ಸಾಫಲ್ಯ ಜೀವನ

ಜೀವನದ ಗುರಿ ಸಾಫಲ್ಯವಾಗಲಿ
ಜೀವನಕ್ಕೊಂದು ಶುಚಿತ್ವ ಇರಲಿ
ಮಲಿನತೆ ಸ್ವಾರ್‍ಥ ವಿಷ ಜಂತು
ಯಾವ ಭಾಗದಿಂದಲೂ ಬೇಡ ಇನಿತು

ಮನದ ವಿಕಾರತೆ ತ್ಯಾಗಿಸು
ದೇವರ ಸಾಕ್ಷಾತ್ಕಾರದತ್ತ ಸಾಗಿಸು
ಹೃದಯವು ವಿರಾಗ ಭಾವದಿ ಹೊಳೆಯಲಿ
ಮನವು ತ್ಯಾಗ ಭಾವದಿ ತೊಳೆಯಲಿ

ಸುತ್ತಲೂ ಹೋರಾಡುತ್ತಿವೆ ವಿಷಯ
ವಿಷಯಗಳಲ್ಲ ವಿಷದ ಪೌರುಷವು
ಮುನ್ನ ಮಾಡಿದುಕ್ಕೆ ಈಗ ಅನುಭವಿಸಿ
ಕುಟಿಲತೆ ಇರದ ಶುಬ್ರನಾಗಿಸು ಜೀವಿಸಿ

ಒಂದೊಂದು ಉದಯಿಸಿದ ದೂರ ಭಾವವು
ಒಂದೊಂದು ಜನುಮಕ್ಕೆ ಕಾರಣವು
ಒಂದೊಂದು ಶಿವಗುಣ ನಿನ್ನನ್ನು
ಪಾಪತೊಳೆದು ಮಾಡುವುದು ಪಾವನವು

ನಿನಗಾಗಿ ದೇವನು ಕಾತರಿಸಿಹನು
ನೀನು ಕರೆದರಾಯ್ತು ಓಡಿ ಬರುವನು
ನಿನ್ನ ಪಾಪಕರ್‍ಮ ನಾಶ ಪಡಿಸುವನು
ನಿನ್ನ ಮಾಣಿಕ್ಯ ವಿಠಲನಾಗಿಸುವನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೬
Next post ಪಾಪಿಯ ಪಾಡು – ೧೯

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…