ತ್ರಾಸ ಇಲ್ಲದೆ ಪ್ರಾಸವ ಪ್ರಸವಿಸಿ
ಪ್ರಾಸಗಳನ್ನು ತ್ರಾಸಲಿ ಲಾಲಿಸಿ
ಪೆನ್ನು ಹಿಡಿದರೆ Punನ್ನೀರನೆ ಹಾರಿಸಿ
ಚಿಟಿಕೆಗೊಂದು ಚುಟುಕವ ರಚಿಸಿ
ಖಂಡಿಗಟ್ಟಲೆ ಬರೆದೂ ಬರೆದು ಬಂಡಿ ತುಂಬುವವನೆ
ವಿಶೇಷ ಪುರವಣಿ ಸಂತೆಗಳಲ್ಲಿ ತುಂಬಿ ತುಳುಕುವವನೆ
ಪ್ರಾಸಾಂಕುಶದರ ಪಾರ್ವತಿ ಪುತ್ರ
ಚುಟುಕು ಪ್ರಪಂಚದ ಮಹಾನ್ ವಿಚಿತ್ರ
ಶುಂಡಾ ದಂಡಾಡ್ಯ ಗಂಡೋದ್ಗಲಿತ ಜಲೋಲ್ಲೋಲ
ಮತ್ತಾಲಿ ಮಾಲ ಶ್ರೀ ವಿಘ್ನರಾಜನೆ
ಮಂಡಿಯೂರಿ ಮೊದಲೊಂದಿಪೆ ನಿನಗೆ ದುಂಡಿರಾಜನೆ
ಜೈ ಜೈ ವಿಘ್ನರಾಜ
ಜೈ ಜೈ ಜೈ ದುಂಡಿರಾಜ
*****
Related Post
ಸಣ್ಣ ಕತೆ
-
ತ್ರಿಪಾದ
ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…
-
ಮೃಗಜಲ
"People are trying to work towards a good quality of life for tomorrow instead of living for today, for many… Read more…
-
ಸಂಶೋಧನೆ
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ತೊಳೆದ ಮುತ್ತು
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…