Home / ಬಾಲ ಚಿಲುಮೆ / ಕಥೆ / ಮೂರ್ಖ ಪಂಡಿತರ ಕಥೆ

ಮೂರ್ಖ ಪಂಡಿತರ ಕಥೆ

ಒಂದಾನೊಂದು ಊರಿನಲ್ಲಿ ನಾಲ್ವರು ಮಿತ್ರರು ಇದ್ದರು. ಅವರಿನ್ನೂ ಹುಡುಗರಾಗಿರುವಾಗಲೇ ಅವರಿಗೆ ಒಳೆಯ ಬುದ್ಧಿಯು ಹುಟ್ಟಿ ದೇಶಾಂತರಕ್ಕೆ ಹೋಗಿ ವಿದ್ಯೆಯನ್ನು ಕಲಿಯಬೇಕು ಎನ್ನಿಸಿತು. ಅದರಂತೆ ಅವರು ಕನ್ಯಕುಬ್ಜ (ಈಗಿನ ಕನೋಜ್‌) ದೇಶಕ್ಕೆ ಹೋಗಿ ಅಲ್ಲೊಬ್ಬ ವಿದ್ವಾ೦ಸನ ಬಳಿಯಲ್ಲಿ ಓದಿದರು. ಹನ್ನೆರಡು ವರ್ಷ ಒಂದೇ ಸಮನಾಗಿ ಓದಿ ವಿದ್ಯಾವಂತರ್ರಾದರು. ಗುರುವಿನ ಅಪ್ಪಣೆ ಪಡೆದು ಸ್ವದೇಶಕ್ಕೆ ಹಿಂತಿರುಗಿ ಬಂದರು.
ಅವರು ಅಷ್ಟುದೂರ ಬರುವುದರೂಳಗಾಗಿ ಅಲ್ಲೊಂದು ಕಾಡು ದಾರಿಯು ಸಿಕ್ಕಿತು. ಅವರೆಲ್ಲ ಅಲ್ಲಿಯೇ ಕುಳಿತು “ಯಾವ ಮಾರ್ಗವಾಗಿ ಹೋಗಬೇಕು?” ಎಂದು ವಿಚಾರ ಮಾಡಿದರು.
ಅವರಲ್ಲೊಬ್ಬನು “ಸಂದೇಹವೇಕೆ? ಶಾಸ್ತ್ರವು ಹೇಳಿಲ್ಲವೆ, ಬಹುಜನ ನಡೆವುದೆ ಹಾದಿ” ಎಂದು? ಅದರಿಂದ ಸಂಶಯ ಪಡಬೇಕಾಗಿಲ್ಲ” ಎಂದನು.
ಆ ವೇಳೆಗೆ ಸರಿಯಾಗಿ ಸಮೀಪದಲ್ಲಿದ್ದ ಊರಿನಲ್ಲಿ ಸತ್ತು ಹೋದ ಒಬ್ಬ ದೊಡ್ಡ ವ್ಯಾಪಾರಿಯ ಹೆಣವನ್ನು ಹೊತ್ತುಕೊಂಡು ಅತ್ತ ಬಂದರು. ಹೆಣದ ಜೊತೆಯಲ್ಲಿ ಬೇಕಾದಷ್ಟು ಜನರು ಇದ್ದ  ಶಾಸ್ತ್ರಜ್ಞರು ಎಳ್ಳಷ್ಟೂ ಸಂದೇಹ ಪಡದೆ ಆ ಜನರ‌ ಗುಂಪನ್ನು ಹಿಂಬಾಲಿಸಿ ಅವರೊಡನೆ ಸ್ಮಶಾನಕ್ಕೆ, ಬಂದರು:
ಅಲ್ಲಿ ಒ೦ದು ಕತ್ತೆಯು ನಿಂತಿತ್ತು.  ಅವರಲ್ಲೊಬ್ಬನು ಪುಸ್ತಕವನ್ನು ತೆಗೆದು ನೋಡಲು, ಅದರಲ್ಲಿ ಒಂದು ಶ್ಲೋಕವಿದ್ದುದನ್ನು ಓದಿದನು.
ಉತ್ಸವೇ ವ್ಯಸನೇ ಪ್ರಾಪ್ತೇ ದುರ್ಭಿಕ್ಷೇ ಶತ್ರು ಸಂಕಟೇ | 
ರಾಜದ್ವಾರೇ ಸ್ಮಶಾನೇ ಚ ಯಸ್ತಿಷ್ಠತಿ ಸಬಾಂಧವಃ ||
ಅದಕ್ಕೆ ಇನ್ನೊಬ್ಬನು ಅರ್ಥವನ್ನು ಹೇಳಿದನು: “ಉತ್ಸವ ವ್ಯಸನ, ದುರ್ಭಿಕ್ಷ್ಯ ಶತ್ರುಗಳಿಂದ ಸಂಕಟ, ಇವುಗಳು ಬಂದಾಗಲೂ, ಅರಮನೆ ಸ್ಮಶಾನಗಳಲ್ಲಿಯೂ ಯಾವನು ಜೊತೆಯಲ್ಲಿರುವನೋ ಅವನೇ ಬಾಂಧವನು.” ಮೂವರೂ ಸೇರಿ “ಸರಿ, ಇವನೇ ನಮ್ಮ ಬಾಂಧವನು” ಎಂದು ಅದರ ಕತ್ತಿಗೆ ಗಂಟು ಬಿದ್ದು ಅದಕೆ, ಕಾಲು ತೊಳೆದು ಉಪಚಾರ ಮಾಡಿದರು.
ಅಷ್ಟರಲ್ಲಿ ಒಬ್ಬನು ಅತ್ತಕಡೆ ತಿರುಗಿ ನೋಡಿದನು. ಅಲ್ಲಿ ಒ೦ದು ಒಂಟೆಯು ಬರುವುದು ಕಾಣಿಸಿತು. ಇದೇನು ಎನ್ನಿಸಲು ಮೂರನೆಯವನು ಪುಸ್ತಕವನ್ನು ತೆಗೆದು “ಧರ್ಮಕ್ಕೆ ನಡೆ
ಚುರುಕಾಗಿ” ಎಂದು ಹೇಳಿದೆ. ಇದು ಚುರುಕಾಗಿ ನಡೆಯುತ್ತಿದೆ. ಅದರಿಂದ ಇದೇ ಧರ್ಮವಿರಬೇಕು ಎಂದನು.”  ಕೊನೆಯವನು “ಹೌದು ಹೌದು, ಅಲ್ಲದೆ, ಗೆಳೆಯನ ಜೋಡಿಸು ಧರ್ಮದೊಳು ಎಂದೂ ಹೇಳಿದೆ. ಅದ್ದರಿಂದ ಹಾಗೆ ಮಾಡೋಣ” ಎಂದು ಕತ್ತೆಯನ್ನು ಎಳೆದು ಕೊಂಡು ಹೋಗಿ ಒಂಟೆಯ ಕತ್ತಿಗೆ ಬಿಗಿದರು.
ಇದು ಕತ್ತೆಯ ಒಡೆಯನಾದ ಅಗಸನಿಗೆ ತಿಳಿದು, ಅವನು ಇವರನ್ನು ಹೊಡೆಯಲು ಬಂದನು. ಇವರು ಅಲ್ಲಿಂದ ಕೆಟ್ಟೆವೋ ಎಂದು ಬಿದ್ದೋಡಿದರು. ದಾರಿಯಲ್ಲಿ ಒಂದು ನದಿಯು ಸಿಕ್ಕಿತು. ಆ ನದಿಯ ನೀರಿನ ನಡುವೆ ಒಂದು ಮುತ್ತುಗದ ಎಲೆಯು ಕೊಚ್ಚಿ ಕೊಂಡು ಹೋಗುತ್ತಿರಲು ಅದನ್ನು ಕ೦ಡು ಒಬ್ಬನು ಬರುವ ಪತ್ರವು ನಮ್ಮ ದಟಿಪುದು” ಎಂದು ಹೇಳಿದೆ ಎನ್ನುತ್ತಾ ಅದರ ಮೇಲೆ ಹಾರಿ ನೀರಿನಲ್ಲಿ ಕೊಚ್ಚಿ ಹೋದನು. ಅದನ್ನು ಕಂಡು ಇನ್ನೊ ಇಬ್ಬನು.
ಎಲ್ಲವು ಹೋಗುವ ಸಮಯದಲರ್ದವನು | 
ಬಿಟ್ಟರ್ಧವನುಳಿಸುವನೇ ಪಂಡಿತನು ||
ಅರೆಬರೆಯಾದರು ನಡೆವುದು ಕಾರ್ಯವು |
ಎಲ್ಲವು ಹೋದರೆ ದುಃಖವು ದುಸ್ಸಹವು ||೧೯||
ಅದರಿಂದ ಹಾಗೆಯಾದರೂ ಮಾಡಬೇಕು” ಎಂದು ಕೊಚ್ಚಿ ಹೋಗುತ್ತಿದ್ದವನನ್ನು ಕೂದಲು ಹಿಡಿದುಕೊಂಡು ತಲೆಯನ್ನು ಕೊಯ್ದು ಕೊಂಡನು.
ಅಲ್ಲಿಂದವರು ಹಾಗೆಯೇ ಹೋಗುತ್ತ ಒಂದು ಗ್ರಾಮಕ್ಕೆ ಬಂದರು. ಪಂಡಿತರು ಬಂದರಲ್ಲಾ ಎಂದು ಗ್ರಾಮದವರು ಒಬ್ಬೊಬ್ಬರು ಒಬ್ಬೊಬ್ಬರನ್ನು ಊಟಕ್ಕೆ ಕರೆದರು. ಒಬನಿಗೆ ಶ್ಯಾವಿಗೆಯನ್ನು ಬಡಿಸಿ ಬೇಕಾದ ಹಾಗೆ ತುಪ್ಪವನ್ನು ಹಾಕಿದರು. ಆವನಿಗೆ ಆಗ:-
“ಬೆಳದಷ್ಟೂ ನಾಶವು ನಿಜವು”
ಎಂಬ ಪಂಕ್ತಿಯು ನೆನಪಿಗೆ ಬಂದು, ಉಟವೇ ಬೇಡ ಎನ್ನಿಸಿ ಅವನು ಹೊರಟು ಬಂದನು. ಎರಡನೆಯವನು ಹೋಗಿದ್ದ ಕಡೆ ಅವನಿಗೆ ಅಗಲವಾದ ಮಂಡಿಗೆಯನ್ನು ಬಡಿಸಿದರು. ಅವನಿಗೆ ಆ ಅಗಲವಾದ ಮಂಡಿಗೆಯನ್ನು ಕಂಡು
ಅಗಲವು ಅಗಲವು ಅಗಲನೆ ಆಗೆ | 
ಬಂದಿತು ತಪ್ಪದೆ ಜೀವಕೆ ಬೇಗೆ ||
ಎಂಬ ಪಂಕ್ತಿಯು ನೆನೆಪಾಯಿತು. “ಛೇ ಛೇ, ಇದನ್ನು ತಿಂದ ಜೀವಕ್ಕೆ ಸಂಚಕಾರ ತಂದುಕೊಳ್ಳುವುದು ಬೇಡ ಎನ್ನಿಸಿ, ಅವನು ಊಟ ಬಿಟ್ಟು ಹೊರಟು ಬಂದನು. ಮೂರನೆಯವನಿಗೆ ಉದ್ದಿನ ವಡೆಯನ್ನು ಬಡಿಸಿದರು. ತೂತಿರುವ ವಡೆಯನ್ನು ಕಂಡು ಅವನಿಗೆ
ತೂತು ತತಾ ತೂತಾದರೆ ನೋಡು ॥ 
ತಪ್ಪದನರ್ಥವು ಅಲ್ಲಿಂದೋಡು ॥ 
ಎಂಬ ಸಾಲು ನೆನೆಪಾಗಿ ಅಲ್ಲಿಂದ ಓಡಿದನು.
ಹೀಗೆ ಮೂವರೂ ಇಟ್ಟಿದ್ದ ಊಟವನ್ನು ಬಿಟ್ಟು ಬಂದು ಹಸಿವಿನಿಂದ ಕಂಗೆಟ್ಟು, ಎಲ್ಲರಿಂದಲೂ ಹಾಸ್ಯಮಾಡಿಸಿಕೊಳ್ಳುತ್ತಾ ಹೇಗೆ ಹೇಗೋ ಮಾಡಿ ಸ್ವದೇಶಕ್ಕೆ ಬಂದರು. ಹಾಗೆಯೇ ನೀನೂ
ಕೂಡ ಲೋಕವ್ಯವಹಾರನನ್ನು ಅರಿಯದೆ. ನಾನು ಬೇಡ ಬೇಡವೆಂದರೂ ಕೇಳದೆ ಈ ಸ್ಥಿತಿಗೆ ಬಂದೆ. ಅದರಿಂದ ನಾನು ಹಾಗೆ ಹೇಳಿದೆನು?” ಎಂದನು. ಚಕ್ರಧರನು. “ನೀನು ಹೇಳುವುದು ಅಷ್ಟೇನೂ ಸರಿಯಲ್ಲ. ಬಹು ಬುದ್ದಿಗಳಾದವರನ್ನು ದುಷ್ಟ ದೈವವು ಕೆಡಿಸುವುದು. ಸ್ವಲ್ಪ ಬುದ್ದಿಗಳಾದವರು ಸುಖವಾಗಿರುವರು ಕೇಳು.
ನೆತ್ತಿಯೊಳು ಶತಬುದ್ಧಿ | ಕರದೊಳು ಸಹಸ್ರಬುದ್ಧಿ ॥ 
ನಾನಾಡುವೆ ನಿರ್ಮಲ | ಜಲದಲ್ಲಿ ಒರ್ಬುದ್ಧಿ ॥ ೨೦ ॥ 
ಎಂದನು. ಸುವರ್ಣಸಿದ್ಧಿಯು “ಅದೇನು” ಎಂದು ಕೇಳಿದನು.
ಅವನು ಹೇಳಿದನು: –
*****
ಮೂವರು ಬುದ್ಧಿಗಳ ಕಥೆ ಓದಿ
Tagged:

Leave a Reply

Your email address will not be published. Required fields are marked *

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...