ಪಂಚರಾತ್ರ (ತೊಗಲುಬೊಂಬೆಯಾಟ)

ಜಗದ ಜನಶಕ್ತಿಗೆ
ನಮೋ ನಮೋ ||

ಬಣ್ಣದಾಟದ ನೆಲೆಗೆ
ನಮೋ ನಮೋ ||

ಕಲಾ ಸ್ವಾದಕನಿಗೆ
ನಮೋ ನಮೋ ||

ಕಲಾ ಪ್ರೋತ್ಸಾಹಕನಿಗೆ
ನಮೋ ನಮೋ ||

ಧನ್ಯತೆಯಿಂ ಕೈಮುಗಿವೆ
ಎನ್ನೆದುರಿನ ಜನಶಕ್ತಿಗೆ

ನಮೋ ನಮೋ ಎನ್ನುವೆ
ಎನ್ನೆದುರಿನ ಮನಶಕ್ತಿಗೆ
ನಮೋ ನಮೋ
ನಮೋ ನಮೋ
ನಮೋ ನಮೋ
ನಮೋ ನಮೋ

ಹಾಡು ೧ :     ಭಾರತವಿದು ಭಾರತ
ಜನ ಮಹಾಭಾರತ ||

ವ್ಯಾಸರಿಂ ರಚಿತ ಭಾರತ
ಕೋಟಿ ಕಿರಣ ಪ್ರಭಾತ
ಜಗವ ಕಾಣ್ವ ಬಂಧನ
ಸಕಲವೂ ನವ ದರ್ಶನ ||

ಅದರೊಂದು ತುಣುಕು
ಈ ಆಟದ ಇಣಕು
ಭಾಸನೆಂಬ ಕವಿಯು
ಸಂಸ್ಕೃತ ಪ್ರತಿಭೆಯು ||

ಅವ ಕಂಡ ಭಾರತವಿದು
ಕತೆ ವಿರಾಟ ಪರ್ವದ್ದು
ಹೆಸರಿಟ್ಟನು ಪಂಚರಾತ್ರ
ನೋಡಿ ಶಾಂತಿಯ ಪಾತ್ರ ||

ಹಾಡು ೨ :     ರಾಜಸೂಯ ಯಾಗವನು
ಮಾಡಿ ಧೀರ ದುರ್ಯೋಧನನು
ನೆರೆದರು ಸಕಲರಸರು
ಏಕಛತ್ರಾಧಿಪತ್ಯವನೊಪ್ಪಲೆಂದು ||

ಯಾಗದಲಿ ಸಂತೃಪ್ತಿ
ಭೂರಿ ಬೋಜನಗಳಾದವು
ಅರಸುಗುಳಿಯಿತು ಬಾಕಿ
ದ್ವಿಜರ ಕೊಡುಗೆ ಕಾಣಿಕೆ ||

ಹಾಡು ೩ :     ಹೇಗೆ ಹೇಳಲಿ ವತ್ಸ
ಮನದೊಳಗಣ ವ್ಯಥೆಯನು
ತಾಳಲಾರದೆ ಉಮ್ಮಳಿತ
ಲೋಚನ ಜಲಕಳಿತವನು ||

ಹಡು ೪ :     ಕೊಡುವುದು ಕೊಡುವಲ್ಲಿ
ಇಹುದು ದೊಡ್ಡತನವು
ಕೊಡದೆ ಕೊಸರಾಡಿದರೆ
ಬಹುದು ದಡ್ಡತನವು ||

ಹಾಡು ೫ :     ಪಂಚರಾತ್ರದೊಳು ತನ್ನಿ
ಪಾಂಡವರಿಹ ಕುರುಹನ್ನು
ಪಡೆಯಿರಿ ಅರ್ಧ ರಾಜ್ಯ
ಮುಕ್ತ ದಾಯಾದಿ ವ್ಯಾಜ್ಯ ||

ಹಾಡು ೬ :     ನಡೆವ ಗೋಗ್ರಹಣ
ದೊರೆ ವಿರಾಟನ ಮಾನ ಹರಣ
ಶಕುನಿ ಒಡ್ಡಿದ ತಂತ್ರ
ಭೀಷ್ಮ ದ್ರೋಣದರ ನವಮಂತ್ರ ||

ಹಾಡು ೭ :     ಕೇಳಿಗುಂಪು ಗೋವುಗಳೆ
ಗಾನದಿಂಪಿನ ಸಂಗಾತಿಗಳೆ
ಸೊಂಪು ಮೇವಿನ ಬನದಲ್ಲಿ
ಚಂದ ಮೇಯಿರಿ ಹಗಲಲ್ಲಿ ||

ನಮ್ಮದಿದುವೆ ಗೋಕುಲ
ವಿರಾಟನ ಹೈನು ಸಂಕುಲ
ಬನ್ನಿ ಮಕ್ಕಳೆ ಬನ್ನಿ ಕುಣಿಯಲು
ತುರುವ ನಗರಕೆ ಅಟ್ಟಲು ||

ಇಂದು ರಾಜನ ವರ್ಧಂತಿ
ನಮಗೆ ಉಲ್ಲಸದಾ ಪಂಕ್ತಿ
ಕುಣಿದು ಹಾಡುತ ನಲಿಯುತ
ನಮ್ಮ ನೋವನು ಮರೆಯುತ ||

ಹಾಡು ೮ :     ಇವಳೆ ಬೃಹನ್ನಳೆ
ಇವನೆ ಬೃಹನ್ನಳ ||

ಗಂಡಿನೊಳಿಹ ಹೆಣ್ಣೆ
ಹೆಣ್ಣಿನೊಳಿಹ ಗಂಡೆ
ದ್ವೈತವದ್ವೈತವಾದ
ಮಾನವ ಪ್ರತೀಕವೆ ||

ಗಿರಿಜೇಶನರ್ಧ ನಾರಿ
ಜಗದೇಕತೆ ತೋರಿ
ಗಂಡ್ಹೆಣ್ಣು ಒಟ್ಟಾಗಿ
ಇರುವುದೆ ಬದುಕಾಗಿ ||

ಒಮ್ಮುಖ ಹೆಣ್ಣು
ಇಮ್ಮುಖ ಗಂಡು
ಸೇರಿ ಎರಡೂ
ಜಗಮುಖವಾಗಿ ||

ಹಾಡು ೯ :     ತಪ್ಪಿತೊಂದು ಯುದ್ಧ
ಗೋಗ್ರಹಣ ಪ್ರಸಿದ್ಧ ||

ಶಾಂತಿ ಪ್ರತೀಕದೀ ಯುದ್ಧ
ಅಜ್ಞಾತವಾಸದಲ್ಲಿದ್ದ
ಪಾಂಡವ ಗುರ್ತೀಗೆ ಸಿದ್ಧ
ಬೃಹನ್ನಳೆಯೇ ಗೆದ್ದ ||

ಕಾಲು ಕರೆದ ಯುದ್ಧ
ಮದುವೆಗಾಗಿ ಸಿದ್ಧ
ಗೋ ಸಂಕುಲವೆಲ್ಲ
ರಕ್ಷಿತವೊ ರಕ್ಷಿತ ||

ಹಾಡು ೧೦ :     ಕಾಲು ಕೆರೆದ ಯುದ್ಧ
ಕೌರವರಿಗೊ ಅಪದ್ಧ ||

ಗೋಗ್ರಹಣಕೆ ಹೋಗಿ
ಗಣ್ಯರಿಗೆ ಭಂಗವಾಗಿ
ಚಿಂತೆಯಲ್ಲಿ ಮುಳುಗಿ
ಸುಮಾರ್ಗ ಇಲ್ಲವಾಗಿ ||

ಅತಿರಥರಿಗೆಲ್ಲಾ
ಮಾನ ಹೋದವಲ್ಲ
ತಪ್ಪಿ ಯುದ್ಧ ಘೋರ
ಸಿಕ್ಕಿಬಿದ್ದ ಕುಮಾರ ||

ಹಾಡು ೧೧ :     ಧರ್ಮದ ಶ್ರೇಷ್ಠತೆ ಶಾಂತಿ
ಯುದ್ಧದ ಬೀಜ ಅಶಾಂತಿ ||

ಕೊಂದು ಕೊಲಿಸಿದ ಮಾನವ
ಆದನಯ್ಯೋ ಛೆ ದಾನವ
ಯುದ್ಧ ಮಾಡಿ ಗೆದ್ದವನು
ಸೋತು ದುಃಖವ ತಿಂದನು ||

ಸಾವನು ಬಯಸಿದ ಬಸಿರು
ಸಾಧಿಸಲಿ ಶಾಂತಿಯ ಹಸಿರು
ಯುದ್ಧ ತಪ್ಪಿಸದ ಕೀರ್ತಿಯು
ನವ ಜೀವನದ ಮದುವೆಯು ||

ಕೊಡುವ ಭಾಗವ ಕೊಟ್ಟರೆ
ಉಳಿವುದೇನದು ಕೆಟ್ಟರೆ
ಪ್ರೀತಿ ಮಮತೆ ಅಕ್ಕರೆ
ಬದುಕಿಗೆ ಜೀವ ಇವಿರೆ ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಂಥ ಚೆಲುವೆ ನನ್ನ ಹುಡುಗಿ
Next post ಬದುಕಿಗಾಗಿ…

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…