ಚಿಗುರಿದಾ ಹುಲ್ಲಲ್ಲಿ; ಚಲುವಿನಾ ಓಟದಲಿ
ಆಡುತಲಿ ಸುಳಿಸುಳಿವ ಓ ನಿಲ್ಲು ಹಾವೇ !
ನಿನ್ನ ಅಂದವೇನು ಬಣ್ಣ ಮಿಂಚುವ ನಿಲವಿನಲಿ
ವಿಷಹೊತ್ತ ಹೆಡೆಯೇ ನಿನ್ನ ಗೆಲುವಿನ ಠೀವೆ!
ತಡೆ ಇನ್ನೂ ಕ್ಷಣವನ್ನು ಮಿನುಗು ಮಿಂಚೆ
ನಾಕದಿಂ ಭುವಿಗೊಗೆದ ಬೆಳ್ಳಿಯೂ ಛಡಿಯೆ
ನಿನ್ನ ನೋಡಲು ನಿಂತಿಹೆನು ದಿಗಂತದಾಚೆ
ಹಾ! ಬೆಳ್ಳಿ ರೂಪದ ನೀನೊಂದು ಕಿಡಿಯೆ!!
ಎನಿತು ಅಂದದ ಗೊಂಬೆ, ಬೆಲೆ ಏನೊ!
ಚಂದ ವರ್ಣ ಸುವರ್ಣದಿರಬಹುದೆ ಎಂದೆ
ಎಲ್ಲ ಎಳೆಯರ ಕಣ್ಣು ಎಳೆದಿಹುದೇನೊ!!
ಕರಚಾಚಿ ನಾ ಹಿಡಿದೆ, ಓ ಕಿಟ್ಟದಾ ಗೊಂಬೆ!
ನಿಲ್ಲು ನೋಡುವೆನೆಂದೆ ಮೂಡಣದ ರವಿಗೆ
ಗಿರಿಶೃಂಗವೃಂದದಲಿ ಮೂಡುವೊಡೆ ಅವಗೆ
ಎನಿತು ಚಂದದ ಚಂಡು ಅಂದೆ ಭಾಸ್ಕರಗೆ
ಮೇಲೇರಿ ನಿಂದಾಗ; ಚಂಡಲ್ಲ ಕೆಂಡನೆಂದೆನವಗೆ
*****