ಭೂಮಿಯ ಶೇ. ೭೧ ಭಾಗವು ನೀರಿನಿಂದ ಆವರಿಸ್ಪಟ್ಟಿರುವುದರಿಂದ ಈ ನೀರಿನ ಸಂಚಯಗಳೇ ಸಾಗರಗಳಾದವು. ಮಾರುತಗಳು ನೀರಿನಲ್ಲಿ ಅಲೆಗಳನ್ನು ಉಂಟು
ಮಾಡುವುದರಿಂದಲೂ ಮತ್ತು ಚಂದ್ರನ ಗುರುತ್ವಾಕರ್ಷಣೆ ಶಕ್ತಿಯಿಂದಲೂ ‘ಉಕ್ಕು’ ಮತ್ತು ‘ಕೆಳಭರತ’ಗಳು ಉಂಟಾಗುವುದರಿಂದ ಸಾಗರ ಮತ್ತು ಸಮುದ್ರಗಳ ಮೇಲ್ಮೈಯು ನಿರಂತರವಾಗಿ ಅವಿಶ್ರಾಂತ ಸ್ಥಿತಿಯಲ್ಲಿದೆ. ಸಾಗರತಜ್ಞರು ಅಂತರ್ಜಲ ಕ್ಯಾಮರಗಳು, ಪ್ರತಿಧ್ವನಿ ಶಬ್ದಯಂತ್ರಗಳು, ಸೋನಾರ್‌ಗಳು ಮತ್ತು ಜಲಂತರ್ಗಾಮಿ ನೌಕೆಗಳನ್ನು ಉಪಯೋಗಿಸಿ ನಿರಂತರ ಸಾಗರಗಳ ಅಧ್ಯಯನ ಮಾಡಿ ಸಾಗರದ ತಳವು ನಮ್ಮ ಭೂಪ್ರದೇಶದಂತೆಯೇ ಇದೆ, ಎಂಬುದನ್ನು ಕಂಡುಹಿಡಿದರು. ಇಲ್ಲಿಯೂ ಸಹ ಪ್ರಸ್ಥಭೂಮಿ, ಕಂದಕಗಳು, ಕಡಿದಾದ ಬಿರುಕುಗಳು, ಪರ್ವತ ಶ್ರೇಣಿಗಳು ಮತ್ತು ಅಗ್ನಿಪವರ್ತಗಳೂ ಇವೆ ಎಂದರೆ ಆಶ್ಚರ್ಯವಲ್ಲವೆ? ಸಮುದ್ರದ ತಳದಿಂದ ಉದ್ಭವಿಸಿದ ಶಿಖರಗಳು ನೀರಿನ ಮೇಲೆದ್ದು ದ್ವೀಪಗಳಾಗಿ ಪರಿವರ್ತನೆ ಗೊಂಡಿವೆ. ೬ ಕಿ.ಮೀ. ಗಳಿಂದ ಫೆಸಿಫಿಕ್ ಸಾಗರದಲ್ಲಿ ಇದರ ಆಳವು ಸಮುದ್ರದ ಮೇಲ್ಮೆಯಿಂದ ೧೧ ಕಿ.ಮೀ. ನಷ್ಟು ಆಳವಾಗಿದೆ. ಇದನ್ನು ‘ಸಾಹಸಿಗರ ಆಳ’ವೆಂದು ಕರೆಯಲಾಗುತ್ತದೆ.
*****
ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು