ಅಡಿಕೆ ಸುಲಿಯುವುದು ಅತ್ಯಂತ ಕಷ್ಟಕರ ಕೆಲಸ. ಒಂದೇ ಗೊನೆಯಲ್ಲಿ ನಾನಾ ಬಗೆಯ ಅವಸ್ಥೆಯ ಅಡಿಕೆಗಳಿರುತ್ತವೆ. ಇವುಗಳನ್ನೆಲ್ಲ ಒಂದೊಂದಾಗಿ ಬಿಡಿಸಿ ಕಾಯಿಯಾದುದ್ದನ್ನು ಅಯ್ಕೆ ಮಾಡಿ ಸುಲಿಯುವುದಕ್ಕೆ ಸಮಯ ಹಿಡಿಯುತ್ತದೆ. ಮತ್ತು ಕೈ ಬೆರಳುಗಳಿಗೆ ಗಾಯವಾಗುವ ಸಂಭವಗಳೂ ಇವೆ. ಇಂತಹ ಸಂದರ್ಭದಲ್ಲಿ ಸಮಯದ ಮಿತಿಯೊಳಗೆ ಸ್ವಚ್ಛಂಧವಾಗಿ ಅಡಿಕೆ ಸುಲಿಯುವ ಯಂತ್ರವನ್ನು ಪ್ರಪ್ರಥಮವಾಗಿ ತಯಾರಿಸಿ ಅಡಿಕೆ ಬೆಳೆಗಾರರಿಗೆ ಅನುಕೂಲ ಮಾಡಿಕೊಟ್ಟವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ನರಸಿಂಹ ಬಂಡಾರಿಯವರು, ಇದಕ್ಕಾಗಿ ಹಲವು ವರ್ಷ ಇವರು ಶ್ರಮಪಟ್ಟಿದ್ದಾರೆ.
ಈ ಯಂತ್ರದ ತಿರುಗುವ ಚಕ್ರಕ್ಕೆ ಯಾವುದೇ ಗಾತ್ರದ ಅಡಿಕೆ ಕೊಟ್ಟರೂ ಅದು ಸುಲಿದು ಸಿಪ್ಪೆಯನ್ನು ಬೇರೆಯಾಗಿಸುತ್ತದೆ. ಮನುಷ್ಯರು ಸುಲಿಯುವ ಮೂರರಷ್ಟು ಈ ಯಂತ್ರ ಅಡಿಕೆ ಸುಲಿಯುತ್ತದೆ. ಗೋಟಡಿಕೆ ಸುಲಿಯಲಂತೂ ಈ ಯಂತ್ರ ಅತ್ಯಂತ ಅನುಕೂಲವಾಗಿದೆ. ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಎನ್ನುವ ಸಂಸ್ಥೆಯ ಸಹಕಾರದಿಂದ ಈ ಯಂತ್ರವನ್ನು ಬಂಡಾರಿಯವರು ತಯಾರಿಸಿದ್ದಾರೆ.
ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ತನ್ನ ಪ್ರಥಮ ಮಟ್ಟದ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಇವರುಗಳಿಸಿದ್ದಾರೆ.
*****