ಬ್ಯಾಕ್ಟಿರಿಯಾಗಳು ಮನುಷ್ಯನ ದೇಹಕ್ಕೆ ಎಷ್ಟು ಪ್ರಯೋಜನವೋ ಅಷ್ಟೇ ಅಪಾಯಕಾರಿಗಳು ನಿಜ. ಕೆಲವು ಸಲ ಭಯಂಕರ ಕಾಯಿಲೆಗಳಿಗೆ ಕಾರಣವಾಗುವ ಇವುಗಳಿಂದಲೇ ಮಾನವನ ಆಹಾರವಸ್ತುಗಳ ಅಂಗಾಗಳಾಗಿಯೂ ಉಪಕರಿಸುತ್ತದೆ. ದೋಸೆ, ಇಡ್ಲಿ, ಬ್ರೆಡ್, ಮೊಸರು, ಬೆಣ್ಣೆ, ಗಿಣ್ಣು ಕಾಫಿ, ಟೀ, ವೈನು ಮತ್ತು ಉಪ್ಪಿನಕಾಯಿ ಇತ್ಯಾದಿಗಳ ತಯಾರಿಕೆಗೆ ಸೂಕ್ಷ್ಮ ಜೀವಿಗಳೇ ಮೂಲಕಾರಣವಾಗುತ್ತವೆ. ಜಾನುವಾರುಗಳ ಮೇವಾದ ಜೋಳ, ಹುಲ್ಲಿಗೂ ಸೂಕ್ಷ್ಮ ಜೀವಿಗಳೆ ಆಧಾರವಾಗುತ್ತವೆ. ದೊಸೆಹಿಟ್ಟನ್ನು ರುಬ್ಬಿದೊಡನೆ ಹಿಟ್ಟನ್ನು ಕಾವಲಿಯ ಮೇಲೆ ಚುಂಯ್ ಎಂದು ಬಿಡುವುದು ಸರಿಯಲ್ಲವೆಂದು ಗೊತ್ತು. ದೋಸೆಯ ಹಿಟ್ಟನ್ನು ಬೇಯಿಸಿ ಚೆನ್ನಾಗಿ ಹುಳಿಸಬೇಕು. ಇದರಿಂದ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳು ಹಿಟ್ಟಿನಲ್ಲಿ ಬೆರೆತು ಇಂಗಾಲದ ಡೈ ಆಕ್ಸೈಡನ್ನು ಉತ್ಪತ್ತಿ ಮಾಡುತ್ತವೆ. ಕಾವಲಿಯ ಮೇಲೆ ಹಿಟ್ಟನ್ನು ಹಾಕಿದಾಗ ಇಂಗಾಲದ ಡೈ ಆಕ್ಸೈಡ್ ಹಿಟ್ಟಿನಿಂದ ಹೊರಬರುತ್ತವೆ. ಇದರಿಂದಾಗಿ ದೋಸೆಗಳಲ್ಲಿ ತೂತುಗಳು ಏಳುತ್ತವೆ. ಹೀಗಾದಾಗಲೇ ದೋಸೆ ಮತ್ತು ಇಡ್ಲಿಯ ರುಚಿ ಹೆಚ್ಚಾಗುತ್ತದೆ.
ನಾವು ತಿನ್ನುವ ಬ್ರೆಡ್‌ಗೆ (ತಯಾರಿಕೆಯಲ್ಲಿ) ಯೀಸ್ಟ್ (Yeast) ಎಂಬ ಸೂಕ್ಷ್ಮ ಜೀವಿಗಳೇ ಆಧಾರ. ಯೀಸ್ಟ್ ಬ್ಯಾಕ್ಚೀರಿಯಾಗಳೊಂದಿಗೆ ಹಿಟ್ಟನ್ನು ಕಲಸಿಟ್ಟಾಗ ಅವು ಪಿಷ್ಟ ವಸ್ತುಗಳನ್ನು ಹೀರಿಕೊಂಡು ಕಣಗಳನ್ನು ಉತ್ಪತ್ತಿಮಾಡುತ್ತವೆ. ಇಂಗಾಲದ ಡೈ ಆಕ್ಸೈಡ್ ಈ ಕ್ರಿಯೆಯಲ್ಲಿ ಉತ್ಪತ್ತಿಯಾಗುವುದರಿಂದ ಬ್ರೆಡ್ ಉಬ್ಬಿಕೊಳ್ಳುತ್ತದೆ. ಅಲ್ಲದೇ ಲ್ಯಾಕ್ಟಿಕ್ ಬ್ಯಾಸಿಲೈ, ಎಂಬ ಸೂಕ್ಷ್ಮ ಬ್ಯಾಕ್ಟೀರಿಯಾಗಳು ಸಕ್ಕರೆ ವಸ್ತುಗಳನ್ನು ಆಮ್ಲವಾಗಿ ಪರಿವರ್‍ತಿಸುತ್ತವೆ. ಬಿ ಅನ್ನಾಂಗಗಳು ಅಧಿಕವಾಗಿರುವ ಬ್ರೆಡ್ ಸುಲಭವಾಗಿ ಜೀರ್‍ಣವಾಗುತ್ತದೆ. ಮೊಸರಿನಲ್ಲಿ ಸಹ ಲ್ಯಾಕ್ಟಿಕ್ ಆಮ್ಲದ ಸೂಕ್ಷ್ಮ ಜೀವಿಗಳು ಅಧಿಕವಾಗಿರುತ್ತವೆ. ಹಾಲಿಗೆ ಹೆಪ್ಪು ಹಾಕಿದಾಗ ಈ ಬ್ಯಾಕ್ಟೀರಿಯಾಗಳ ಸಹಾಯದಿಂದಲೇ ಹಾಲು ಹೆಪ್ಪಾಗಿ ಮೊಸರಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿವಾಗಿರುವ ಗಿಣ್ಣವನ್ನು ಮಾಗಿಸಲು ಪೆನಿಸಿಲಿಯಂ ಹಾಗೂ ಇತರ ಬ್ಯಾಕ್ಟೀರಿಯಾಗಳು ಸಹಕರಿಸುವವು ಅಲ್ಲದೇ ಅದಕ್ಕೆ ಒಂದು ಬಗೆಯ ಸುವಾಸನೆಯನ್ನು ನೀಡುತ್ತವೆ. ಕಾಫೀ, ಟೀ, ಮೊದಲಾದ ತಯಾರಿಕೆಯಲ್ಲಿಯೂ ಸೂಕ್ಷ್ಮಜೀವಿಗಳ ಪಾತ್ರ ಹೆಚ್ಚಾಗಿರುತ್ತದೆ. ಕಾಫೀ ಬೀಜವನ್ನು ಗಿಡದಿಂದ ಕಿತ್ತ ಮೇಲೆ ಅದರ ಮೇಲಿನ ಸಿಪ್ಪೆಯನ್ನು ತೆಗೆಯಲು ಬ್ಯಾಕ್ಟೀರಿಯಾಗಳು ಸಹಕಾರಿಯಾಗುತ್ತವೆ. ಟೀ, ಎಲೆಗಳನ್ನು ಶುದ್ಧಗೊಳಿಸುವಾಗ ಬ್ಯಾಕ್ಟೀರಿಯಾಗಳು ಸಹಕಾರಿಯಾಗುತವೆ. ಟೀ ಗೆ ಸುವಾಸನೆ ಒದಗಿಸಲು ಬಾಕ್ಟೀರಿಯಾಗಳೇ ಕಾರಣವಾಗುತ್ತವೆ.
ದ್ರಾಕ್ಷಿಯ ರಸದಿಂದಾಗುವ ವೈನ್, ತಯಾರಿಕೆಯಲ್ಲಿ ದುಂಬಿಯ ಪಾತ್ರ ಬಹು ಮುಖ್ಯ. ದುಂಬಿಯು ದ್ರಾಕ್ಷಿಯ ಬಳ್ಳಿಯಿಂದ ಬಳ್ಳಿಗೆ ಸೂಕ್ಷ್ಮಜೀವಿಗಳನ್ನು ಕೊಂಡೊಯುತ್ತದೆ. ಇದರಿಂದ ದ್ರಾಕ್ಷಿರಸದಲ್ಲಿ ಒಂದು ಬಗೆಯ ಯೀಸ್ಟ್, ಇದ್ದೇ ಇದು ಹುಳಿಸುತ್ತದೆ. ಈ ಹುಳಿಸುವ ಬ್ಯಾಕ್ಟೀರಿಯಾಗಳಿಂದಾಗಿ ವೈನ್‌ಗೆ ಅಮಲಿನ ಅಂಶಕೂಡಿಕೊಳ್ಳುತ್ತದೆ.
ಹೀಗೆ ಜೀವನದಲ್ಲಿ ವ್ಯಕ್ತಿಬಳೆಸುವ ಅನೇಕ ಆಹಾರ ಪದಾರ್ಥಗಳು ತಯಾರಾಗುವಲ್ಲಿ ಈ ಸೂಕ್ಷ್ಮಜೀವಿಗಳು ಮಹತ್ವದ ಪಾತ್ರವಹಿಸಿ ಆಹಾರ ತಯಾರಿಕೆಯಲ್ಲಿ ಗುಪ್ತಗಾಮಿನಿಯಾಗಿ ಉಪಕಾರ ಮಾಡುತ್ತವೆ.
*****