
ದಡ್ಡಿಯೆಂದು, ವಿಲಕ್ಷಣ ಸುಂದರಿಯೆಂದು ಅವಳನ್ನು ಅಗ್ಗವಾಗಿ ಸವಿಯಲು ಯತ್ನಿಸದಿರಿ. ಅವಳಲ್ಲಿ ಹಿಂದಿನ ನನ್ನ ಕಳಂಕರಹಿತ ಮನಸ್ಸು, ಸೋಲಿಲ್ಲದ ಮುಖವಿದೆ; ಮತ್ತು ಕೊಲೆಗೈಯ್ಯಬಹುದಾದ ಎಲ್ಲ ಲಕ್ಷಣಗಳಿರುವ ನನ್ನ ಈಗಿನ ಕ್ರಿಮಿನಲ್ ಬುದ್ಧಿಯೂ ಇರುತ್ತದೆ....
ಆ ಮನೆಯ ಅಂಗಳದ ಮರವೊಂದರ ಟೊಂಗೆಯಲ್ಲಿ ಜೀನುಹುಳುಗಳು ಗೂಡು ಕಟ್ಟಿದ್ದವು. ಮನೆಯ ಯಜಮಾನನಿಗೆ ಗೂಡೆಂದರೆ ಅಭಿಮಾನ, ಪ್ರೀತಿ, ಅವನು ಅದನ್ನು ಕಾಳಜಿಯಿಂದ ರಕ್ಷಿಸುತ್ತಿದ್ದ. ಗೂಡು ಕಟ್ಟಿದ ಜೇನುಹುಳುಗಳೂ ಅಷ್ಟೆ. ಒಮ್ಮೆಯೂ ಅಪಾಯಕಾರಿಯಾಗಿ ವರ್ತಿಸ...
ಸ್ನೇಹಿತರಿಬ್ಬರು ಅಪರೂಪಕ್ಕೆ ಪರಸ್ಪರ ಭೇಟಿ ಆದರು. ಶಾಮಣ್ಣ: “ಏನು ರಾಮಣ್ಣನವರೇ ಎತ್ತಲಿಂದ ಬರೋಣ ವಾಯಿತು?” ರಾಮಣ್ಣ: “ತೋಟದ ಕಡೆ ಹೋಗಿದ್ದೆ. ಅಪ್ಪನ ಆಸ್ತಿ ನೋಡಿಕೊಳ್ಳಬೇಕಲ್ಲ?” ಶಾಮಣ್ಣ: “ಓಹ್, ಅದು ಪಿತ್...
ಹೇಳದೆ ಕೇಳದೆ ಓಡುತ ಬರುತಿದೆ ಯೌವನ ತಂತಾನೆ ಲಂಗವನುಟ್ಟು ಕುಪ್ಪಸ ತೊಟ್ಟು ಬಹಳ ವೇಳೆಯಲಿ ಬರಿಮೈ ಬಿಟ್ಟು ಇದ್ದ ಹುಡುಗಿಗೆಲ್ಲಿಂದ ಬಂತು ಈ ಸೊಬಗಿನಸೋನೆ ||೧|| ಕಾಳ ಮೇಘದಾಕಾಶದ ಕೇಶವು ಕಣ್ಣಿಗೆ ಕವಿಯುತಿದೆ ಪುರುಷನ ಹೃದಯವು ಅದನ್ನು ಕಾಣುತ ನವಿಲ...
ಸತ್ಯ, ಸೂರ್ಯನಂತೆ ನೋಡುವುದು ಕಷ್ಟ ಸತ್ಯ, ಅಗ್ನಿಯಂತೆ ನುಂಗುವುದು ಕಷ್ಟ ಸತ್ಯ, ಬೆಟ್ಟದಂತೆ ದಾರಿ ಸವೆಸುವುದು ಕಷ್ಟ ಸತ್ಯ ಸಾಗರದಂತಾಗಲಿ ಮುಳುಗಿ ಮುಳುಗಿ ತೇಲುವುದು ಒಳಿತು ****...
`ಭವ’ ಕೈಗೆತ್ತಿಗೊಳ್ಳುವುದು ಆಧ್ಯಾತ್ಮಿಕ ಪ್ರಶ್ನೆಗಳನ್ನು : `ನಾನು ಯಾರು?’ ; `ನಾನು ಏನಾಗಿದ್ದೇನೆ?’ ; `ನಾನು ಏನಾಗಬೇಕು?’ ಎಂಬುವನ್ನು. ಇವು ಮೇಲೆ ನೋಟಕ್ಕೆ ಸರಳ ಪ್ರಶ್ನೆಗಳೆಂಬಂತೆ ಕಂಡರೂ, `ಭವ’ (ಅಸ್ತ...
ಬ್ಯಾಸರಾದಿತೊ ಹೇಸಿ ಕವಿ ಹಾಡುವದೈಸುರವೋ ||ಪ|| ದೇಶ ತಿರುಗಿ ನೀ ತಂದ ರಿವಾಯತ ಆಸರದೊಳು ಹಾಳ ಹರಟಿ ||೧|| ತಾಳವಿಲ್ಲದ ಮ್ಯಾಳ ಕಟ್ಟಿ ಫಲವೇನು ತ್ವಾಳಹೋಗಿ ಹುಲಿನುಂಗಿ ನೀರಾಟದಿ ಲೋಲ್ಯಾಡುವ ಹಾಳ ಹರಟಿ ...
ಚಳಿಗಾಲದಲ್ಲಿ ನಾವು ಮಳೆ ಬೀಳುವುದನ್ನು ನೋಡಿದೆವು; ಆದರೆ, ನಾವು ನೆನೆಯಲಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ದಿನಗಟ್ಟಲೆ ಕುಡಿಯುತ್ತ ಕುಳಿತಿದ್ದವರು ಮಾತ್ರ, ಹಿತ್ತಲಿನಲಿ ಸವೆದು ಬಿದ್ದ ಬೂಟುಗಳಂತೆ ತೋಯ್ದು, ಮಣ್ಣು ಸೇರುವಂತಿದ್ದರ...
ಆಕೆ ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಹೆಂಗಸು. ನೋಡಲು ಸುಂದರಿ. ತವರುಮನೆಯಲ್ಲಿದ್ದ ಆಕೆ ವಿಧವಾ ಬದುಕನ್ನು ಸಹಜವಾಗಿ ಅನುಭವಿಸತೊಡಗಿದ್ದಳು. ಪುರಾಣ, ಪುಣ್ಯಕಥೆಗಳನ್ನು ಆಲಿಸುವಲ್ಲಿ, ಮಠ, ದೇವಾಲಯಗಳಿಗೆ ಹೋಗುವಲ್ಲಿ ಶ್ರದ್ಧೆ ಬೆಳೆಸ...
ಪುಸ್ತಕಗಳನ್ನು ಅವಸರ ಅವಸರವಾಗಿ ಜೋಡಿಸಿಕೊಳ್ಳುತ್ತಿದ್ದ ಮಗನನ್ನು ತಂದೆ ವಿಚಾರಿಸಿದರು. ತಂದೆ: “ಯಾಕೋ ಇಷ್ಟು ಅವಾಂತರ ?” ಮಗ: “ಹತ್ತು ಘಂಟೆಗೆ ಕ್ಲಾಸ್‌ಇದೆ.” ತಂದೆ: “ಹತ್ತು ಘಂಟೆಗೆ ತಾನೆ? ಈಗಿನ್ನೂ ಒಂಭತ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....














