ಹರಿ ನಿನ್ನ ಕಂಗಳು ಬೆಳದಿಂಗಳು
ಹರಿ ನಿನ್ನ ರೂಪ ಚೈತನ್ಯ
ಹರಿ ನಿನ್ನ ಗಾನ ಅಮೃತವು
ಹರಿ ನಿನ್ನ ಸ್ಮರಣೆ ಅನನ್ಯ
ಕಣ್ಣು ಮುಚ್ಚಲಿ ತೆರೆದಿರಲಿ
ನೀ ನೋರ್‍ವನೆ ಕಾಣಿರಲಿ
ನನ್ನ ಎದೆಯ ಪ್ರಿಯಕರನಿ
ಎಂದೆಂದೂ ನೀನಾಗಿರಲಿ
ನಿನ್ನ ಮುರಲಿಗಾನ ಆಲಿಸಿರಲಿ
ರಾಧಾಳ ಪ್ರೀತಿ ಲಭಿಸಿರಲಿ
ಮೀರಾಳ ಗಾಯನ ನುಡಿಸಿರಲಿ
ನಿನ್ನ ದಿವ್ಯದಲಿ ತೇಲಿರಲಿ
ನೀನಿರದ ಎಲ್ಲವೂ ಬೇಡ
ನಿನ್ನ ಸಾಮಿಪ್ಯ ನನ್ನಗೆ ಸಲ್ಲ
ನಿನ್ನ ವದನಾರವಿಂದ ಚೆನ್ನವು
ಮಾಣಿಕ್ಯ ವಿಠಲನಾಗಿ ನೀನೆಲ್ಲ
*****