ಆತ್ಮ ಪೂಜೆ

ಬದುಕಿನಲಿ ನಿ ಒಂಟಿಯಾಗು
ಸತಿ ಸುತರೆಲ್ಲ ನಿನ್ನ ಬಂಧಿ ಯಾಗದಿರಲಿ
ನೀನು ಹೃದಯದಲಿ ಮಡಿವಂತನಾಗು
ಹಗಲಿರುಳು ದೇವ ನುಡಿ ನುಡಿಯಲಿ

ಯಾವ ಜನುಮದಿ ಎಂಥವರೊ ನಿನಗೆ
ನಾಳಿನ ಬಾಳಿಗೊ ಇನ್ನಾರೊ ಯಾರೋ
ಇಂದಿನ ಕ್ಷಣಗಳಲಿ ಸಾರ್‍ಥಕವಾಗಲು
ನಿತ್ಯ ಶುದ್ಧಮನದ ತಿದ್ದು ಬಾರೊ

ಪಾಪ ಪುಣ್ಯಗಳ ಹೋರಾಟ ಆಟ
ಜನುಮ ಜನುಮಗಳಿಗೂ ಸಾಟಿ
ಕ್ಷಣದ ಬಾಳಿಗೆ ಎಷ್ಟೊ ವಂಚನೆ
ಆತ್ಮ ಆನಂದಕ್ಕೆ ಇನ್ನೆಷ್ಟು ಖಟಿಪಿಟಿ

ಕೋಟಿ ಜನುಮಗಳನುಭವಿಸಿ
ಮತ್ತೆ ಈ ನರಜನ್ಮ ಪಡೆದೆ
ಮತ್ತೆಯೂ ಹಳೆಯದೆ ರಾಗ
ಆಯುಷ್ಯ ಮುಗಿದಾಗ ನಡೆದೆ

ಮನವು ತನುವು ಶುದ್ಧವಾಗಲಿ
ಭಾವವು ನಿತ್ಯ ಪವಿತ್ರವಾಗಲಿ
ಕಷ್ಟ ನಷ್ಟ ಸುಖಗಳ ಮಧ್ಯ
ಮಾಣಿಕ್ಯ ವಿಠಲ ಸರ್‍ವತ್ರವಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨೦
Next post ಪಾಪಿಯ ಪಾಡು – ೨೩

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…