ಯಾಕೆ ಗುಂಡು ಗಜಗದಾಟ
ನಮ್ಮ ನಾವು ಮರೆತೆವೆ
ಯಾಕೆ ರಕ್ತ ರುಂಡ ಮುಂಡ
ನಮ್ಮ ಮನೆಯ ಸುಟ್ಟೆವೆ
ನೋಡು ಒಂದೆ ನೀಲ ಗಗನ
ಒಂದೆ ತಾಯಿ ಧರಣಿಯು
ಒಂದೆ ಕುಲವು ಮನುಜ ನೆಲವು
ಯಾಕೆ ಗಡಿಗಿ ಭರಣಿಯು
ನಾವು ಹೂವು ಹಸಿರು ಹಕ್ಕಿ
ನಾವು ನಗುವ ಮಕ್ಕಳು
ನಾವು ಚುಕ್ಕಿ ಚಂದ್ರ ತಾರೆ
ನಾವು ಮನೆಯ ಮಕ್ಕಳು
ಪಕ್ಷಿಯಾಗಿ ದೂರ ಗಗನ
ಗಡಿಯ ಆಚೆ ಹಾರಲೆ
ಗಾಳಿಯಾಗಿ ದೇಶ ದಾಚೆ
ಸೀಮೆಯಾಚೆ ಸೇರಲೆ
*****