ಕವಿಯ ಹೃದಯ; ಕವನದುದಯ
ಸವಿಯ ರಸವು; ದೇವನೊಲವು
ಓ ಅವನ ಹೃದಯ ಕಲೆಯು
ಆವ ಲೀಲೆಯೋ ಕಾವ್ಯದೊಲವು
ಎಲ್ಲ ಕಲೆಗಾರನಹುದು ಕವಿಯು
ಇವನ ಮನವು ಸ್ವೈರ ಮನೆಯು
ಹರುಷ ಹೊರಸು ಹೆಣೆವ ಕಲೆಯು
ವಿರಸ ಹೊನಲು ತರುವ ಕವಿಯು
ಅವನ ಉಕ್ತಿ ಓಟ; ಓ ಹೃದಯ ಶಲೆ!
ಕಾಣದದನು ಕಾಣ್ವ ದಿವ್ಯದೃಷ್ಟಿ
ಅಮೃತದಾ ವೃಷ್ಟಿ, ಅದ್ಭುತದಾ ಲೀಲೆ
ವೈಚಿತ್ರಮಯವವನ ಸೃಷ್ಟಿ
ಅವನ ಆ ನೋಟ ಅರಿಯದಾ ಮಾಟ
ಅದಾವ ಲೋಕದಿಂದಿಳಿವ ಸರಸ ರಸ!
ಹೇಗೋ ಎನಿತೊ ತರುವನವನಾಟ
ವರ್ಣ ಹೊದಿಸುವ ಜಗಕೆ ಹೊಸ
*****