ಒಮ್ಮೆ ಇಬ್ಬರು ಶಿಷ್ಯರು ಒಂದು ಹಗ್ಗವನ್ನು ಹಿಡಿದು ಎಳೆದಾಡುತ್ತ, ಏಳುತ್ತ ಆಡುತ್ತಿದ್ದರು. ಗುರುಗಳು ಅವರನ್ನು ಹತ್ತಿರಕ್ಕೆ ಕರೆದು ಇಬ್ಬರಿಗೆ ಒಂದೊಂದು ಕೊನೆಯನ್ನು ಹಿಡಿದು ಮರಕ್ಕೆ ಕಟ್ಟುವಂತೆ ಹೇಳಿದರು. ಮರದ ರಂಭೆಯಲ್ಲಿ ಎರಡು ಕೊನೆಗಳನ್ನು ಕಟ್ಟುವಾಗ ಗುರುಗಳು ಕೇಳಿದರು “ಆ ಗಂಟುಗಳು ಏನು ಗೊತ್ತೇ?” ಎಂದರು. ಶಿಷ್ಯರಿಗೆ ತಕ್ಷಣ ಹೊಳೆಯಲಿಲ್ಲ.

ಆಗ ಗುರುಗಳು ಹೇಳಿದರು “ನಿಮ್ಮ ಎರಡು ಗಂಟು ಜ್ಞಾನ, ಭಕ್ತಿಯ ಸಂಕೇತ. ಜ್ಞಾನ, ಭಕ್ತಿಯ ಸಂಯೋಗದಲ್ಲಿ ಇಹಪರಸಾಧನೆಯ ಉಯ್ಯಾಲೆ, ಉಯ್ಯಾಲೆ ಒಮ್ಮೆ ಮೇಲೆ ಹೋಗಿ ಮತ್ತೆ ಕೆಳಗೆ ಬರುವುದು. ಇಲ್ಲಿ ಇಹಪರದ ಸಮನ್ವಯವಿದೆ. ಈ ಎರಡು ಗಂಟುಗಳು ಬಿಗಿಯಾದಷ್ಟು ಉಯ್ಯಾಲೆ ತೂಗುವಾಗ ಆನಂದ ಪರಮಾನಂದ.” ಎಂದರು ಗುರುಗಳು.
*****