ಕುಲಕರ್ಣಿ ಕೊಟ್ಟ ಪಾವಲಿ ರೊಕ್ಕ

ಕುಲಕರ್ಣಿ ಕೊಟ್ಟ ಪಾವಲಿ ರೊಕ್ಕದೀ
ಬ್ರಹ್ಮನೆಲಗಾಂಬುದ್ಯಾಂಗಲೋ ಮನಸೇ
ಬಲುದಿನದ ಸಲಗಿಯಲಿ
ಸಾಲಿ ಬರಸಿದ ಸ್ನೇಹ ತಿಳಿದು ಇಲ್ಲಿಗೆ ಬಂದೆಲ್ಲೇ ಮನಸೇ ||೧||

ಪೊಡವಿಯೊಳು ಗುಡಗೇರಿ ಹಿರಿಯ ಪೋಲೀಸ-
ಗೌಡ ಕರೆದರೆ ಇಲ್ಲಿಗೆ ಬಂದೆಲ್ಲೇ ಮನಸೇ
ಕಡು ಹರುಷ ಇವನ ಐಶ್ವರ್ಯ ಹಂಗಿನಲಿ
ಜಡಮತಿಗೆ ಯೋಗ್ಯವಾದೀತೆ ಮನಸೇ ||೨||

ಸ್ಥೂಲತನುಕಾರ್ಯ ಕಚೇರಿ ಮಾಮಲೆದಾರ-
ನಾಲಯಕೆ ಹೋಗಸಿದೆಲ್ಲಲ್ಲೋ ಮನಸೇ
ವಸುಧಿಯೊಳ್ ಶಿಶುನಾಳಧೀಶನೂರವನ ಕವಿತಾ
ಹೆಸರು ಗುರುಗೋವಿಂದನೇ ಮನವೇ
ತುಸುಕೊಟ್ಟನೆಂದು ಜರಿಯಬ್ಯಾಡಾ
ಆಸೆಯನು ಮುರಿದು ಮುಂದಕ್ಕೆ ನಡೆಯಲೋ ಮನಸೇ ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಲ್ವರ್ ಮರಗಳ ದೊಡ್ಡ ಕಾಡು
Next post ಉತ್ತರಾಧಿಕಾರಿ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…