ಒಂದು ತಪೋವನ. ಅಲ್ಲಿ ತಪಸ್ವಿ ತನ್ನ ತಪಸ್ಸನ್ನೆಲ್ಲಾ ಧಾರೆಯೆರೆದು ಅದ್ಭುತ ಸಾಧನೆ ಮಾಡಿ ಚೈತ್ರ ವಸಂತನ ಸೆರೆಹಿಡಿದು ತನ್ನ ತಪೋವನದಲ್ಲಿ ವರ್ಷ ಇಡೀ ವಸಂತವೈಭವವನ್ನು ಪಡೆಯುತ್ತಾ ಬಂದಿದ್ದ. ಅವನಿಗೆ ಮನೋಲ್ಲಾಸವಾದರು ಗಿಡಮರಗಳು, ವೃಕ್ಷಗಳು ಚಿಗರೊಡೆದು, ಹೂಬಿಟ್ಟು ಬಳಲಿ ಹೋದವು. ಎಲೆಗಳು ಉದರಿ ತೌರುಮನೆಗೆ ಹೋಗ ಬಯಿಸಿದವು. ಕೋಗಿಲೆಗಳು ಹಾಡಿ-ಹಾಡಿ ದಣಿದವು.
ಇವನ ಸ್ವಾರ್ಥ ಅಹಂಕಾರ ನೋಡಿ ತಡೆಯಲಾರದ ದೇವರು ಒಂದು ದೊಡ್ಡ ಬಿರುಗಾಳಿ ಎಬ್ಬಿಸಿದ. ಹೂಗಳ ದಳಗಳು ಉದರಿದವು, ಚಿಗರು ಕನರಿ ಹೋಯಿತು, ಎಲೆ ಉದರಿ ಹಾರಿ ಹೋದವು. ವೃಕ್ಷದ ಶಾಖೆ ಮುರಿದು ಬಿದ್ದವು. ವೃಕ್ಷದ ಬೇರು ಬುಡಮೇಲಾಯಿತು. ಆಕಾಶದಲ್ಲಿ ಮೋಡಗಳು ಚದುರಿದವು, ಹಕ್ಕಿಗಳೆಲ್ಲಾ ಹಾಹಾಕಾರದಲ್ಲಿ ರೆಕ್ಕೆ ಪುಕ್ಕವಿಲ್ಲದೆ ತತ್ತರಿಸಿದವು. ಬಿರುಗಾಳಿ ತಂದ ಪ್ರಳಯ ತಪಸ್ವಿಯ ಕಣ್ಣಿಗೆ ಕವಿದ ಮೋಡವನ್ನು ಸರಿಸಿತು. ಋತು ವಸಂತನ ಸೆರೆ ಮಾಡುವ ಬದಲು ಋತು ಆಸರೆ ಮಾಡಿಕೊಂಡು ಪ್ರಕೃತಿಯಲ್ಲಿ ಸಹಬಾಳ್ವೆ ಮಾಡುವುದು ಸಹಜ ಸೂತ್ರವೆನಿಸಿತು.
*****