Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಮಂಗಳವಾರ, ೩೦ ಜೂನ್, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಮಂಗಳವಾರ, ೩೦ ಜೂನ್, ೧೯೪೨

ಪ್ರೀತಿಯ ಕಿಟಿ,

ನಿನಗೆ ಬರೆಯಬೇಕೆಂದರೆ ಇಂದಿನವರೆಗೂ ಪುರಸೊತ್ತು ಇರಲಿಲ್ಲ. ಗುರುವಾರ ನನ್ನ ಗೆಳೆಯರೊಂದಿಗೆ ಇದ್ದರೆ, ಶುಕ್ರವಾರ ನಮ್ಮನ್ನು ಭೇಟಿಯಾಗಲು ಕೆಲವು ಜನ ಬಂದಿದ್ದರು. ಇಂದಿನವರೆಗೆ ಹಾಗೆ ಇತ್ತು. ಹ್ಯಾರಿ ಮತ್ತು ನಾನು ಈ ಒಂದು ವಾರದೊಳಗೆ ಪರಸ್ಪರ ಅರ್ಥಮಾಡಿಕೊಂಡೆವು. ಮತ್ತು ಆತ ತನ್ನ ಬದುಕಿನ ಹಲವು ಸಂಗತಿಗಳನ್ನು ಹಂಚಿಕೊಂಡ. ಆತ ಒಂಟಿಯಾಗಿ ಹಾಲಂಡಿಗೆ ಬಂದಿದ್ದ. ಮತ್ತು ಆತನ ತಾತನ ಮನೆಯಲ್ಲಿದ್ದಾನೆ. ಆತನ ಪೋಷಕರು ಬ್ರೆಜಿಲ್‌ನಲ್ಲಿರುವರು.

ಹ್ಯಾರಿಗೆ ಫ್ಯಾನಿ ಎಂಬ ಗೆಳತಿ ಇದ್ದಳು. ಆಕೆ ನನಗೂ ಕೂಡಾ ಗೊತ್ತು. ತೀರಾ ಮೃದು ಮತ್ತು ಪೇಲವ ಜೀವಿ. ಈಗ ನನ್ನನ್ನು ಭೆಟಿಯಾದಂದಿನಿಂದ ಆತನಿಗೆ ಫ್ಯಾನಿಯೊಂದಿಗಿನ ಕ್ಷಣಗಳೆಲ್ಲ ಹಗಲುಗನಸಿನಂತೆ ಎಂದು ಅನ್ನಿಸುತ್ತಿದೆ.

ಆತನನ್ನು ಸದಾ ಚುರುಕಾಗಿಡುವ ಉದ್ದಿಪನದಂತೆ ನಾನು ಆತನಿಗೆ ಕಾಣುತ್ತೇನಂತೆ. ಒಂದೊಂದು ಸಲ ನಾವೆಲ್ಲ ನಮ್ಮದೇ ಆದ ವಿಲಕ್ಷಣತೆ ಹಾಗೂ ಬೆಲೆ ಹೊಂದಿರುತ್ತೇವೆ ಎಂಬುದು ನಿನಗೂ ಗೊತ್ತಲ್ಲ.

ಶನಿವಾರ ರಾತ್ರಿ ಜೋಪಿ ಜೊತೆಗೆ ಮಲಗಿದಳು. ಆದರೆ ರವಿವಾರ ಆಕೆ ಲೀಸ್‌ಳ ಕಡೆಗೆ ಹೋದಳು. ನನಗೆ ಕೆಟ್ಟ ಬೋರಾಗಿತ್ತು. ಹ್ಯಾರಿ ಸಂಜೆ ಬರುವವನಿದ್ದ. ಆದರೆ ಸಂಜೆ ಆರಕ್ಕೆ ಫೋನಾಯಿಸಿದ. ನಾನೇ ರಿಸೀವ್ ಮಾಡಿದೆ. .ಆತನೆಂದ ನಾನು ಹ್ಯಾರಿ ಗೋಲ್ಡಬರ್ಗ, ಆನಿಯೊಂದಿಗೆ ಮಾತನಾಡಬಹುದೇ ದಯವಿಟ್ಟು?
ಹಾ. ಹ್ಯಾರಿ, ನಾನು ಆನ್ ಮಾತಾಡುತ್ತಿರುವೆ
ಹಲೋ , ಆನ್ ಹೇಗಿದ್ದಿ?
ಚೆನ್ನಾಗಿರುವೆ! ಥಾಂಕ್ಯೂ.
ಈ ಸಂಜೆ ನಾನು ಬರಲಾರೆ ದಯಮಾಡಿ ಕ್ಷಮಿಸು, ಆದರೆ ನಿನ್ನೊಂದಿಗೆ ಮಾತನಾಡಬಯಸುವೆ. ಇನ್ನು ಹತ್ತು ನಿಮಿಷಗಳಲ್ಲಿ ಅಲ್ಲಿಗೆ ಬಂದರೆ ಆಗಬಹುದಲ್ಲವೇ?
ಹಾ. ಹಾಗೇ ಮಾಡು. ಗುಡ್ ಬೈ
ಗುಡ್ ಬೈ. ಸ್ವಲ್ಪ ಹೊತ್ತಿಗೆ ನಿನ್ನೊಂದಿಗಿರುವೆ
ಆತ ರಿಸೀವರ್ ಕೆಳಗಿಟ್ಟನು.
ನಾನು ಬೇಗನೇ ನನ್ನ ಫ್ರಾಕ್‌ನ್ನು ಬದಲಾಯಿಸಿದೆ. ಕೂದಲು ಕೊಂಚ ಬಾಚಿ ಒಪ್ಪಗೊಳಿಸಿದೆ. ನಂತರ ಕಿಟಕಿಯ ಬದಿ ಆತನ ದಾರಿ ಕಾಯುತ್ತ ಕೂತೆ. ಕೊನೆಗೂ ಆತ ಬರುವುದು ಕಾಣಿಸಿತು. ಆತನನ್ನು ಕಂಡ ತಕ್ಷಣ ನಾನು ಉದ್ರೇಕದಿಂದ ಕೆಳಗೋಡಿ ಹೋಗಲಿಲ್ಲ. ಬದಲಿಗೆ ಆತ ಕರೆಗಂಟೆ ಒತ್ತುವವರೆಗೂ ತಾಳ್ಮೆಯಿಂದ ಕಾದೆ. ಆನಂತರ ಕೆಳಹೋದೆ. ಬಾಗಿಲನ್ನು ತೆರೆಯುತ್ತಿದ್ದಂತೆ ಆತ ಖುಷಿಯಲ್ಲಿ ಒಳನುಗ್ಗಿ ಬಂದ.
ಆನ್ ನೀನಿನ್ನೂ ತುಂಬಾ ಚಿಕ್ಕವಳಾದ ಕಾರಣ ನನ್ನೊಂದಿಗೆ ನೀನು ಸತತವಾಗಿ ಹೊರಹೋಗುವುದು ಸರಿಯಲ್ಲವೆಂಬಂತೆ ನನ್ನ ಅಜ್ಜಿ ಯೋಚಿಸುತ್ತಾರೆ. ಮತ್ತು ಅದಕ್ಕೆ ನಾನು ಲೆಯರ್ಸಗೆ ಹೋಗಬೇಕು. ಆದರೆ ನಾನು ಫ್ಯಾನಿಯೊಂದಿಗೆ ಇನ್ನೆಂದೂ ಹೊರಹೋಗುವುದಿಲ್ಲ ಎಂಬುದು ಬಹುಶಃ ನಿನಗೆ ಗೊತ್ತಲ್ಲ?

ಇಲ್ಲ, ಅದೇನು? ನೀವಿಬ್ಬರೂ ಜಗಳವಾಡಿದಿರೇ?

ಇಲ್ಲ, ಹಾಗೇನೂ ಇಲ್ಲ. ನಮಗಿಬ್ಬರಿಗೂ ಪರಸ್ಪರ ಹೊಂದಿಕೆಯಾಗುವುದಿಲ್ಲ. ಹಾಗಾಗಿ ಜೊತೆಯಾಗಿ ಹೊರಹೋಗುವುದನ್ನು ನಿಲ್ಲಿಸಿದರೆ ನಮ್ಮಿಬ್ಬರಿಗೂ ಒಳ್ಳೆಯದೆಂದು ನಾನು ಫ್ಯಾನಿಗೆ ಹೇಳಿದೆ. ಆದರೆ ಆಕೆಯನ್ನು ನಮ್ಮ ಮನೆಯಲ್ಲಿ ಯಾವಾಗಲೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಹಾಗೇ ನನಗೂ ಕೂಡಾ ಅವಳ ಮನೆಯಲ್ಲಿ ಸ್ವಾಗತ ಇರಬೇಕೆಂದು ಬಯಸುತ್ತೇನೆ. ಫ್ಯಾನಿ ಬೇರೊಬ್ಬ ಹುಡುಗನೊಂದಿಗೆ ತಿರುಗುತ್ತಿದ್ದಳು. ಆತನೂ ಹಾಗೆಯೇ ಅವಳನ್ನು ನೋಡಿಕೊಳ್ಳುತ್ತಿದ್ದ ಎಂದು ಯೋಚಿಸಿದ್ದೆ. ಆದರೆ ಅದು ಪೂರಾ ಸತ್ಯವಲ್ಲ. ಮತ್ತೀಗ ನನ್ನ ಅಂಕಲ್ ನನಗೆ ಫ್ಯಾನಿಯಲ್ಲಿ ಕ್ಷಮೆ ಕೇಳುವಂತೆ ಹೇಳುತ್ತಾರೆ. ಆದರೆ ಖಂಡಿತವಾಗಿ ನನಗದು ಆಗದು. ಅದಕ್ಕಾಗಿ ಆ ಸಂಬಂಧವನ್ನೇ ಮುರಿದುಕೊಂಡೆ. ಇದು ಹಲವು ಕಾರಣಗಳಲ್ಲಿ ಒಂದು ಮಾತ್ರ. ನನ್ನ ಅಜ್ಜಿ ನಾನು ನಿನ್ನೊಂದಿಗೆ ಹೊರ ಹೋಗುವುದಕ್ಕಿಂತ ಆಕೆಯೊಂದಿಗೆ ಹೋದರೆ ಖುಷಿಗೊಳ್ಳುವರು. ಆದರೆ ಅದು ನನಗಾಗದು. ಮುದುಕರು ಒಂದೊಂದು ಸಲ ಕೆಟ್ಟದಾದ ಹಳೆಯ ರೀತಿಯ ಯೋಚನೆಗಳನ್ನೆ ಹೊಂದಿರುತ್ತಾರೆ. ಅದರಲ್ಲಿ ಬೀಳಲು ನನ್ನಿಂದಾಗದು. ನನಗೆ ನನ್ನ ತಾತ ಅಜ್ಜಿಯರ ಅವಶ್ಯಕತೆ ಇದೆ. ಅವರಿಗೂ ನನ್ನ ಅಗತ್ಯವಿದೆ. ಈ ಕ್ಷಣದಿಂದ ನಾನು ಬುಧವಾರದ ಸಂಜೆಗಳಲ್ಲಿ ಫ್ರೀಯಾಗಿರುವೆ. ಅಧಿಕೃತವಾಗಿ ನಾನು ನನ್ನಜ್ಜನ ಖುಷಿಗಾಗಿ ಕೆತ್ತನೆ ಕೆಲಸದ ಪಾಠಗಳನ್ನು ಕಲಿಯಲು ಹೋಗುತ್ತೇನೆ. ಆದರೆ ನಿಜವಾಗಿ ನಾನು ಜಿಯೋನಿಷ್ಟ ಚಳುವಳಿಗಳ ಮೀಟಿಂಗಗಳಿಗೆ ಹೋಗುತ್ತೇನೆ. ನನ್ನಿಂದ ಅವರು ಅದನ್ನು ಎಣಿಸಿರಲಿಕ್ಕಿಲ್ಲ. ಯಾಕೆಂದರೆ ಅಜ್ಜಿ ತಾತ ಜಿಯೋನಿಷ್ಟರಿಗೆ ತೀರಾ ವಿರೋಧಿಯಾಗಿರುವರು. ನಾನೆಂದೂ ಮತಾಂಧಿಯಲ್ಲ. ಆದರೆ ಆ ಕಡೆಗೆ ವಾಲುತ್ತಲಿದ್ದೆ. ಅದು ಆಸಕ್ತಿಕರವಾಗಿ ಕಾಣಿಸಿತು. ಆದರೆ ಕ್ರಮೇಣ ಅದೊಂದು ಅವ್ಯವಸ್ಥೆಯ ಆಗರವಾಗಿದೆ. ಅದಕ್ಕೆ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದೆ. ಹಾಗಾಗಿ ಮುಂದಿನ ಬುಧವಾರ ಕೊನೆಯ ಸಲ ಹೋಗುವೆ. ಆನಂತರ ಬುಧವಾರದ ಸಂಜೆ, ಶನಿವಾರದ ಮಧ್ಯಾಹ್ನ, ರವಿವಾರದ ಮಧ್ಯಾಹ್ನ ಮತ್ತೂ ಹೆಚ್ಚು ಸಲ ನಾನು ನಿನ್ನನ್ನು ನೋಡಬಹುದು.

“ಆದರೆ ನಿನ್ನ ತಾತ ಅಜ್ಜಿಯರು ಇದನ್ನು ವಿರೋಧಿಸುವರಲ್ಲವೇ? ನೀನು ಅವರ ಹಿಂದೆ ಹೀಗೆ ಮಾಡಬಾರದು”

“ಪ್ರೀತಿಗೆ ಎಲ್ಲವೂ ಗೊತ್ತು”

ಆನಂತರ ನಾವು ಮೂಲೆಯಲ್ಲಿದ್ದ ಪುಸ್ತಕದಂಗಡಿಯೊಂದನ್ನು ದಾಟಿ ಹೋದೆವು. ಅಲ್ಲಿ ಪೀಟರ ವೆಸಲ್ ಇನ್ನಿಬ್ಬರೊಂದಿಗೆ ನಿಂತಿದ್ದ. ಎಷ್ಟೋ ವರ್ಷಗಳಲ್ಲಿ ಮೊದಲ ಬಾರಿಗೆ ನನ್ನನ್ನು ನೋಡಿ ಹಲೋ ಎಂದ. ನಾನು ನಿಜಕ್ಕೂ ಪುಳಕಿತಳಾಗಿದ್ದೆ.
ಹ್ಯಾರಿ ಮತ್ತು ನಾನು ನಡೆದು ನಡೆದು ಕೊನೆಗೆ ನಾಳೆ ಸಂಜೆಗೆ ಆತನ ಮನೆಯೆದುರು ಐದರಿಂದ ಏಳು ನಿಮಿಷಗಳ ಕಾಲ ಆತನನ್ನು ನಾನು ಭೇಟಿ ಮಾಡುವುದು ಎಂದುಕೊಂಡೆವು.

ನಿನ್ನ
ಆನ್
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...