ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೫೭ ರೂಪ ಹಾಸನ March 3, 2020January 23, 2020 ಹಸಿವೆಂದರೆ ಹೇಳದೇ ಉಳಿದು ಹೋದ ನಿಗೂಢ ರೊಟ್ಟಿಯೆಂದರೆ ಆಡಿಯೂ ಕಳೆದು ಹೋದ ರಹಸ್ಯ. ಹೇಳಿದ್ದಕ್ಕೂ ಹೇಳದೇ ಉಳಿದದ್ದಕ್ಕೂ ನಡುವೆ ಅಗಾಧ ಕಂದರ. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೫೬ ರೂಪ ಹಾಸನ February 25, 2020January 23, 2020 ಮಾಡದ ತಪ್ಪು ಒಪ್ಪಿ ಕ್ಷಮೆ ಯಾಚಿಸುತ್ತದೆ ಬಡಪಾಯಿ ರೊಟ್ಟಿ. ತಾನೇ ತಪ್ಪು ಮಾಡಿಯೂ ಉದಾರವಾಗಿ ಕ್ಷಮಿಸುತ್ತದೆ ಪೀಠಸ್ಥ ಹಸಿವು. ಸ್ವಾಮಿತ್ವದ ಎದುರು ಲೋಕನಿಯಮಗಳು ತಲೆಕೆಳಗು. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೫೫ ರೂಪ ಹಾಸನ February 18, 2020January 23, 2020 ಹಸಿವಿನ ಕಾಲಿಗೆ ಬಿದ್ದು ಅದರ ಪಾರಮ್ಯವನ್ನು ಒಪ್ಪಿಕೊಂಡಿದ್ದ ರೊಟ್ಟಿ ಅದರ ಪರಿಧಿಯೊಳಗಿದ್ದೇ ಎಲ್ಲೆಗಳನ್ನು ಮೀರುತ್ತದೆ. ದಾಖಲಾಗಿದ್ದು ಸ್ಥಿರವೆಂಬ ವಿಭ್ರಮೆ ಹಸಿವೆಗೆ ಮೆಲ್ಲಗೆ ಸೀಮೆ ದಾಟಿದ ರೊಟ್ಟಿ ಅರಿವಿಲ್ಲದೇ ದಾಖಲೆ ಮೆಟ್ಟುತ್ತದೆ. ಆಕಾಶ ಮುಟ್ಟುತ್ತದೆ. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೫೪ ರೂಪ ಹಾಸನ February 11, 2020January 23, 2020 ರೊಟ್ಟಿಯ ಸಿಟ್ಟು ಅಸಹಾಯಕತೆಯಿಂದ ಕಾಲಕ್ರಮೇಣ ವಿಷಾದ. ಹಸಿವಿನ ಸಿಟ್ಟು ಪ್ರತಿಷ್ಠೆಯಿಂದ ನಿಧಾನಕ್ಕೆ ಕ್ರೌರ್ಯ. ಪಾತ್ರ ಸಿಟ್ಟಿನದಲ್ಲ ಕಾಲಗತಿಯದೂ ಅಲ್ಲ. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೫೩ ರೂಪ ಹಾಸನ February 4, 2020January 23, 2020 ರೊಟ್ಟಿ ಬರಬೇಕು ಹೀಗೆ ಹಸಿವಿನೆದೆ ಕರಗುವ ಹಾಗೆ ಕರಗಿದ್ದು ನೀರಾಗಿ ನೀರಾಗಿದ್ದು ಮನ ತಣಿಸುವ ಹಾಗೆ ತಣಿಸಿದ್ದು ಹಸಿವಿಡೀ ಆಕ್ರಮಿಸುವ ಹಾಗೆ ಆಕ್ರಮಿಸಿದ್ದು ಆವರಿಸಿ ಹಸಿವಿನೊಳಗೇ ರೊಟ್ಟಿ ಆವಿರ್ಭವಿಸಿ ಪಲ್ಲವಿಸುವ ಹಾಗೆ ಅಲ್ಲಿಯವರೆಗೂ ಹೀಗೇ... Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೫೨ ರೂಪ ಹಾಸನ January 28, 2020January 23, 2020 ಷರತ್ತುರಹಿತ ಮುಕ್ತತೆ ಹಸಿವಿನ ಆಗ್ರಹ ಆಪ್ತ ಬದ್ಧತೆ ರೊಟ್ಟಿಯ ಯಾಚನೆ. ಮುಕ್ತತೆ ಬದ್ಧತೆಗಳ ಪ್ರಮಾಣಗಳ ಹುಡುಕಾಟದಲ್ಲಿ ನಿತ್ಯ ಆಕರ್ಷಣೆ ಘರ್ಷಣೆ. ***** Read More