ನಿನ್ನ ನಾನು ಪ್ರಿತಿಸುವೆನು ಶ್ಯಾಮ ಮಧುರ ಯಾಮಿನಿ ನಿನಗಾಗಿಯೆ ಹಾತೊರೆವೆನು ಸ್ವಪ್ನ ಲೋಕ ಸ್ವಾಮಿನಿ. ನೀ ಬಂದರೆ ಇಳೆಗಿಳಿವುದು ಅತುಲ ದಿವ್ಯ ಶಾಂತಿಯು ನಿನ್ನಿರುಳಲಿ ಕರುಳಿಗೆಲ್ಲಿ ಸಂಸಾರದ ಭ್ರಾಂತಿಯು ಉಕ್ಕಿಸುತ್ತ ಕಾಳ್ಗಡಲನು ಬ್ರಹ್ಮಾಂಡವ ಮುತ್ತಿದೆ ಬಾನ್ಬಯಲಲಿ ಹಣ್ಣಿಸಿರುವ ರವಿ ತೇಜವ ಮುಕ್ಕಿದೆ. ಅಂಧಂ...

  ಪ್ರಿಯೆ, ನಿನ್ನ ಆಶೆ‌ಆಕಾಂಕ್ಷೆಗಳು ಗರಿಗೆದರುವ ಕಾಲಕ್ಕೆ ನಾನು ತೀರದ ಹತ್ತಿರ ನಡೆದು ಬಂದಿದ್ದೆ. ಆಗ ಸೂರ್ಯ ಹಿಮ್ಮುಖವಾಗಿ ಉದಯಿಸುತ್ತಿದ್ದನೆಂದೇ ಹೇಳಬಹುದು. ಕಪ್ಪುಬಂಡೆಗಳನ್ನು ಹೊಡೆದುರುಳಿಸಬಲ್ಲ ಸ್ವಚ್ಛತೆಯ ಅಲೆಗಳು, ನಿರ್ಜೀವ ಹೆಣದ...

ಅಲಾವಿಯನು ನೋಡುವ ಅಲಾವಿಯನು     ||ಪ|| ಕೂಡಿ ಆಡುನು ಬಾ ಬಾ ಕಾಡ ಕರ್ಬಲದೊಳು ಖೇಲ                 ||೧|| ಈಟಿ ಕಠಾರಿಯು ನೀಟರೆ ಶಾಸ್ತ್ರವಶ ಕೋಟಿ ಬಲದ ಮೇಲೆ ಖೇಲ                ||೨|| ಶಾಹಿರ ಶಿಶುನಾಳ ಭೂವರ ಕವಿಗಳು ದೇವಲೋಕದೊಳು ಖೇಲ  ...

ನೋಡಲಾವಾ ಬಾರೋ ಬಾ ಗಡ               ||ಪ|| ನೋಡುನಲಾವಿಯ ಕೂಡಿಯಾಡುನು ಬಾ ಕಾಡ ಕರ್ಬಲದೊಳು ಖೇಲೋ ಅಲಾವಾ        ||೧|| ಫೌಜ ಸುಮರನ ರಾಜ ಯಜೀದನ ಹಾದಿಕಟ್ಟಿ ಹೊಡದಾಡಕಲಾವಾ                 ||೨|| ಕತ್ತಲ ಶಹಾದತ್ತ ಶಹೀದರಾಗುವದು ಗೊತ್ತ ಹತ...

ಆಡೋನು ಬಾ ಅಲಾವಿ ನೋಡೋನು ಗಡ ನಡೆ                    ||ಪ|| ಪಂಜ ತಾಬೂತು ಕಂಜರಹೀ ಮಾತು ಅಂಜಲಾಗದೆ ಗಡನಡೆ                     ||೧|| ಕರ್ಬಲ ಹೋಳಿ ಮಾರ್ಬಲ ಮಾಯಾ ತುಳಿ ತರಬಿ ತರಬಿ ತೋಲುತಾ ಗಡ ನಡೆ        ||೨|| ವಾಸನೆಂಬುವ ಸುಖ ಐಸು...

ತಾಯಿಗೊಬ್ಬ ಮಗ ಇದ್ದನು. “ಗಳಿಸಿಕೊಂಡು ಬರುತ್ತೇನೆ. ರೂಕ್ಕ ತರುತ್ತೇನೆ. ನೂರು ರೂಪಾಯಿಕೊಡು” ಎಂದು ಮಗನು ತಾಯಿಗೆ ಕೇಳುತ್ತಾನೆ. “ಮಗನೇ, ನೀನು ಮೊದಲೇ ಮರುಳ. ನೀನು ಗಳಿಸುವುದು ಸುಳ್ಳು. ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳ...

  ಒಲುಮೆಯ ಹೂವೇ, ನಾನು ಹಣ್ಣೆಲೆಯಾಗಿ ಉದುರುತ್ತಲೇ ನೀನು ವಸಂತವಾಗಿ ಉದಯಿಸಿದೆ. ಚಿನ್ನದಬಣ್ಣದ ನಿನ್ನ ಮುಂಗುರುಳಿನಲಿ ತಂಗಿದ ಆ ಅಸದೃಶ ರಾತ್ರೆಗಳು- ದನಿಗೆಟ್ಟ ಹಕ್ಕಿಯ ಗೊಗ್ಗರುಗಾನದಂತೆ ಮೈ ಹೊದೆಯುತ್ತಿವೆ. ಹಿತ್ತಲಿನ ಮುಳ್ಳು ಪೊದೆಗಳು-...

ಶರಣರಲಾವಿಯಾಡುನ ಬಾರೋ ಮನಕ ತಿಳಿದು ನೀ ನೋಡೋ           ||ಪ|| ಸಧ್ಯದಿ ಸಮರದೊಳು ಮಧ್ಯದಿ ಕೂಡುವ ಬುದ್ದಿವಂತರಲ್ಲೆ ತಿದ್ದಿಯಾಡುನು ಬಾ                   ||೧|| ಮಾಡೋದು ಚಂದ್ರನ್ನ ನೋಡಿ ಗುದ್ದಲಿ ಹಾಕಿ ಬೇಡಿಕೊಂಡು ಅಲಾವಿ ಕೂಡಿಯಾಡುನು ಬಾ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....