ನನ್ನೆದೆಯ ಒಂದೊಂದು ಬಡಿತವು
ಬುವಿಯ ಕಂಪನ ನಗುತಿದೆ!
ರಕುತ, ಭೂಮಿಯ ಬಸಿರ ಬಗೆಯುವ
‘ಲಾವ’ದೊಲು ಕುದಿಯುತ್ತಿದೆ!
ಬಿರುವೆಲರ ಉಸಿರೊತ್ತಿದೆ!
ಆದರೂ ಸಹ ತೊಲಗದೆಯೆ ನೀ
ನೆಂತು ನೆಲಸಿಹೆ ಅಲ್ಲಿ ಕಾಮಿನಿ?
ಇವುಗಳೆಲ್ಲವು ಒತ್ತಿರೆ?
* * *
ಮರೆತೆ ಮರೆತೆನು! ಎಂಥ ಮೂಢನು!
ನಿನ್ನನೊಂದೂ ಮುಟ್ಟದು!
ಎದೆಯೊಳಗೆ ನೆಲಸುತ್ತಲವುಗಳ
ನೀನೆ ಸೃಷ್ಟಿಪೆ!-ಗುಟ್ಟದು!
*****








