ನಾವು ಗೆಳೆಯರು ಹೂವು ಹಣ್ಣಿಗೆ

ನಾವು ಗೆಳೆಯರು ಹೂವು ಹಣ್ಣಿಗೆ ಚಿಗುರು ಕಾಯಿಗೆ ಚಲುವಿಗೆ ನಾವು ಹೊಸಯುಗ ನಗೆಯ ಹುಡುಗರು ಕಲ್ಲು ಮುಳ್ಳಿಗೆ ಕಾಡಿಗೆ ಗಿಡದ ಹಕ್ಕಿಯ ಕಂಠ ಕಂಠಕೆ ಸಿಹಿಯ ಸಕ್ಕರೆ ಹಂಚುವಾ ಮುಗಿಲ ಗಲ್ಲಕೆ ಪ್ರೀತಿ ತುಂಬಿಸಿ...

ನಮ್ಮಭಾಗ್ಯ

ಓ ನನ್ನ ಸೌಭಾಗ್ಯ! ಇಲ್ಲಿಹುದು ನೋಡು ನಮ್ಮ ನಿಜ ಭಾಗ್ಯ ನೋಡು! ಆಡು ಹಾಡು ನೀನು ನೀನೇ ಆಗು. ಆಗಸವ ತುಂಬಿವೆ ಮದದಾನೆ ಹಿಂಡಂತೆ ಗಾಂಭೀರ್‍ಯ, ಚೆಲುವಿನ ಬಿಳಿ ಮೋಡ ದಂಡು. ಬೆಳಗುತಿಹವು ಸುಮಂಗಲಿಯ...

ಅವಲಂಬನ

ನೋಡಿ ಕೊಂಡು ಬರಲಿ ಯಾರಿಗಾದರು ಸಹಜವಲ್ಲವೆ ಹೆತ್ತು ಹೊತ್ತವರ ತನ್ನೆಲ್ಲ ಹತ್ತಿರದವರ ನೋಡ ಬೇಕೆಂಬ ಆಸೆ. ಹೊತ್ತು ತರಲಿ ನೆನಪಿನ ಬುತ್ತಿಯನು ನೆನಪು ಉತ್ತೇಜನಕಾರಿಯಲ್ಲವೆ! ನಾವಾದರೆ ಎಲ್ಲೆಲ್ಲೋ ತಿರುಗಿ ಬರುವೆವು ಅವಳಿನ್ನೆಲ್ಲಿಗೆ ಹೋಗಿ ಬರಬೇಕು...

ನಾನು ಹೂವು ಮಧುರ ಮಾವು

ನಾನು ಹೂವು ಮಧುರ ಮಾವು ನಾನು ಶಿವನ ಗಾನವು ನಾನು ಅವನು ಕಬ್ಬು ಬಾಳೆ ಅವನೆ ನನ್ನ ಪ್ರಾಣವು ಮುಳ್ಳು ಇಲ್ಲ ಕಲ್ಲು ಇಲ್ಲ ಬೆಟ್ಟವೆಲ್ಲ ಬೆಣ್ಣೆಯು ಬಂಡೆಯೆಲ್ಲ ಉಣ್ಣೆ ಬಂಡೆ ದೊಡ್ಡ ಬೆಲ್ಲ...

ನಮ್ಮವಳು

ನಮ್ಮವಳು ನಾನು ನನ್ನ ಮಕ್ಕಳ, ನಮ್ಮ ಬಾಳುವೆಯ ಚೆಂಬೆಳಕು .. ಚೆಂಬೆಳಕು .. ಚೆಂಬೆಳಕು. ಹೊತ್ತುಟ್ಟ, ಹೊತ್ತು ಮುಳುಗ, ನಮಗೆ ಅವಳಿರಬೇಕು ಅವಳಿರುವಳು ಎಂತಲೆ ಆಗಿದೆ ನೇರುಪ ನಮ್ಮ ಬದುಕು... ನಿಜ ಹೇಳುವುದಾದರೆ ನಮಗೇ...

ಕಣ್ಣೀರು

ಸಂತೋಷದ ಕಡಲಲ್ಲಿ ತೇಲಾಡುತಿರಲು ನಾವು ನಗುವಿನ ಜೊತೆ ಕಣ್ಣೀರು ಬರುತಿರಲು ಅದುವೇ ಆನಂದ ಬಾಷ್ಪ. ದುಃಖದ ಒಡಲಲ್ಲಿ ಒದ್ದಾಡುತಿರಲು ನಾವು ಅಳುವಿನ ಜೊತೆ ಕಣ್ಣೀರು ಬಾರದಿರಲು ಅದುವೇ ಮಡುಗಟ್ಟಿದ ಶೋಕ. *****

ಜೀವನ ಸೂತ್ರ

ನಾನು, ನೀನು ಬಾಳಿನಲ್ಲಿ ಒಬ್ಬರನ್ನೊಬ್ಬರು ನಂಬದಿದ್ದರೆ ಇರುವುದೇನು ಹೊಂದಿಕೆ? ಹೆಜ್ಜೆ, ಹೆಜ್ಜೆಗೆ ಅನುಮಾನಿಸುತ್ತ ನಡೆದರೆ ಕಾಣ ಬಹುದೇನು ನೆಮ್ಮದಿ? ತಪ್ಪು, ಒಪ್ಪು ಸಹಜ ಅನುಸರಿಸಿ ಕೊಂಡು ಹೋಗದಿದ್ದರೆ ಆಗುವವೇನು ಊರ್ಜಿತ? ದಿನ, ದಿನಕೆ ಕಷ್ಟಗಳು...

ವರುಣನಿಗೆ (ಪ್ರಾರ್ಥನೆ)

ಬರಡಾಗುತಿದೆ ಬದುಕು ಭೂಮಿಗೆ ಮಳೆಯಿಲ್ಲದೆ ಜಾಲಾಡಿದರೂ ಜಲವಿಲ್ಲ ಜೀವಿಗಳಿಗೆ ಉಳಿವಿಲ್ಲ ಮಾನವರೆಲ್ಲೊ ಸೇರಿಸುವರು ಅಲ್ಲಿ ಇಲ್ಲಿ ಹೊತ್ತು ತಂದು ಮೂಕ ಪ್ರಾಣಿಗಳಿಗೆ ಬಂದಿದೆ ಜೀವಕ್ಕೆ ಕುತ್ತು ವರುಣ ನೀ ಕರುಣೆ ತೋರಿ ಸುರಿಸು ಮಳೆ...

ಏಳು ಕಂದಾ ಮುದ್ದು ಕಂದಾ

ಏಳು ಕಂದಾ ಮುದ್ದು ಕಂದಾ ತಂದೆ ಶ್ರೀಗುರು ಕರೆದನು ಮಕ್ಕಳಾಟವು ಸಾಕು ಮಗುವೆ ವ್ಯರ್ಥ ಸಾಕು ಎಂದನು ಕೈಯ ಹಿಡಿದನು ಕರುಣೆ ಮಿಡಿದನು ಮೇಲು ಮೇಲಕೆ ಕರೆದನು ಮೇಲು ಮೇಲಿನ ಮೇಲು ಮಠದಾ ಪ್ರೇಮ...

ಏನಂತಿ

ಇವಳೇ... ಕ್ಷಮಿಸು ಇತ್ತೀಚೆಗೆ ಯಾಕೋ... ನೀನು ನನಗೆ ಏನೂ ಅನಿಸೋದೆ ಇಲ್ಲ ಬಂಧನ ಸವಿ ಕಳೆದಿದೆ ಹೊರೆಯಾಗಿದೆ ಹಾಗಂತ... ನಿನ್ನ ನಡೆ ನುಡಿ ಬಗ್ಗೆ ಎರಡಿಲ್ಲ, ಆದರೂ ಯಾಕೋ ನಿನ್ನ ಯಾವುದೂ ಸುಖ ಕೊಡ್ತಿಲ್ಲ...