ಒಲುಮೆಯ ಹೂವು

 

ಒಲುಮೆಯ ಹೂವೇ,
ನಾನು ಹಣ್ಣೆಲೆಯಾಗಿ ಉದುರುತ್ತಲೇ
ನೀನು ವಸಂತವಾಗಿ ಉದಯಿಸಿದೆ.

ಚಿನ್ನದಬಣ್ಣದ ನಿನ್ನ ಮುಂಗುರುಳಿನಲಿ ತಂಗಿದ
ಆ ಅಸದೃಶ ರಾತ್ರೆಗಳು-
ದನಿಗೆಟ್ಟ ಹಕ್ಕಿಯ ಗೊಗ್ಗರುಗಾನದಂತೆ
ಮೈ ಹೊದೆಯುತ್ತಿವೆ.

ಹಿತ್ತಲಿನ ಮುಳ್ಳು ಪೊದೆಗಳು-
ಬೋಗನ್ ವಿಲಾ ಹೂಬಳ್ಳಿಗಳೇ ಮುತ್ತಿಕೊಂಡ
ಕೊರಕಲು ಹಾದಿಯತ್ತ ಉನ್ಮತ್ತಿಸಿ,
ಮುನ್ನುಗ್ಗುವಂತೆ ಮಾಡಿ ಮಂಜುಗಣ್ಣಾಗಿಸುತ್ತವೆ.

ಒಲುಮೆಯ ಹೂವೇ,
ನಾನು ವಸಂತವಾಗಿ ಮೈದುಂಬಿ ಬಂದ ದಿನ
ನೀನು ಮಣ್ಣಿಗೆ ಒಲಿದಿದ್ದೆ.

ಇರುಳನ್ನು ಮೀರಿ ನಿನ್ನ ಹಾಡು,
ನೀನಾಗಿ ಬೀಸಿ ಬರುತ್ತಿರುತ್ತದೆ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶರಣರಲಾವಿಯಾಡುನ ಬಾರೋ
Next post ಕಳ್ಳನ ಮಗಳು

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…