ಬರೆದವರು: Thomas Hardy / Tess of the d’Urbervilles
ರಾಜಕುಮಾರನು ಹೊರಟು ಹೋಗಿ ಇನ್ನೂ ಹದಿನೈದು ದಿನ ವಾಗಿಲ್ಲ. ನಾಯಕನು ಊಟ ಮುಗಿಸಿಕೊಂಡು ದಿವಾನಖಾನೆಯಲ್ಲಿ ಕುಳಿತಿದ್ದಾನೆ. ಮಾದಲದ ಹಣ್ಣು, ಉಪ್ಪು ಹೆಚ್ಚಿದ ಗೋಡಂಬಿ, ಎರಡೂ ತಟ್ಟಿಯಲ್ಲಿ ಎದುರಿಗಿವೆ. ಪೊಸ್ಟ್ ಬಂತು ಎಂದು ಮನೆವಾರ್ತೆ ನಂಜಪ್ಪನು ಬಂದು ಉದ್ದದ ಕವರುಗಳನ್ನು ತಂದಿಟ್ಟ. ಒಂದರ ಮೇಲೆ “ಹಿಸ್ ಮೆಜಸ್ಟ್ರೀಸ್ ಸರ್ವಿಸ್ ಎಂದಿದೆ.’ ಇನ್ನೊಂದರ ಮೇಲೆ “ಆನ್ ಮೈಸೂರ್ ಗವರ್ನ್ಮೆಂಟ್ ಸರ್ವಿಸ್’ ಎಂದಿದೆ ಎರಡೂ ಕಾನ್ಫಿಡೆನ್ಷಿಯಲ್ ಎಂದು ಗುರ್ತು ಆಗಿವೆ. ನಂಜಪ್ಪನು ನಾಯಕನ ಅಪ್ಪಣೆಯಿಂದ ಅವೆರಡನ್ನೂ ಒಡೆದನು. ಒಂದರಲ್ಲಿ “ವೈಸ್ರಾಯರು ತಮಗೆ ರಾವ್ಬಹದ್ದೂರು ಬಿರುದು ದಯಪಾಲಿಸಿದ್ದಾರೆ ಎಂದಿತ್ತು. ಮತ್ತೊಂದರಲ್ಲಿ “ಶ್ರೀಮನ್ಮಹಾರಾಜರು ತಮ್ಮನ್ನು ಈ ಸಲದ ವರ್ಧಂತಿಯ ದರ್ಬಾರಿಗೆ ಆಹ್ವಾನಿಸಬೇಕೆಂದು ವಿಶೇಷವಾದ ಅಪ್ಪಣೆ ಯನ್ನು ದಯಪಾಲಿಸಿದ್ದಾರೆ. ದರ್ಬಾರ್ ಭಕ್ಷಿ” ಎಂದಿತ್ತು.
ನಾಯಕನು ಆ ಕಾಗದಗಳನ್ನು ನೋಡುತ್ತಿರುವಾಗಲೇ ಮಲ್ಲ ಣ್ಣನೂ ಓಡಿ ಬಂದ: “ಬುದ್ಧಿ ತಮ್ಮ ಕರುಣ” ಎಂದು ಒಂದು ಕಾಗದವನ್ನು ತಂದು ಮುಂದಿಟ್ಟು ಅಡ್ಡ ಬಿದ್ದ.
ನಾಯಕನು “ಏನದು? ಮುಲಣ್ಣ ” ಎಂದು ಕೇಳಿದ.
“ಬುದ್ದಿ, ಅರಮನೆಯಿಂದ. ನಿರೂಪ ಬಂದದೆ. ಮಲ್ಲೀಗೆ ತಿಂಗಳಿಗೆ ಹತ್ತು ರೂಪಾಯಿ ಇನ್ನು ಹತ್ತು ವರುಷ ಕೊಡುತೀವಿ ಅಂತೆ ಬರದದೆ ಪಾದ!”
“ಯಾಕಂತೆ?”
” ಓದಿಸೋಕಂತೆ ಪಾದ!”
ನಾಯಕನಿಗೆ ಆ ದಿನದಮಾತು ನೆನೆಪಾಯಿತು. * ಸಂತೋಷ ಕಣಪ್ಪ ! ನಿಮ್ಮ ಮಲ್ಲಿ ಏನಂತಾಳೆ?
“ಮಲ್ಲಿ ಅಂತಾಳೆ. ಬುದ್ದಿಯೋರು ನನ್ನ ತೊಡೇಮೇಲೆ ಕೂರಿಸಿ ಕೊಂಡರು. “ಆದಕ್ಕೆ ಇದೆಲ್ಲಾ: ಬುದ್ಧಿಯೋರ ಮನೆಗೇ ಹೋಯ್ತೀನಿ ಅಂತಾಳೆ. ”
“ಹಂಗಾದರೂ ಮಾಡು. ಹೋಗಲಿ, ”
“ಮಲ್ಲಿ ಎನಾದರೂ ಗಂಡುಮೊಗವಾ ? ಎಂದಾದರೂ ಯಾರ ಮನೆಗಾದರೂ ಕಳಸಲೇಬೇಕು. ಪಾದ!”
ಆ ಮಾತಿನಲ್ಲಿ ನಾಯಕನಿಗೆ ಏನೋ ಸಂತೋಷವಾಯಿತು. ಆದರೂ “ಇನ್ನೇನು ಮಲ್ಲಣ್ಣ ಹೋಗಿ ಮಲ್ಲೇಗೌಡನಾದೆಯಲ್ಲೋ ! ಅರಮನೆಯಿಂದ ತಿಂಗಳಿಗೆ ಹತ್ತು ರೂಪಾಯಿ! ಯಾರಿಗುಂಟು ಯಾರಿಗಿಲ್ಲ! ಏನು ನಂಜಪ್ಟ್ಪ !”
“ಹೌದು ಬುದ್ದಿ; ರೂಪಾಯಿಗಿಂತ ಅರಮನೆ ಮರ್ಯಾದೆ ! ಅದು ನಿಜವಾಗಿಯೂ ಒಳ್ಳೇ ನಸೀಬು!”
“ನಾವು ಆ ಅರಮನೆ ಕಾಣೋ! ನಾವು ಕಂಡಿರೋದು ಈ ಅರಮನೆ! ಮಲ್ಲಿ ಹಣೆಬರೆಹ ಚೆನ್ನಾಗಿದ್ದು, ಬುದ್ದಿಯವರು ನಮ್ಮನ್ನ ಕಣ್ಣು ಬಿಟ್ಟು ನೋಡಿದರೆ, ಮಲ್ಲೀಗೆ ಈ ಹತ್ತು ರೂಪಾಯೇನಾ! ಒಂದು ಅರಮನೆ ಆಗೋಳಿಲ್ವಾ ?”
ಆ ಮಾತು ಕೇಳಿ ನಾಯಕನಿಗೆ ಏನೋ ಒಳಗೆ ಗುಟ್ಟಾಗಿ ಬೆಕ್ಕು ಕೆರೆದ ಹಾಗಾಯಿತು. “ಯಾವಾಗ ಇವನು ನನ್ನ ಮನಸ್ಸಿ ನಲ್ಲಿರುವುದನ್ನು ಕಂಡು ಕೊಂಡನೋ!” ಎಂದು ಕೊಂಚ ಗಾಬರಿಯಾಯಿತು. ಆದರೆ ಆ ಗಾಬರಿ ನಾಯಕನ ಮನಸ್ಸಿನ ಧೀರ ತನದಲ್ಲಿ ಗಂಗೆಯಲ್ಲಿ ತೇಲಿದ ಇಂಗಿನಂತಾಯಿತು. *****
*****
ಮುಂದುವರೆಯುವುದು