ಅಂದು : ಕೆಲವರು,
ಬದುಕಿನ ಹಾದಿಲಿ,
ಘಮಿ ಘಮಿಸುವಾ
ಹಣ್ಣು, ಹೂವು…
ಹುಲ್ಲು, ದವನದಾ
ಕೃಷಿಗೇ…
ಶ್ರಮಿಸುತ್ತಿದ್ದರು!
ಇಂದು : ಕೆಲವರು,
ನಡೆವ ಹಾದಿಲಿ
ಮುಳ್ಳು, ಕಲ್ಲು, ಗಾಜು,
ಬಾಂಬಿಟ್ಟು, ಖುಷಿಪಟ್ಟು
ವಿಶ್ರಮಿಸುತ್ತಿರುವರು!!
ಒಂದೇ ನೆಲ,
ಜಲದ ಬಳ್ಳಿಯ ಹೂವುಗಳಿವು!
ಒಂದೆದೆಯ ಹಾಲು ಕುಡಿದವರು,
ಕೆಲವರು: ದೈವ ಸಮಾನರು!
ಅಂದು… ಸೀತೆ
ಶ್ರೀರಾಮನಿಂದೇ
ಕಾಡಿಗೆ!
ಇಂದು… ಸೀತೆ
ಶ್ರೀರಾಮನಿಂದೇ
ಬಾರಿಗೆ!
*****