮೀಯು...
ಬಾಯಾರಿ ನಾ ಬಂದೆ ಬತ್ತಿದೆ ಈ ಕೊಳವು ಕೊಟ್ಟು ಬತ್ತಿದೆ ಈ ಕೊಳವು ಊರವ್ವ! ಫಕ್ಕನೆ ಮುಳುಗಿಸು ಕೊಡವನು ಬಾರವ್ವ ಗಂಗೆ! ಎಲ್ಲೆಲ್ಲು ತುಂಬಿರುವೆ ಇಲ್ಲೇಕೆ ಅಡಗಿರುವೆ ಅಕ್ಕ ಇಲ್ಲೇಕೆ ಅಡಗಿರುವೆ ಸಲ್ಲದು ನಿನಗದು ಭುಗ್ಗನೆ ಚಿಮ್ಮುತ ಏಳವ್ವ ಗಂಗೆ! ಕರ...
ಎಲ್ಲರ ಮನೆಯ ಹೆಂಚು ಕಪ್ಪು ದೋಸೆ ಕಪ್ಪೇನು?? ಕಪ್ಪನ್ನು ಕಪ್ಪೆಂದರೆ… ಮಕ ಚಿಪ್ಪೇಕೆ?? ೨ ಹೆಂಚಿಗೆ ಬರೀ ಕಾಯುವ ಕೆಲಸ! ಕಾದ ರಬಸಕ್ಕೆ ಬುರು ಬುರು… ಉಬ್ಬುವ ಕೆಲಸ, ಕಡಿಮೇನು?? ದೋಸೆ ತಿರಿವಿದಂಗೇ… ಹೆಂಚು ತಿರಿಗಿಸಲು ಸಾಧ್ಯ...
ಸುತ್ತಲೂ ಕತ್ತಲು ನಂಬುವಂತಿಲ್ಲ ಯಾರೊಬ್ಬರನೂ ಕತ್ತಿ ಹಿಡಿದು ಮೇಲೇರಿ ಬಂದಂತೆ ಕಡ್ಡಿ ಗೀರಿದೆ ಮೆಲ್ಲಗೆ ದೀಪ ಹಚ್ಚಿದೆ ಬೆಳೆಯುತ್ತಾ ಹೋಯಿತು ಬೆಳಕು ಮುಟ್ಟಿದರೆ ಎದೆಯಾಳಕ್ಕೆ ಚುಚ್ಚಿಕೊಳ್ಳುವ ಮುಳ್ಳು ಪ್ರತಿ ಕೊಂಬೆಗೂ ತುದಿಯಲೊಂದು ಸಣ್ಣ ಮೊಗ್ಗು...
ಮರವು ತೂಗಾಡಿದವು ಬಳ್ಳಿ ಓಲಾಡಿದವು ಹೂವು ನಕ್ಕವು ಕುಲುಕಿ ಮೈಯನೆಲ್ಲ, ಮಂದಮಾರುತ ಸುಳಿದು ಗಂಧವನು ಹಂಚಿದನು ನೀ ಬಂದೆ ಎನ್ನುವುದು ತಿಳಿಯಲಿಲ್ಲ ನದಿ ಹಾಡಿ ಓಡಿತು, ಬೆಳುದಿಂಗಳಾಡಿತು ಮೆಚ್ಚಿ ಸವರಿತು ಬೆಳಕು ಮುಗಿಲ ಗಲ್ಲ, ಮಣ್ಣ ಕಣ ಕಣವೂ ಚಿನ್ನ...













