Home / ಕವನ / ಕವಿತೆ / ಕಾಗೆಗೆ

ಕಾಗೆಗೆ

“ಕಾಗೆಯಂತೆಯೆ ಬಣ್ಣ ಆ ನರ ಪ್ರಾಣಿಗಹ!”
ಎನ್ನುವರು ಕರಿಯರನು ಜನರು ಕಂಡು
“ಆಹ! ಆಕೆಯ ಕೇಶ ಕಾಗೆಯೊಲೆ ಕಪ್ಪೆ”ಂದು
ಬಣ್ಣಿಸರು! ಜನರ ಮತಿಯೆಷ್ಟು ಮೊಂಡು!

ಅಹುದು! ದಿಟ! ನೀನೇನೊ ಕೊಂಚ ಕಪ್ಪಿರಬಹುದು!
‘ಅತಿಕಪ್ಪು’ ಎಂಬ ನುಡಿ ಸುಳ್ಳ ಸಂತೆ!
ನಿನ್ನ ಕಪ್ಪಿನ ಮೊಗಕೆ ಕಪ್ಪುಬಳಿಯುವ ಕಪ್ಪು
ಈ ಜಗದೊಳಿರಲು ನಿನಗೇಕೆ ಚಿಂತೆ?”

ನಿನ್ನದೇ ಠೀವಿಯೊಳು ಕೊರಳ ಬಿಳಿಗೆರೆಯ ನೀ
ಎಡೆಬಿಡದೆ ಕುಕ್ಕುತಿಹೆ ಕತವದೇನು?-
ಅದನು ಕೃಷ್ಣನು ಧರಿಪ ವೈಜಯಂತಿಗೆ ಜನರು
ಹೋಲಿಸರದೇಕೆಂಬ ಕೋಪವೇನು?

ನಿನ್ನ ರೂಪೊಳೆ ಬಂದು ಸತ್ತವರು ಪಿಂಡಗಳ
ಸ್ಪೀಕರಿಸುತಿರಲು ನಿನಗೇನು ಕೊರತೆ?
ನಿನ್ನ ನೋಡುತಲಿರಲು ಸ್ಫೂರ್ತಿಯುಕ್ಕುವುದಮಮ!
ಎಂದಿಗೂ ಬತ್ತದಲ ಭಾವದೊರತೆ!

ಮಾಂಸದೊಂದೇ ತುಂಡ ಕಂಡರೂ ನೀ ಕರೆದು
ನಿನ್ನ ಗೆಳೆಯರಿಗೆಲ್ಲ ಕೊಡುವೆ ಪಾಲು
ಕೂಲಿಗಳಿಗೀಯದೆಯೆ ಎಲ್ಲ ನುಂಗುತಲಿರುವ
ಕ್ಯಪಿಟಲಿಸ್ಟರಿಗಿಂತ ನೀನೆ ಮೇಲು!

ಸರ್ವಗುಣ ಪರಿಪೂರ್ಣನಾರಿಹನು ಧರೆಯೊಳಗೆ?
ಅದರಿಂದ ಸಹ್ಯವೆಲೆ ನಿನ್ನ ಕಂಠ
ಸರ್ವಗುಣಸಂಪನ್ನ ಏಕಗುಣಹೀನನಾ
ಟ್ರಾಜೆಡಿಯ ನಾಯಕನು ನಿನ್ನ ನಂಟ!

ಸವಿಗೊರಲು ನಿನಗಿಲ್ಲವಾದರೇಂ ವಾಯಸವೆ?
ನೀನೀವ ಕಾವಿಲ್ಲದಿರಲು ಪಿಕವು
ಮೊಟ್ಟೆ ಯೊಡೆದೀ ಜಗದಿ ಹಾಡಲೆಂದಿಗುಮರಿದು
ಕ್ಷಮ್ಯವದರಿಂ ನಿನ್ನಘೋರ ಸ್ವರವು!

“ಗುಣವಿಲ್ಲ ವಸ್ತುವೊಳೆ, ಕಾಂಬ ಹೃದಯದೊಳಿಹುದು”
ಎಂದು ಭಾರವಿ ಕವಿಯು ನುಡಿದನಂದೇ!–
ಎಷ್ಟು ದಿಟವೀ ಮಾತು? ಕವಿಧಾತ್ರಿ ನಿನಗೊಲಿದೆ
ಇಂತು ಸವಿಮಾತುಗಳ ಮುಡಿಪ ತಂದೆ!
*****

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...