ಧ್ಯಾನ ಧ್ಯಾನ ನಿನ್ನ ದಿವ್ಯಧ್ಯಾನ
ನಿನ್ನೊಂದೆ ಸ್ಮರಣಿ ನನ್ನ ಜ್ಞಾನ
ಬಣ್ಣ ಬಣ್ಣದ ನೋಟ ಎನಿತೆನಿತು
ಬೆಂಕಿ ಕಿಡಿಗಳಾಗಿ ಬಾಳಿನ ಅಜ್ಞಾನ
ಹುಡುಕಾಟ ಹುಡುಕಾಟ ನಿತ್ಯವು
ಯಾವುದನ್ನು ಪಡೆಯಲೊ ಕಾತರ
ಅನೇಕ ಜನುಮಗಳ ಸ್ವಾನುಭವ ಮನಕ್ಕೆ
ಅಂತಲೆ ಚಂಚಲ ಅತೀ ಆತುರ
ಬಹಿರ್‍ಮುಖ ಇಂದ್ರಿಯಗಳು ಬಯಲು
ಸೌಖ್ಯದ ದಾರಿಯಡೆಗೆ ನಿತ್ಯ ಅಹವಾಲು
ನೆಮ್ಮದಿ ಸುಖವು ಆರೆಸಿದವರಾಯ್ತು
ಅಷ್ಟೇ ಪಾಪವು ಬುತ್ತಿ ಗಂಟಾಯ್ತು
ನಿನ್ನೊಳಗೆ ಇಣಕದೆ ಸುತ್ತಿದರೇನು
ಭೂಮಿ ಫಲವತ್ತಾಗಿ ಬೀಜವಿಲ್ಲದಡೇನು
ಭೂಮಿ ಬಿಜ ಇದ್ದು ಬಿತ್ತದಿದ್ದೇನು
ಬಾಳೇ ವ್ಯರ್‍ಥವು ಆಗಲಾರದೇನು!
ನಿನಗೆ ಹೇಳದೆ ಬರುವ ಮೃತ್ಯು
ಯಾವ ಕ್ಷಣದಲ್ಲೊ ನಿನ್ನ ನಾಶಪಡಿಸದೇನು
ಆಚೆ ತಳ್ಳು ಕ್ರಾಮಕ್ರೋಧದ ಮುಳ್ಳು
ಮಾಣಿಕ್ಯ ವಿಠಲನೆ ನಿನ್ನೊಳಗಿನ ಜೇನು!
*****