ಅತ್ತ ಹಿಮಗಿರಿ ಕಂಡೆ ಸುತ್ತ ಸಾಗರ ಕಂಡೆ ನಿನ್ನ ಕಾಣದೆ ಹೋದೆ ವೀರಭದ್ರಾ ಜಾತಿ ಜಂಜಡದಲ್ಲಿ ಕೋತಿ ಕಾಳಗ ಕಂಡೆ ನಿನ್ನ ಅರಿಯದೆ ನಿಂದೆ ವಿಶ್ವರುದ್ರಾ ॥ ಚರ್ಮ ದೇಹವ ನಂಬಿ ಚೂರು ದೇವರ ನಂಬಿ ನೂರು ದಾರಿಯ ಹಿಡಿದೆ ವೀರಭದ್ರಾ ಅತ್ತ ಸಾವಿನ ಹಬ್ಬ ಇತ್ತ ನೋವಿನ ಕಬ್ಬ ಚಟದ ಚಟ್ಟಕೆ ಬಿದ್ದೆ ಅಗ್ನಿರುದ್ರಾ ॥ ಎಲ್ಲಿ ...

  ಚಳಿಗಾಲದಲ್ಲಿ ನಾವು ಮಳೆ ಬೀಳುವುದನ್ನು ನೋಡಿದೆವು; ಆದರೆ, ನಾವು ನೆನೆಯಲಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ದಿನಗಟ್ಟಲೆ ಕುಡಿಯುತ್ತ ಕುಳಿತಿದ್ದವರು ಮಾತ್ರ, ಹಿತ್ತಲಿನಲಿ ಸವೆದು ಬಿದ್ದ ಬೂಟುಗಳಂತೆ ತೋಯ್ದು, ಮಣ್ಣು ಸೇರುವಂತಿದ್ದರ...

ಆಕೆ ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಹೆಂಗಸು.  ನೋಡಲು ಸುಂದರಿ.  ತವರುಮನೆಯಲ್ಲಿದ್ದ ಆಕೆ ವಿಧವಾ ಬದುಕನ್ನು ಸಹಜವಾಗಿ ಅನುಭವಿಸತೊಡಗಿದ್ದಳು.  ಪುರಾಣ, ಪುಣ್ಯಕಥೆಗಳನ್ನು ಆಲಿಸುವಲ್ಲಿ, ಮಠ, ದೇವಾಲಯಗಳಿಗೆ ಹೋಗುವಲ್ಲಿ ಶ್ರದ್ಧೆ ಬೆಳೆಸ...

ಪುಸ್ತಕಗಳನ್ನು ಅವಸರ ಅವಸರವಾಗಿ ಜೋಡಿಸಿಕೊಳ್ಳುತ್ತಿದ್ದ ಮಗನನ್ನು ತಂದೆ ವಿಚಾರಿಸಿದರು. ತಂದೆ: “ಯಾಕೋ ಇಷ್ಟು ಅವಾಂತರ ?” ಮಗ: “ಹತ್ತು ಘಂಟೆಗೆ ಕ್ಲಾಸ್‌ಇದೆ.” ತಂದೆ: “ಹತ್ತು ಘಂಟೆಗೆ ತಾನೆ? ಈಗಿನ್ನೂ ಒಂಭತ...

ಕಣ್ಣು ಕಣ್ಣು ಕೂಡಿದಾಗ ಸರ್ಪಕಂಡ ಗರುಡ ಹಾಕಿದ ಹೊಂಚು ಸೆಣೆಸಿ ಸೆಳಕೊಳ್ಳುವ ಸಂಚು ಮಿನುಗುವ ಕಣ್ಣಮಿಂಚು ಕುಣಿಕೆ ಕಣ್ಣಿಯ ಸುತ್ತಿ ಎಣಿಕೆಯ ಹೆಣಿಕೆ ಹಾಕುತ್ತದೆ ತಿನಿಸು ಕಂಡ ನಾಲಗೆ ಚಾಚಿ ಸಿಕ್ಕರೆ ಸಾಕು ಸಂದು ಗಬಕ್ಕನೆ ತಿಂದು ಹಸಿವಿಂಗಿಸಲು ಕಾಯ...

೧ `ಭಿತ್ತಿ’ ಭೈರಪ್ಪನವರ ಆತ್ಮವೃತ್ತಾಂತ. ಇಂದಿನ ದಿನಗಳಲ್ಲಿ ಚರ್ಚೆಯಾಗುತ್ತಿರುವ ಲಂಕೇಶರ `ಹುಳಿಮಾವಿನ ಮರ’ವೂ ಸೇರಿದಂತೆ, ಕನ್ನಡದಲ್ಲಿ ಸಾಕಷ್ಟು ಆತ್ಮಚರಿತ್ರೆಗಳು ಬಂದಿವೆ. ಆತ್ಮಚರಿತ್ರೆಯನ್ನು ಇವೊತ್ತು ಒಂದು ಸಾಹಿತ್ಯ ಪ್ರಕಾರ...

ಕಾಡೋಳಾಯ್ತು ಅಲಾವಿಯಾಡಿದರಾರೋ ನಾಡೊಳಗ ಐಸುರ ನೋಡಿದರಾರೋ         ||ಪ|| ಪಂಜ ತಾಬೂತ ಪೂಜೆಮಾಡಿದರಾರೋ ಹುಂಜನ ಕೊಯ್ದು ತಿಂದವರ‍್ಹೆಸರ‍್ಹೇಳಿ ಸಾರೋ    ||೧|| ಒಂದ ಕುಡಕಿಯೊಳು ಹಣಹಾಕಿದರಾರೋ ನಜರಿಟ್ಟು ದಾಳಿಂಬರಗೊನಿ ಊರಿದರ‍್ಯಾರೋ     ||೨||...

ಮಡೊನ್ನ, ಜೆನ್ನಿಫರ್ ಮತ್ತು ಮರಿಯಕ್ಯಾರೆ ಎಂಬ ಪಾಶ್ಚಾತ್ಯ ನೀರೆಯರ ಹಾಡುಗಳು ಅವರಿಬ್ಬರ ಮೈ ಮೇಲಿನ ಹಳದಿಬಟ್ಟೆಯನ್ನು ಬಿಚ್ಚಿಸುತ್ತಲಿದೆ. ಪ್ರಳಯದಂತೆ ಉಕ್ಕಿ ಬರುವ ಆ ಸಂಗೀತ ಗುಚ್ಛವೋ, ಗಾಳಿಯಲ್ಲಿ ತೇಲಾಡತೊಡಗಿದ ಆ ಬೀದಿಬದಿಯ ಚಿಂದಿಬಟ್ಟೆಗಳನ್ನ...

ಸೂರ್ಯ ಮುಳುಗಿದ ತುಸು ಹೊತ್ತಿನ ಮೇಲೆ ನಗರಸಭಾ ಆಯುಕ್ತರು ಮನೆಗೆ ಹೊರಟರು.  ಜವಾನ ವಾಹನದ ಬಾಗಿಲು ತೆರೆದು ನಿಂತ.  ಸಾಹೇಬರು ಒಳಗೆ ತೂರಿಕೊಳ್ಳಬೇಕೆನ್ನುವಷ್ಟರಲ್ಲಿ “ನಮಸ್ಕಾರ ಸಾಹೇಬರೆ…” ಎಂಬ ಕರ್ಕಶ ಧ್ವನಿಯೊಂದು ಕೇಳಿತು....

ಒಬ್ಬ ಮಹಿಳೆ ತನ್ನ ಆರು ಮಕ್ಕಳ ಸಹಿತ ಬಸ್ ಏರಿದಳು. ಬಸ್ ಹೊರಟಿತು. ಆ ಮಹಿಳೆ ಸಮೀಪ ಧಡೂತಿ ಆಸಾಮಿಯೊಬ್ಬ ಸಿಗರೇಟ್ ಸೇದುತ್ತಾ ಕುಳಿತಿದ್ದ. ಮಹಿಳೆ ಆತನನ್ನು ಉದ್ದೇಶಿಸಿ “ಮೇಲೆ ಬೋರ್ಡ್ ತಗುಲಿ ಹಾಕಿರೋದು ಕಾಣಿಸೊಲ್ಲ ಧೂಮಪಾನ ಮಾಡಬಾರದೆಂದು...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....