ಪ್ರಿಯೆ,
ನಿನ್ನ ಆಶೆಆಕಾಂಕ್ಷೆಗಳು ಗರಿಗೆದರುವ ಕಾಲಕ್ಕೆ
ನಾನು ತೀರದ ಹತ್ತಿರ ನಡೆದು ಬಂದಿದ್ದೆ.
ಆಗ ಸೂರ್ಯ ಹಿಮ್ಮುಖವಾಗಿ ಉದಯಿಸುತ್ತಿದ್ದನೆಂದೇ ಹೇಳಬಹುದು.
ಕಪ್ಪುಬಂಡೆಗಳನ್ನು ಹೊಡೆದುರುಳಿಸಬಲ್ಲ ಸ್ವಚ್ಛತೆಯ ಅಲೆಗಳು,
ನಿರ್ಜೀವ ಹೆಣದಂತೆ ಸಂಕಟವನ್ನು ಉಗಿಯತೊಡಗಿದ್ದವು
ಸಮುದ್ರದ ಮೇಲೆ.
ನೀನು ಸುಖಿಸುತ್ತಿದ್ದುದರ ಸಾರ್ಥಕತೆ, ಹದಗೆಟ್ಟು ಶೂನ್ಯವಾದ
ನನ್ನ ನೆಚ್ಚಿನ ತಾರುಣ್ಯ ಹಾಗೂ ಶಿಲೆಯಂತೆ ಪ್ರಬಲಗೊಳ್ಳುತ್ತಿರುವ
ರೋಗಗ್ರಸ್ಥ ದೇಹ;
ಇಲ್ಲಿ ನನ್ನದೆನ್ನುವ ಯಾವುದೇ ವಸ್ತುಗಳು, ಘರ್ಷಣೆ, ಸಂಬಂಧಗಳು
ಮತ್ತು ನಿನ್ನ ಸಮಾಧಿಯೂ ಒಳಗೊಂಡಂತೆ ಏನೊಂದು ಉಳಿಯಲಾರದು.
ಏಕೆಂದರೆ,
ನಾನೀಗ ನೆಮ್ಮದಿಯಿಂದ ಜೀವಿಸಬಲ್ಲೆನಾದರೂ ಬದುಕಲಾಗಲಿಲ್ಲ.
*****