ಎಲ್ಲ ಮರೆತು ಹೋಗಲಿ

ಎಲ್ಲ ಮರೆತು ಹೋಗಲಿ
ನಿನ್ನ ಪ್ರೀತಿ ಪ್ರೇಮಾ ಪ್ರಣಯ|
ಮೋಸದಿಂದ ಹೊರ ಬಂದು
ತಿಳಿಯಾಗುತಿದೆ ನನ್ನಯಾ ಹೃದಯ|
ಶುದ್ಧಂತರಂಗದಿ ಪ್ರೀತಿಸಿ ನಿನ್ನ
ಭಗ್ನವಾಗಿದೆನ್ನ ಹೃದಯ||

ಸ್ನೇಹದಿಂದ ಪ್ರೀತಿ ಬೆರೆತು
ಅಂತರಿಕ್ಷಕೆ ಹಾರಿತು ಮನ|
ಗಾಳಿಪಟದಂತೆ ಮೇಲಕ್ಕೇರಿ
ಮುಗಿಲ ಮುದ್ದಿಸಿತಾದಿನ|
ಏಕೋ ಏನೋ ನನಗರಿಯೆ
ಸೂತ್ರ ಹರಿದು ನನ್ನ ಪ್ರೇಮಪಟ
ನೆಲಕ್ಕಪಳಿಸಿತೇ ಈ ದಿನ||

ಹಾಲುಜೇನಿನಂತೆ ಬೆರೆತು
ಪ್ರೀತಿ ಸವಿ ನೀಡಿತಾದಿನ|
ಸದಾ ಹೀಗೆ ಇರುವುದೆಂದು
ಭ್ರಮೆಯಲಿ ತೇಲಾಡಿತೀಮನ|
ಏಕೋ ಏನೋ ನನಗರಿಯೆ
ಹಾಲಾಹಲವಾಗೆನ್ನ ಪ್ರೀತಿಯ
ಮೃತ್ಯುಗೈದಿತು ಈ ದಿನ||
*****

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಡಿಕೆ ಸುಲಿಯುವ ಯಂತ್ರ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೮

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…