“ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಹೆಂಡತಿಗಿಂತಲೂ ಅಧಿಕವಾಗಿ ಪ್ರೀತಿಸುವರಿದ್ದಾರೆ.”
“ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಮಗು ಅಷ್ಟೇ ಏಕೆ ಪತಿರಾಯನಿಗಿಂತಲೂ ಹೆಚ್ಚು ಕಾಳಜಿ ಮಾಡುವ ಪ್ರೀತಿಸುವವರಿದ್ದಾರೆ.”
“ನನ್ನ ಆಪ್ತ ಸ್ನೇಹಿತರಿಗಿಂತಲೂ ಅಧಿಕವೆಂದು ನಾನು ಸ್ಮಾರ್‍ಟ್ ಫೋನನ್ನು ನಂಬಿದ್ದೇನೆ”- ಹೀಗಾದರೆ ಮುಂದಿನ ಗತಿ? ಬರುಬರುತ್ತಾ ಮಾನವೀಯ ಸಂಬಂಧಗಳ ಗತಿ ಏನು? ನಾವೆತ್ತ ಸಾಗಿದ್ದೇವೆ??
ಇತ್ತೀಚೆಗೆ ಜಾಗತಿಕ ಸಾರ್‍ವಜನಿಕ ಅಭಿಪ್ರಾಯ ಸಂಶೋಧನಾ ಸಲಹಾ ಸಮಿತಿ ಅಂತರ್‍ಜಾಲದ ಮೂಲಕ ಈ ಸಮೀಕ್ಷೆ ಕೈಗೊಂಡಿತ್ತು! ಆಗಸ್ಟ್ ೨೦೧೫ರಲ್ಲಿ ಮೊಟೊರೊಲಾ ಕಂಪನಿ ನಡೆಸಿದ ಈ ಸಮೀಕ್ಷೆಯಲ್ಲಿ ಸುಮಾರು ಏಳು ಸಾವಿರ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಮಗ್ರ ಅಧ್ಯಯನವೊಂದನ್ನು ಸಿದ್ಧಗೊಳಿಸಿದೆ.
ಅದರ ಪ್ರಕಾರ ಭಾರತೀಯರು ಅನೇಕರು ಸ್ಮಾರ್‍ಟ್‌ಫೋನಿನಲ್ಲೇ ಮಗ್ನರಾಗುತ್ತಿದ್ದಾರೆನ್ನುವ ವಿಚಾರ ಒಂದೆಡೆಯಾದರೆ ಮತ್ತೊಂದೆಡೆ ಅದು ಕೆಲವರ ಹಾಸಿಗೆಯ ಸಂಗಾತಿಯೆಂದು ಹೇಳಿಕೊಂಡಿದ್ದಾರೆ!
ಹೌದು! ಇದು ತುಸು ಅತಿರೇಕವೆನಿಸಿದರೂ ನಿಜದ ಸಂಗತಿ ಎನ್ನುತ್ತಿದೆ ಇತ್ತೀಚೆಗೆ ಬಿಡುಗಡೆಯಾದ ಸೆವೆನ್ ಕಂಟ್ರಿ ಸಮೀಕ್ಷಾ ವರದಿ.
ಸ್ಮಾರ್‍ಟ್‌ಫೋನ್‌ನೊಂದಿಗೆ ಏಕಾಂತವಾಗಿ ಕಾಲ ಕಳೆಯಲು ಅನೇಕರು ತಮ್ಮ ತಂದೆತಾಯಿ, ಅಕ್ಕತಂಗಿ, ಹೆಂಡತಿ, ಮಕ್ಕಳನ್ನು ತಮ್ಮ ಗುರುಗಳನ್ನು ದೂರ ಮಾಡಿಕೊಳ್ಳಲು ಸಿದ್ಧರಾಗಿರುವರು!
ಶೇಕಡಾ ೬೦%ರಷ್ಟು ಜನರು ಸ್ಮಾರ್‍ಟ್‌ಫೋನ್ ಕೈಯಲ್ಲಿಡಿದು ಪಕ್ಕದಲ್ಲಿಟ್ಟುಕೊಂಡು ಮಲಗುವುದಾಗಿ ಹೇಳಿಕೊಂಡಿದ್ದಾರೆ.
ಸ್ನಾನ, ಊಟ, ತಿಂಡಿ ಮಾಡುವಾಗಲೂ ಫೋನ್ ಇರಬೇಕೆಂದೂ ಆರರಲ್ಲಿ ಒಬ್ಬರು ಸಾರಿಕೊಂಡಿದ್ದಾರೆ, ಎಂಥಾ ಅಪಾಯ ಸಂದರ್‍ಭಗಳಾದ ಡ್ರೈವಿಂಗ್, ಈಜು, ಸೈಕಲ್, ಆಟ ಇತ್ಯಾದಿ ವೇಳೆಯಲ್ಲಿ ನಮ್ಮ ಗಮನ ಫೋನ್ ಕಡೆಗೇ ಹೇಗುವುದೆಂದೂ ಶೇಕಡಾ ೫೪% ರಷ್ಟು ಜನರು ಸಾರಿರುವರು!
ಇನ್ನು ಶೇಕಡಾ ೪೦% ರಷ್ಟು ಜನರು ಕೆಲವು ರಹಸ್ಯಗಳು, ಅಂಕಿಅಂಶಗಳು, ಫೋಟೋಗಳು, ತಂತ್ರಕುತಂತ್ರ, ವೈಯಕ್ತಿಕ ತಾಣಗಳು ಅಲ್ಲಿವೆ. ಹೀಗಾಗಿ ಜೀವದ ಗೆಳೆಯನಿಗಿಂತಲೂ ಜೀವದ ಸ್ಮಾರ್‍ಟ್‌ಫೋನ್ ಮುಂದಿನ ಮಾಯಜಾಲವೆಂದು ಬಹಿರಂಗ ಪಡಿಸಿರುವರು.
ಭವ್ಯಭಾರತದ ಜನವೆಲ್ಲ ಹೀಗಾದರೆ ಮುಂದಿನ ಗತಿ…?!
*****