ಅಮ್ಮಾ ಅಮ್ಮಾ ಮೋಡವ ಮುಟ್ಟಿ
ನೋಡಲು ಹೇಗಿರತೆ?
ಬೆಣ್ಣೆಯ ಹಾಗೆ ಮಿದುವಾಗಿರತೇ-ನಿನ್ನ
ಕೆನ್ನೆಯ ಹಾಗೆ ನುಣುಪಾಗಿರತೇ?
ಹಾಸಿಗೆಯಂತೆ ಮೆತ್ತಗಿರತ್ತೇ–ಬಿದ್ದು
ಹೊರಳಾಡಬಹುದೇ ಉರುಳಾಡಬಹುದೇ?
ಇರುಳೆಲ್ಲಾ ನಾವದರಲಿ ಮಲಗಿರಬಹುದೇ
ಚದ್ದರ ಬಿಟ್ಪು ಕನಸುಗಳನೇ ಹೊದ್ದು?
ಚಿಕ್ಕದು ಮಾಡಿ ಜೇಬಲಿ ಇಟ್ಟು
ಬೇಕಾದಲ್ಲಿಗೆ ಕೊಂಡೊಯ್ಯಬಹುದೇ?
ಅಥವಾ ಅವನೇ ಗದ್ದುಗೆ ಮಾಡಿ
ದೇಶವಿದೇಶಕೆ ಹೋಗಲು ಬಹುದೇ?
ಅಲ್ಲಿಂದ ನೋಡಿದರೆ ಮನೆ ಹೇಗಿರತೆ
ಹೊಲ ಹೇಗಿರತೆ
ಬೆಟ್ಪ ಹೇಗಿರತೆ ಹೊಳೆ ಹೇಗಿರತೆ
ಪುಟ್ಜ ಪುಟ್ಪ ಗಿಡಗಳು ಹೇಗಿರತೆ
ಚಂದಿರನಲ್ಲಿಗೆ ಬರುವನೆ ಬಂದು
ನಮ್ಜೊತೆ ಕೂತು ಮಾತಾಡುವನೇ?
ನಕ್ಷತ್ರಗಳೂ ಒಂದೈದಾರು
ಹೆಕ್ಕಲು ಸಿಗುವುವೆ ನಮಗಲ್ಲಿ?
*****