ಎಲ್ಲೆಲ್ಲೂ ತೈಲುಬಾವಿಗಳ ಜಿಡ್ಡು
ಘಾಟಿವಾಸನೆ
ಮರುಭೂಮಿಗಳಿಗದೇನೋ ಜೀವನೋತ್ಸಾಹ
ಸೆಳಕು ಸೆಳಕು ಬಿಸಿಲು
ಹರಿದೋಡಲು ಹೆದ್ದಾರಿಗುಂಟ
ಏರ್ ಕಂಡೀಶನ್‌ಗಳ ಘಮಲು….
ಕಣ್ತಪ್ಪಿ ಎಂದೋ ಬೀಳುವ
ಧಾರಾಕಾರ ಮಳೆಯ
ಸಾವಿರಕಾಲೋ ನೂರು ಗಾಲಿಗಳೊ
ಉರುಳುರುಳಿ ಸರಸರನೆ
ಸರಿದು ಎಲ್ಲೊ
ಸುಂದರ ಸ್ಪಟಿಕ ಓಯಸಿಸ್ಸಿಗೆ
ಜೀವಧಾತುಗಳ ಅಮಲು….
ಮೋಡ ಕಟ್ಟುವುದಿಲ್ಲ
ಸೂರ್ಯ ಸರಿಯುವ ಗುರುತಿನ
ಹೊಣೆ ಮಾತ್ರ ಕೋಲುಗಳದ್ದು
ಮುಲ್ಲಾಗಳ ನಮಾಜಿನದ್ದು
ಡಾಲರ್ ಲೈಟ್‌ಗಳದ್ದು
ವಿದೇಶಿಗರಿಗೆಲ್ಲ ಅದಲು ಬದಲು.
*****
ಪುಸ್ತಕ: ಇರುವಿಕೆ