Home / ಲೇಖನ / ವಿಜ್ಞಾನ / ತೂತು ಬಿದ್ದ ನೀಲಿ ಛತ್ರಿ !!

ತೂತು ಬಿದ್ದ ನೀಲಿ ಛತ್ರಿ !!

ಈ ಜಗತ್ತೆ ಒಂದು ಜೀವಸಂಕುಲದ ಮಹಾನ್ ಜೀವಶಕ್ತಿ ಇದನ್ನೂ ರಕ್ಷಿಸಲೊಂದು ಬೃಹತ್ ಆಕಾರದ ಛತ್ರಿ, ತೂತು ಬಿದ್ದರೆ ಸೂರ್ಯನ ಕಿರಣ ಒಳನುಗ್ಗಿ ನಮ್ಮನ್ನೇ ಬಲಿ ತೆಗೆದುಕೊಳ್ಳಬಹುದು. ಈಗಾಗಲೇ ಹೀಗಾಗಿದೆ. ಹೊಲಿಯಲು ಆಗದ ಈ ಛತ್ರಿಗೆ ನಾವೇ ಕೆಳನಿಂತು ಪರಿಸರವನ್ನು ಕೆಡಿಸಿ ಸ್ಪೋಟಕಗಳಂಥಹ ಅನಿಷ್ಟ ವಾಯುವನ್ನು ತೂರಿ ತೂತು
ಕೊರದದ್ದು ತೂತು ಬಿದ್ದ ಈ ನೀಲಿ ಛತ್ರಿಯ ಕೆಳಗಿನ ಜೀವ ಸಂಕುಲದ ರಕ್ಷಣೆ ಕಷ್ಟ ಸಾಧ್ಯ. ಇದಕ್ಕೆ ಪರಿಹಾರವನ್ನು ನಾವೇ ಕಂಡುಕೊಂಡು ಇನ್ನಷ್ಟು ಛತ್ರಿ ಹರಿಯದಂತೆ ನೋಡಕೊಳ್ಳಬೇಕಿದೆ ಹಾಗಾದರೆ ಈಗಿರುವ ಅಪಾಯದ ಕ್ಷಣಗಳಲ್ಲಿಯೇ ದಿನಗಳನ್ನು ಕಳೆಯಬಹುದು.

ಈ ಮಾತನ್ನು ಹೇಳಿದ್ದು ಭೂವಾತಾವರದಿಂದ 10 ಕಿ.ಮೀಟರ್ ಮೇಲಿನಿಂದ 40 ಕಿ.ಮೀಟರ್ ವರೆಗೆ ಆಕಾಶಕ್ಕೆ ನೀಲಿ ಪರದೆಯಂತೆ ಹಬ್ಬಿಕೊಂಡಿರುವ ಓಜೋನ್, ಪರದೆ ಈ ಪರದೆ ನೈಸರ್ಗಿಕವಾಗಿಯೇ ಮಾನವ ಜಗತ್ತಿಗೆ ಕೊಟ್ಟ ವರ ಓಜೋನ್ (ಆಮ್ಲಜನಕದ ಬಹುದೂಪ) ತೆಳು ನೀಲಿ ಬಣ್ಣದಿಂದ ಕೂಡಿದ್ದು ನಾವು ಆಕಾಶ ನೋಡಿದಾಗ ಅರಿವಾಗುತ್ತದೆ. ಸೂರ್ಯನೊಂದು ಮೆಗಾವಾಟ್ಸ್‌ನಿಂದ ಉರಿಯುತ್ತಿರುವ ಅಗ್ನಿ ಕುಂಡ, ಇದರಿಂದ ಬರುವ
ಕ್ಷ- ಕಿರಣಗಳು (Ultra Violet Rags) ನೇರವಾಗಿ ಭೂಮಿಗೆ ಬಿದ್ದರೆ ಜೀವಕೋಟಿಗೆ ಅತ್ಯಂತ ಅಪಾಯಕಾರಿ ಪರಿಣಾಮ ಉಂವಾಗುತ್ತದೆ. ಈ ಭೀಕರ ಕಿರಣಗಳನ್ನು ಶಾಂತಗೊಳಿಸಿ ಸೂಕ್ಷ್ಮವಾಗಿ ಭೂಮಿಗೆ ಕಳಿಸುತ್ತವಾದ್ದರಿಂದ ಇದಕ್ಕೆ ‘ರಕ್ಷಾಕವಚ’ ವೆಂದೂ ಕರಯಲಾಗುತ್ತದೆ. ಸೂರ್ಯನ ರಶ್ಮಿಯಲ್ಲಿರುವ ಅಲ್ಟ್ರಾವಾಯೋಲೆಟ್, ಕಿರಣಗಳು ಜೀವಿಗೆ ಮಾರಕವಾದ್ದರಿಂದ ಅದನ್ನು ಫಿಲ್ಬರ್ ಮಾಡಿಕಳಿಸುವುದೇ ಈ ಓಜೋನ್.

ಭೂಮಿಯ ಮೇಲಿನ ಪರಿಸರ ಮಾಲಿನ್ಯದ ತೀವ್ರತೆಯಿಂದಾಗಿ ಅಂದರೆ ಕೈಗಾರಿಕೆಗಳ ಹೊಗೆ, ಅಗ್ನಿ ದುರಂತಗಳ ಪರಿಣಾಮ, ರಾಕೇಟ್, ಜೆಟ್, ವಿಮಾನಗಳ ಇಂಧನ ಉರಿಸುವಿಕೆ (ಈ ಇಂಧನವು ಇಂಗಾಲದ ಮಾನಕ್ಸೈಡ್ ಮತ್ತು ಮತ್ತುಇಂಗಾಲದ ಡೈ ಆಕ್ಸೈಡ್ ಅನಿಲಗಳು ಹೊರಚಲ್ಲುತ್ತದೆ.) ಗಳಿಂದಾಗಿ ಈ ಪರದೆ ಅಲ್ಲಲ್ಲಿ ತೂತು ಬಿದ್ದಿದ್ದರಿಂದ ಸೂರ್ಯನಿಂದ ನೇರವಾಗಿ ಅಲ್ಟ್ರಾವಾಯೊಲೆಟ್ ಕಿರಣಗಳು ಭೂಮಿಯೆಡೆಗೆ ಧಾವಿಸಿ ಬರುತ್ತವೆ. ಈ ಕಾರಣವಾಗಿ ಅತ್ಯಂತ ಅಧಿಕ ಉಷ್ಣತೆಯಿಂದ ಅನೇಕ ಅಪಾಯಗಳಾಗುತ್ತಲಿವೆ. ಮನುಷ್ಯರಿಗೆ ಬರುವ ಚರ್ಮದ ಕ್ಯಾನ್ಸರಿನ ಪ್ರಮಾಣವು ಹೆಚ್ಚುತ್ತಿರುವುದಕ್ಕೆ ಈ ಓಜೋನ್‌ ಪದರದ ಕ್ಷೀಸುವಿಕೆಯೇ ಕಾರಣವಾಗಿದೆ. ನಾವು ಬಳಸುತ್ತಿರುವ ರಾಸಾಯನಿಕಗಳು ವಾಹನಗಳಿಂದ ಕೈಗಾರಿಕೆಗಳಿಂದ ಹೊಮ್ಮುವ ಹೊಗೆಯಲ್ಲಿರುವ ಅನಿಲಗಳು ಓಜೋನ್ ಪದರವನ್ನು ತೂತು ಮಾಡುತ್ತದೆ ಎಂದು ಕಂಡು ಹಿಡಿಯಲಾಗಿದೆ. ಈ ಪದರದ ಕ್ಷೀಣಿಸುವಿಕಗೆ ಇತ್ತೀಚಿಗೆ
ಅಧ್ಯಯನವು ನೈಟ್ರಿಕ್ ಆಕ್ಸೈಡ್ ಪ್ರಬಲ ಕಾರಣವೆಂದು ಹೇಳಿದೆ.

ಅಪಾಯಕಾರಿ ರಾಸಾಯನಿಕ ಗೊಬ್ಬರಗಳು : ಈ ನೈಟ್ರಿಕ್ ಆಕ್ಸೈಡ್ ಅನಿಲವು ಜಗತ್ತಿನಾದ್ಯಂತ ಕೃಷಿಕರು ಬಳಸುತ್ತಿರುವ ಅತೀವ ಪ್ರಮಾಣದ ರಾಸಾಯನಿಕ ಗೊಬ್ಬರಗಳಲ್ಲಿ ಅಧಿಕವಾಗಿದೆ ಎಂದು ಕಂಡು ಹಿಡಿಯಲಾಗಿದೆ. ಇದರಿಂದ ಯಾರೂ ಅರಿಯದಷ್ಟು ಪ್ರಮಾಣದಲ್ಲಿ ದುಷ್ಟರಿಣಾಮ ಬೀರಿದೆ. ಓಜೋನ್ ವಲಯವನ್ನು ಕ್ಷೀಣಿಸುವ ಕ್ಲೋರಿನ್ ಹ್ಯಾಲನ್ ಮತ್ತು ಬ್ರೋಮೈಡ್‌ನಂತಹ ವಸ್ತುಗಳನ್ನು ಬಹಿಷ್ಕರಿಸುವ ಮಾತುಗಳು ಕೇಳಿಬರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗೊಳ್ಳಲು ಕೃಷಿಕರು ಬಳಸುತ್ತಿರುವ ರಾಸಾಯನಿಕ ಗೊಬ್ಬರಗಳು ಮುಖ್ಯಕಾರಣವಾಗಿದೆ. ಪ್ರತಿವರ್ಷಕ್ಕಿಂತ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಈ ಗೊಬ್ಬರಗಳು ಮುಖ್ಯಕಾರಣವಾಗಿವೆ. ಪ್ರತಿವರ್ಷಕ್ಕಿಂತ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಈ ಗೊಬ್ಬರಗಳು ಭೂಮಿಯನ್ನು ಸೇರುತ್ತವೆ. ಈ ಕಾರಣವಾಗಿ ಓಜೋನ್ ದುರ್ಬಲಗೊಳುತ್ತದೆ.

ಓಜೋನ್‌ ಪರದೆಯು ದುರ್ಬಲಗೊಂಡು ಕ್ಷೀಣಿಸುವುದು ತಡೆಗಟ್ಟಲು ಇಂಥಹ ರಾಸಾಯನಿಕವನ್ನು ಬಳಸದೇ ಇರುವುದು, ಅಗ್ನಿದುರಂತಗಳನ್ನು ತಡೆಯುವುದು ಪರಿಸರವನ್ನು ಮಲಿನಗೊಳಿಸದೇ ಇರುವುದೇ ಆಗಿದೆ. ಈ ನಿಟ್ಟಿನಲ್ಲಿ ಚಿಂತಿಸಲು ವಿಶ್ವದ ಅನೇಕ ವಿಜ್ಞಾನಿಗಳು ಸೇರುತ್ತಿದ್ದಾರೆ. ಅಮೇರಿಕಾದ ವಿಜ್ಞಾನಿಗಳು ಮುಂದುವರೆದು ತೂತುಬಿದ್ದು ಸ್ಥಳವನ್ನು ತೇಪೆ ಹಾಕಲು ಪ್ರಯತ್ನ ಪಟ್ಟರೂ ಫಲಕಾಣಲಾಗಿಲ್ಲ.
************

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...