Home / ಕಥೆ / ಕಿರು ಕಥೆ / ಉತ್ತರಾಧಿಕಾರಿ

ಉತ್ತರಾಧಿಕಾರಿ

ಅಮರಪ್ಪನವರು ತಮ್ಮ ಇಡೀ ಆಯುಷ್ಯವನ್ನು ರಾಜಕೀಯದಲ್ಲೇ ಕಳೆದರು.  ಅಧಿಕಾರದ ಸುಖ ಅನುಸರಿಸುವರು.  ಸಾಕಷ್ಟು ಧನ, ಕನ, ಸಂಪತ್ತು ವರ್ಧಿಸಿಕೊಂಡರು.  ದೆಹಲಿ, ಬೆಂಗಳೂರು, ಸ್ವಂತ ಊರು ಎಲ್ಲೆಂದರಲ್ಲಿ ಬಂಗ್ಲೆ ಪ್ಲಾಟು ಹೊಂದಿದ್ದರು.

ದೇಶದ ರಾಜಕಾರಣಕ್ಕೆ ಅನಿವಾರ್ಯವೆನ್ನುವಂತಿದ್ದ ಅವರಿಗೆ ಇತ್ತಿತ್ತಲಾಗಿ ಸಕ್ಕೆ ಕಾಯಿಲೆ, ಹೃದಯ ಬೇನೆ, ಬೆನ್ನು ನೋವು, ಮಂಡಿ ಬೇನೆ, ಉಬ್ಬನ, ಗಂಟಲು ಬೇನೆ ಹೀಗೆ ವಿವಿಧ ಕಾಯಿಲೆಗಳು ಒಮ್ಮೆಲೆ ಅಕ್ರಮಿಸಿಕೊಂಡು ಅವರ ಜೀವದ ಸೊಗಸನ್ನೇ ಹಿಂಡಿ ಹಾಕಿದ್ದವು.  ಬೆನ್ನುವ ನೋವು, ಗಂಟಲು ನೋವಿನ ಚಿಕಿತ್ಸೆಗೆಂದು ಅವರು ಸರಕಾರಿ ಖರ್ಚಿನಲ್ಲಿ ವಿದೇಶಕ್ಕೂ ಹೋಗಿ ಬಂದಿದ್ದರು.  ವೈದ್ಯರು ಅವರಿಗೆ ಹಚ್ಚು ಮಾತಾಡದಿರಲು ಎಚ್ಚರಿಸಿದ್ದರು.  ತೆವಲುಗಳಿಂದ ದೂರವಿರಲು, ಆಹಾರದ ಬಗ್ಗೆ ಕಟ್ಟುನಿಟ್ಟು ಪಲಿಸಲು, ಹೇಳಿದ್ದೂ ಅಲ್ಲದೆ ಆವೇಶಕ್ಕೆ ಅವಕಾಶ ನೀಡಬಾರದೆಂದು ಸ್ಪಷ್ಟವಾಗಿ ಹೇಳಿದ್ದರು.  ಅಮರಪ್ಪನವರು ತಮ್ಮ ಹತವೈಭವವನ್ನು ನೆನಪು ಮಾಡಿಕೊಳ್ಳುತ್ತ ಇರಬೇಕಾದ ಪರಿಸ್ಥಿತಿ ಒದಗಿತು.

ಕೊನೆಗೂ ತಮ್ಮ ಅಭಿಮಾನಿಗಳ ಸಮಾವೇಶವನ್ನು ನಡೆಸಿ ತಾವು ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಘೋಷಿಸಿದರು.  ಕೂಡಿದ ಜನ ಬೇಸರದಿಂದ “ನಾವು ಅದಕ್ಕೆ ಅವಕಾಸ ನೀಡುವುದಿಲ್ಲ” ಎಂದರು.  “ನೀವೇ ನಮಗೆ ದಿಕ್ಕು ದೆಸೆ ನಮ್ಮನ್ನು ಅನಾಥರನ್ನಾಗಿ ಮಾಡಬೇಡಿರಿ” ಎಂದು ಗೋಳಾಡಿದರು.  ತಮ್ಮ ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ಮಾರು ಹೋದ ಅಮರಪ್ಪನವರು “ನಾನು ನಿಮ್ಮೊಂದಿಗೆ ಇರುತ್ತೇನೆ.  ನಿಮ್ಮೆಲ್ಲರ ಅನುಕೂಲಕ್ಕಾಗಿ ನನ್ನ ಉತ್ತರಾಧಿಕಾರಿಯೊಬ್ಬ ಇರುತ್ತಾನೆ.  ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ನಿಷ್ಠೆ, ಗೌರವ, ಅಭಿಮಾನದ ಬೆಂಬಲವನ್ನು ನೀವು ಅವನಿಗೂ ಕೊಡಬೇಕು.  ನಾನೆಂದರೆ ಅವನು;  ಅವನೆಂದರೆ ನಾನು ಎಂದು ತಿಳಿಯಬೇಕು” ಎಂದರು.

ಅವರು ಹಾಗೆ ಹೇಳುತ್ತಿರುವಂತೆ ವೇದಿಕೆಯ ಮೆಲಿದ್ದ ಐದಾರು ಯುವಕರ ಮುಖ ಅರಳಿಕೊಂಡವು.  ಅವರೆಲ್ಲ ಅಮರಪ್ಪನವರ ಖಾಸಾ ಆದ್ಮಿಗಳಾಗಿದ್ದರು.  ಹಗಲಿರುಳು ಅವರ ಏಳ್ಗೆಗಾಗಿ, ಪ್ರತಿಷ್ಠೆಗಾಗಿ ರಕ್ತ ಸುಟ್ಟುಕೊಂಡಿದ್ದರು.  ನಿಷ್ಠೆಯಿಂದ ಶ್ರಮಿಸಿದ್ದರು.  ಬದುಕು ಸವೆಸಿದ್ದರು.  ಅನೇಕ ಸಂದರ್ಭಗಳಲ್ಲಿ ಅಮರಪ್ಪ ಆ ತರುಣರ ಬಗ್ಗೆ ಮೆಚ್ಚುಗೆ ಮಾತು ಆಡುತ್ತ ನಾಯಕರನ್ನಾಗಿಸುವ ಆಸೆ ತೋರುತ್ತಲೇ ಬಂದಿದ್ದರು.  ಈಗ ಅಂಥ ಅವಕಶ ಬಂದೀತೆಂದು ತರುಣರು ಹಿಗ್ಗಿಕೊಂಡು ತಮ್ಮ ಗರಿಗರಿ ಅಂಗಿ ತೀಡಿಕೊಂಡು ಮೈಯೆಲ್ಲಾ ಕಿವಿಯಾಗಿ ಕುಳಿತರು.  ಅಮರಪ್ಪ ಅವರತ್ತ ದೃಷ್ಟಿ ಚೆಲ್ಲಿ ತಮ್ಮ ಉತ್ತರಾಧಿಆರಯಿನ್ನು ಸಾರಿಯೇ ಬಿಟ್ಟು “ಮಹಾಜನಗಳೆ, ನಿಮಗೆಲ್ಲರಿಗೂ ಇನ್ನು ಮುಂದೆ ನನ್ನ ಮಗನೆ ನಾಯಕ!”

*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...