ಹಕ್ಕೀ ವೋಡ್ಸೂ ನೆವನಾ ಮಾಡಿ ಕವಣೀ ಬೀಸಿದ್ಯಾ?
ಚಿಕ್ಕಾ ಹುಡಗೀ ಮಾತ ಕೇಳಿ ನಾಟಾ ಹೂಡಿದ್ಯಾ? ||೧||
ನವಲಾ ಬಂತೋ ನವಲಾ ನಮ ಸೋಗಿ ಬಣ್ಣದ ನವಲಾ
ನವಲಾ ಬಂದರೆ ಬರಲೀ ನಮ್ಮಗೆ ವಜ್ರದ ಬಣ್ಣದ ನವಲಾ ||೨||
ಸುಗ್ಗೀ ಸರ್‍ವತ್ತಾದಲ್ಲಿ ಹೂವಿನಂತಾ ಪಾರವಾ
ನಮ್ಮ ನಿಮ್ಮ ನಾಮದಿಂದ ಕೋಲ ಸಿಂಗಾರಾಡವಾ ||೩||
ಕರಿಯಾ, ಯೇರಿಯ ಮೇನೇ | ಬಿಳಿಯಾ ಸೋಳಿಯ ಕಂಡಾ
ಇಳಿಯಾ ಬೇಕಂದಾ ಕೊದುರಿಯಾ | ಲಾ ಜಾಣಾ
ವಲ್ಲೀ ಬೀಸದರಾ ಕರಿಯಂದಾ ||೪||
*****
ಹೇಳಿದವರು: ಬುದ್ದು ಗೌಡ, ಬಿಣಗಾ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.