Home / ಬಾಲ ಚಿಲುಮೆ / ಕಥೆ / ಹೊನ್ನು ಕೊಡುತ್ತಿದ್ದ ಹಾವಿನ ಕಥೆ

ಹೊನ್ನು ಕೊಡುತ್ತಿದ್ದ ಹಾವಿನ ಕಥೆ

ಒಂದಾನೊಂದು ಊರಿನಲ್ಲಿ ಹರಿದತ್ತನೆಂಬ ಬ್ರಾಹ್ಮಣನಿದ್ದನು. ಆತನು ಬೇಸಾಯ ಮಾಡುವನು. ಆ ಬೇಸಾಯವು ಯಾವಾಗಲೂ ಫಲವೇ ಆಗುತ್ತಿರಲಿಲ್ಲ. ಒ೦ದು ದಿನ ಆ ಬ್ರಾಹ್ಮಣನು ಸಂಜೆಯ ಹೊತ್ತಿನಲ್ಲಿ ತನ್ನ ಹೊಲದಲ್ಲಿ ಒಂದು ಮರದಡಿ ಆಗ ಕೊಂಚ ದೂರವಿದ್ದ ಹುತ್ತದಿಂದ ಹೊರಕ್ಕೆ ಬಂದು ದೊಡ್ಡ ಹೆಡೆಯನ್ನು ಬಿಟ್ಟು ಕೊಂಡು ಆಡುತ್ತಿದ್ದ ಹಾವು ಕಾಣಿಸಿತು. ಆಗ ಅವನು ಯೋಚಿಸಿದನು:- “ಆಹಾ ಇದು ಈ ಕ್ಷೇತ್ರದ ದೇವತೆಯಾಗಿರಬೇಕು. ಇದನ್ನು ನಾನು ಇದುವರೆಗೂ ಪೂಜಿಸಿಲ್ಲ. ಅದರಿಂದಲೇ ಇರಬೇಕು, ನನ್ನ ಬೇಸಾಯವೆಲ್ಲ ನಿಷ್ಪಲವಾಗುತ್ತಿರುವುದು. ಇರಲಿ. ಇನ್ನು ಮೇಲಾದರೂ ಇದನ್ನು ಪೂಜಿಸುವೆನು” ಎಂದು ಕೊಂಡು, ಎಲ್ಲಿಂದಲೋ ಹಾಲು ತಂದು ಅದಕ್ಕೆ ಒಪ್ಪಿಸಿ, “ಕ್ಷೇತ್ರ ಪಾಲಕನೆ, ನೀನು ಇಲ್ಲಿರುವುದು ನನಗೆ ಇದುವರೆಗೂ ತಿಳಿದಿರಲಿಲ್ಲ. ಅದರಿಂದ ಪೂಜೆಯನ್ನು ಮಾಡಿರಲಿಲ್ಲ. ಕ್ಷಮಿಸು? ಎಂದು ನಮಸ್ಕಾರ ಮಾಡಿದನು.
ಆ ಬ್ರಾಹ್ಮಣನು ಮರುದಿವಸ ಬರುವ ವೇಳೆಗೆ ಹಾಲಿನ ಪಾತ್ರೆಯಲ್ಲಿ ಒಂದು ಹೊನ್ನು ಇತ್ತು. ಅಂದಿನಿಂದ ಅವನು ತಾನು ಒಬ್ಬನೇ ಬಂದು ಹಾಲಿಟ್ಟು ಹೋಗುವನು: ಬೆಳಿಗ್ಗೆ ಬಂದು ಹೊನ್ನನ್ನು ತೆಗೆದುಕೊಂಡು ಹೋಗುವನು.
ಹೀಗೆಯೇ ಇರುತ್ತಿರಲು ಒಂದು ದಿನ ಆ ಬ್ರಾಹ್ಮಣನು ಯಾವುದೋ ಊರಿಗೆ ಹೋಗಬೇಕಾಗಿ ಬಂತು. ಅದರಿಂದ ಹಾವಿಗೆ ಹಾಲಿಡುನ ಕೆಲಸವನ್ನು ಮಗನಿಗೆ ಒಪ್ಪಿಸಿ ಹೋದನು. ಮಗನು ಹಾಲಿಟ್ಟು ಹೊನ್ನು ತೆಗೆದುಕೊಳ್ಳುವಾಗ ಅವನಿಗೆ ಒ೦ದು ಯೋಚನೆ ಬಂತು. “ಈ ಹುತ್ತದಲ್ಲಿ ಹೊನ್ನು ಬೇಕಾದ ಹಾಗೆ ಇರಬೇಕು. ಈ ಹುತ್ತವನ್ನು ಅಗೆದು ಹಾವನ್ನು ಕೊಂದು ಎಲ್ಲವನ್ನೂ ತೆಗೆದುಕೊಂಡು ಬಿಡೋಣ” ಎಂದುಕೊಂಡು, ಎರಡನೆಯ ದಿನ ಹಾಲು ಕುಡಿಯುವುದಕ್ಕೆ ಬಂದ ಹಾವನ್ನು ದೊಣ್ಣೆಯಿಂದ ಹೊಡೆದನು. ಅದು ಏನೋ ತಪ್ಪಿ ಹಾವು ಉಳಿದುಕೊಂಡು ರೋಷದಿಂದ ಹಿಂತಿರುಗಿ ಅವನನ್ನು ಕಚ್ಚಿತು. ಆ ಹುಡುಗನು ಆ ಕೂಡಲೇ ಸತ್ತು
ಹೋದನ್ನು ನೆಂಟರು ಇಷ್ಟರು ಬಂದು ಅವನನ್ನು ತೆಗೆದುಕೊಂಡು ಹೋಗಿ ಸಮೀಪದಲ್ಲಿಯೇ ಚಿತಿಯನ್ನು ಮಾಡಿ ಸುಟ್ಟರು.
ತನಗೆ ಶರಣಾಗಿ ಬಂದ ಜಂತುಗಳ | 
ಕಾಯದಿದ್ದಂಥ ಕರುಣ ಹೀನನಿಗೆ || 
ಇದ್ದ ಸತ್ಫಲವು ವಿಫಲವಾಗುವುದು | 
ಕೇಳಿ ಕಾಣೆಯಾ ಪದ್ಮನನ ಕಥೆಯಾ ॥ ೨೬ ॥ 
ನೆಂಟರು ಅದು ಹೇಗೆ ಎಂದು ಕೇಳಲು, ಹರಿದತ್ತನು ಹೇಳಿದನು:-
*****
ಪದ್ಮವನದ ಹಂಸಗಳ ಕಥೆ ಓದಿ
Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...