“ಒಂದು ಒಂದು ಎರಡು ಆದ್ರೆ
ಎರಡು ಎರಡು?” – “ನಾಲ್ಕು
ನಾಲ್ಕು ಚಕ್ಲಿ ಬೇಕು!”
“ಎರಡು ಎರಡು ನಾಲ್ಕು ಸರಿ
ಮೂರು ಮೂರು?” – “ಆರು
ಆರು ಲೋಟ ಖೀರು!”
“ಮೂರು ಮೂರು ಆರು ಹೌದು
ನಾಲ್ಕು ನಾಲ್ಕು?” – “ಎಂಟು
ಬಿಚ್ಚು ತಿಂಡಿ ಗಂಟು!”
“ನಾಲ್ಕು ನಾಲ್ಕು ಎಂಟು, ನಿಜ
ಐದು ಐದು?” – “ಹತ್ತು
ಉಂಡೆ ಜೀಬಿಗ್ ಬಿತ್ತು!
“ಐದು ಐದು ಹತ್ತು, ಸರಿ
ಆರು ಆರು?” – “ತಾಳಿ
ತಿಂಡಿ ಬಂತು ಏಳೀ.”
*****