ಅಡಗಿ ಮಾಡುವರೇನೋ ಇಬ್ಬರು ಕೂಡಿ

ಅಡಗಿ ಮಾಡುವರೇನೋ ಇಬ್ಬರು ಕೂಡಿ
ಅಡಗಿ ಮಾಡುವರೇನೋ ||ಪ||

ಪೊಡವಿ ಪಾಲಿಪ ಗೊಡವಿಯಾಕೆ
ಕೆಡುವ ಸಿಟ್ಟಿನ ಕಲಹ ಸಾಕೆ
ಬಲಿಯ ಬೀಳುವ ವಲಿಯ ಗುಂಡು
ಸಲುಹುವದು ಸಾಕ್ಷಾತ ಎನಗೆ ||ಅ.ಪ.||

ಪಲ್ಲೆ ಪಚ್ಚಡಿಯ ಮಾಡಿ
ನಮ್ಮ ಗುರುವಿಗೆ ಮುಚ್ಚುತ ತಾ ನೀಡಿ
ಹಸರಿನಾಂಬ್ರ ಕೊಸರಿ ಬೆಳೆಸಿ
ಮೊಸರು ಮಜ್ಜಿಗೆ ಬೆಣ್ಣಿ ಕಾಸಿ
ಹಸನಾದದಿದು ಗುಪ್ತ ಮಾತಿದು
ಚಿತ್ತಜಮುಖಿ ಯೆತ್ತಿ ನೋಡಲು ||೧||

ಅಣ್ಣ ಜ್ಞಾನಿಗಳ ಕಂಡು ಬಣ್ಣಿಸಲಾರೆ
ಸಣ್ಣ ಶಾವಿಗೆನುಂಡು
ಅನ್ನ ದಾನ ಇನ್ನು ಕೊಡಲು
ಎನ್ನ ಸಿಂಹಾಸನಕೆ ಬಂದು
ಚನ್ನ ಶಿಶುನಾಳೇಶನಡಿಗೆ
ಓಂ ನಮಃ ಶಿವಾಯೆನುತ ||೨||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಣ್ಣಾಕ ನೀಡಿದಿ ನಮ್ಮವ್ವಾ
Next post ಬಟ್ಟಿ ಕಟ್ಟಿಸಿದೆ ರುದ್ರವ್ವಾ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…